ಅರೆ ಬೆತ್ತಲೆ ಮಹಿಳೆಯಿಂದ ವಿಮಾನ ಸಿಬ್ಬಂದಿಗೆ ಕಪಾಳಮೋಕ್ಷ

Social Share

ಮುಂಬೈ,ಜ.31- ವಿಮಾನದಲ್ಲಿ ಅರೆಬೆತ್ತಲೆಯಾಗಿ ಓಡಾಡಿದ್ದಲ್ಲದೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ 45 ವರ್ಷದ ಇಟಾಲಿಯನ್ ಮಹಿಳೆಯನ್ನು ಸೋಮವಾರ ಬಂಧಿಸಲಾಗಿದೆ.

ವಿಸ್ತಾರಾ ಅಬುಧಾಬಿ-ಮುಂಬೈ ವಿಮಾನದ ಎಕಾನಮಿ ಕ್ಲಾಸ್ ಟಿಕೆಟ್ ಹೊಂದಿದ್ದ ಅರೆ ಬೆತ್ತಲಾಗಿದ್ದ ಪಾವೊಲಾ ಪೆರುಸಿಯೋ ಎಂಬ ಇಟಾಲಿಯನ್ ಮಹಿಳೆ ಬ್ಯುಸಿನೆಸ್ ಕ್ಲಾಸ್ ಕುಳಿತುಕೊಳ್ಳಲು ಒತ್ತಾಯಿಸಿದರು. ಇದನ್ನು ಪ್ರಶ್ನಿಸಲು ಹೋದ ವಿಮಾನ ಸಿಬ್ಬಂದಿಯೊಬ್ಬರಿಗೆ ಗುದ್ದಿದಲ್ಲದೆ ಮತ್ತೊಬ್ಬ ಸಿಬ್ಬಂದಿ ಮೇಲೆ ಉಗುಳಿ ಅನುಚಿತವಾಗಿ ವರ್ತಿಸಿದ್ದಾರೆ.

ಈ ಕುರಿತಂತೆ ವಿಮಾನ ಸಿಬ್ಬಂದಿಗಳು ನೀಡಿದ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಮಹಿಳೆಯ ಅನುಚಿತ ವರ್ತನೆ ನಿಲ್ಲಿಸುವಂತೆ ಕ್ಯಾಪ್ಟನ್ ಎಚ್ಚರಿಕೆ ನೀಡಿದರೂ ಯಾವುದೇ ಪ್ರಯೋಜನವಾಗದ ಕಾರಣ ಭದ್ರತಾ ಏಜನ್ಸಿಯವರಿಗೆ ಮಹಿಳೆ ಬಗ್ಗೆ ದೂರು ನೀಡಬೇಕಾಯಿತು ಎಂದು ವಿಮಾನ ಸಿಬ್ಬಂದಿಗಳು ತಿಳಿಸಿದ್ದಾರೆ.

ಕುಡಿದ ಅಮಲಿನಲ್ಲಿ ಪ್ರಯಾಣಿಕನೊಬ್ಬ ವೃದ್ಧ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ನಂತರ ನ್ಯೂಯಾರ್ಕ್ -ದೆಹಲಿ ವಿಮಾನದ ಸಿಬ್ಬಂದಿಯನ್ನು ಡಿ-ರೋಸ್ಟರ್ ಮಾಡಲಾಗಿದೆ. ಮತ್ತೊಂದು ಏರ್ ಇಂಡಿಯಾ ಪ್ಯಾರಿಸ್ -ದೆಹಲಿ ವಿಮಾನದಲ್ಲಿ ಪಾನಮತ್ತ ಪ್ರಯಾಣಿಕರೊಬ್ಬರು ಮಹಿಳಾ ಪ್ರಯಾಣಿಕರೊಬ್ಬರ ಖಾಲಿ ಸೀಟು ಮತ್ತು ಹೊದಿಕೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು.

ಮತ್ತೋರ್ವ ಪ್ರಯಾಣಿಕರು, ಮದ್ಯ ಸೇವಿಸಿ, ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದಂತಹ ಅನುಚಿತ ವರ್ತನೆಗಳು ಮುಂದುವರೆಯುತ್ತಿರುವುದು ಅಸಹ್ಯ ತರಿಸುತ್ತಿವೆ. ಇದು ಮಾತ್ರವಲ್ಲ ಕೆಲವು ಪ್ರಬುದ್ಧ ರಾಜಕಾರಣಿಗಳು ವಿಮಾನದ ತುರ್ತು ಬಾಗಿಲು ತೆರೆಯಲು ಮುಂದಾಗಿ ಮುಖಕ್ಕೆ ಮಂಗಳಾರತಿ ಎತ್ತಿಸಿಕೊಂಡಿದ್ದರು.

Italian, woman, arrested, Abu Dhabi, Mumbai, flight,

Articles You Might Like

Share This Article