ಗಡಿಯಲ್ಲಿ ಉಗ್ರರ ಜೊತೆ ಗುಂಡಿನ ಕಾಳಗ, ಇಬ್ಬರು ಯೋಧರು ಹುತಾತ್ಮ

ಜಮು,ಸೆ.14- ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತರಾಗಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ.ಕಿಶ್ತವಾರ್ ಜಿಲ್ಲೆಯಲ್ಲಿ ನಿನ್ನೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಕಿರಿಯ ಸೇನಾಧಿಕಾರಿ ಭದ್ರತಾಪಡೆ ಸಿಬ್ಬಂದಿ ಸೇರಿ ಇಬ್ಬರು ಹುತಾತರಾಗಿದ್ದು, ಮತ್ತಿಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಅನಂತನಾಗ್ ಜಿಲ್ಲೆಯ ಕಿಶ್ತವಾರ್ಗೆ ಸಂಪರ್ಕಿಸುವ ನೈದ್ಗಾಮ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆಗಿಳಿದಿದ್ದರು. ಈ ವೇಳೆ ಗುಂಡಿನ ಚಕಮಕಿ … Continue reading ಗಡಿಯಲ್ಲಿ ಉಗ್ರರ ಜೊತೆ ಗುಂಡಿನ ಕಾಳಗ, ಇಬ್ಬರು ಯೋಧರು ಹುತಾತ್ಮ