ನವದೆಹಲಿ,ಮಾ.2 – ಇಟಲಿ ಪ್ರಧಾನಿ ಜ್ವಾಜಿಯ ಮೆಲೋನಿ ಅವರು ಇಂದು ಭಾರತಕ್ಕೆ ಆಗಮಿಸಿದ್ದು, ಈ ಮೂಲಕ ಕಳೆದ ಐದು ವರ್ಷಗಳಲ್ಲಿ ಭಾರತಕ್ಕೆ ಆಗಮಿಸಿದ ಐರೋಪ್ಯ ರಾಷ್ಟ್ರಗಳ ಉನ್ನತ ನಾಯಕರಲ್ಲಿ ಮೊದಲಿಗರೆನಿಸಿಕೊಂಡಿದ್ದಾರೆ.
ಇಂದು ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೆಲೋನಿ ಅವರನ್ನು ಆರೋಗ್ಯ ಇಲಾಖೆಯ ರಾಜ್ಯ ಸಚಿವ ಭಾರ್ತಿ ಪವರ್ ಬರಮಾಡಿಕೊಂಡಿದ್ದಾರೆ. ಈ ಬಳಿಕ ರಾಷ್ಟ್ರಪತಿ ಭವನದಲ್ಲಿ ವಿದ್ಯುಕ್ತವಾಗಿ ಸ್ವಾಗತಿಸಲಾಯಿತು.
ಇವರೊಂದಿಗೆ ಇಟಲಿ ಮಾಜಿ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಆಂಟೋನಿಯ ತಜಾನಿ ಮತ್ತು ವ್ಯವಹಾರ ಪ್ರತಿನಿಧಿಗಳು ಭಾರತಕ್ಕೆ ಆಗಮಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿರುವ ಮೆಲೋನಿ. ಇಂದು ಸಂಜೆ ನಡೆಯಲಿರುವ ರೈಸಿನಾ ಸಂವಾದದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಅದಾನಿ ವಿರುದ್ಧ ತನಿಖೆಗೆ ಸಮಿತಿ ರಚಿಸಿದ ಸುಪ್ರೀಂ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮೆಲೋನಿ ದ್ವಿಪಕ್ಷಿಯ ಮಾತುಕತೆ ನಡೆಸಲಿದ್ದು, ಸ್ಥಳೀಯ ಮತ್ತು ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ವಿದೇಶಾಂಗ ಸಚಿವ ಜೈ ಶಂಕರ್ ಅವರ ಜೊತೆಗೂ ಮೆಲೋನಿ ಮಾತುಕತೆ ನಡೆಸಲಿದ್ದಾರೆ.
ಇಟಲಿ ವಿದೇಶಾಂಗ ಸಚಿವ ಆಂಟೋನಿಯೋ ತಜಾನಿ ಮತ್ತು ಭಾರತದ ವಾಣಿಜ್ಯ ಇಲಾಖೆಯ ಸಚಿವ ಪಿಯೋಷ್ ಗೋಯಲ್ ಅವರು ದುಂಡುಮೇಜಿನ ಸಭೆ ನಡೆಸಲಿದ್ದಾರೆ.
ಗೃಹ ಸಚಿವರ ಬೆಂಗಾವಲು ವಾಹನ ಡಿಕ್ಕಿ : ವ್ಯಕ್ತಿಸಾವು
ಭಾರತ ಮತ್ತು ಇಟಲಿ ತನ್ನ ಭಾಂದವ್ಯದ 75 ನೇ ವರ್ಷದ ಸಂಭ್ರಮಾಚರಣೆಯಲ್ಲಿ ರು ವ ಸಂದರ್ಭದಲ್ಲಿ ನಡೆದಿರುವ ಈ ಭೇಟಿಯು ಎರಡು ದೇಶಗಳ ನಡುವಿನ ಪರಸ್ಪರ ವಿನಿಮಯ, ರಪ್ತು, ಸಂಸ್ಕøತಿಯ ವಿಸ್ತರಣೆಗೆ ಸಹಾಯಕವಾಗಲಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
Italian, prime minister, Giorgia Meloni, arrives, India,