ಜಮ್ಮು-ಕಾಶ್ಮೀರದಲ್ಲಿ ಉದ್ಯೋಗ ಬದಲಿಗೆ ಬುಲ್ಡೋಜರ್ ಬಳಕೆ : ರಾಹುಲ್ ಟೀಕೆ

Social Share

ನವದೆಹಲಿ,ಫೆ.12- ಜಮ್ಮು ಕಾಶ್ಮೀರದ ಜನ ಉದ್ಯೋಗ, ಉತ್ತಮ ವ್ಯವಹಾರ ಹಾಗೂ ಪ್ರೀತಿಯನ್ನು ಬಯಸುತ್ತಿದ್ದಾರೆ. ಅದರ ಬದಲಿಗೆ ಕೇಂದ್ರ ಸಕ್ರಾ ಕೇಂದ್ರಾಡಳಿತ ಪ್ರದೇಶದಲ್ಲಿ ಬಿಜೆಪಿ ಬುಲ್ಡೋಜರ್ ಬಳಸುತ್ತಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ಉದ್ಯೋಗ, ಉತ್ತಮ ವ್ಯಾಪಾರ ಮತ್ತು ಪ್ರೀತಿ ಬೇಕಿತ್ತು, ಆದರೆ ಅವರಿಗೆ ಏನು ಸಿಕ್ಕಿತು? ಬಿಜೆಪಿಯ ಬುಲ್ಡೋಜರ್ ಎಂದು ಕಿಡಿಕಾರಿದ್ದಾರೆ.

ಹಲವು ದಶಕಗಳಿಂದ ಶ್ರಮದಿಂದ ಬೆಳೆಯುತ್ತಿದ್ದ ಭೂಮಿಯನ್ನು ಇಂದು ಅವರಿಂದ ಕಿತ್ತುಕೊಳ್ಳಲಾಗುತ್ತಿದೆ. ಶಾಂತಿ ಮತ್ತು ದೇಶಿಯ ಅಸ್ಮಿತೆ ಕಾಶ್ಮೀರಿಯತ್‍ನಿಂದ ಒಗ್ಗಟ್ಟಾಗಿರುವುದು ರಕ್ಷಣೆ ಮಾಡಲು ಸಾಧ್ಯ. ವಿಭಜಕತ್ವವಲ್ಲ ಎಂದಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರು : ಬಿಎಸ್‌ವೈ

ತೆರವು ಕಾರ್ಯಾಚರಣೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಭೀತಿಯನ್ನು ಉಂಟುಮಾಡಿದೆ ಎಂದು ಹೇಳುವ ಮಾಧ್ಯಮ ವರದಿಯನ್ನು ರಾಹುಲ್‍ಗಾಂಧಿ ಟ್ಯಾಗ್ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಅತಿಕ್ರಮಣ ತೆರವು ಕಾರ್ಯಾಚರಣೆ ಅಭಿಯಾನದ ವಿರುದ್ಧ ಕಾಂಗ್ರೆಸ್, ನ್ಯಾಷನಲ್ ಕಾನರೆನ್ಸ್ ಮತ್ತು ಪಿಡಿಪಿಯಂತಹ ಪ್ರಮುಖ ರಾಜಕೀಯ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದು, ಅಭಿಯಾನದ ವಿರುದ್ಧ ಕಳವಳವನ್ನು ವ್ಯಕ್ತಪಡಿಸಿವೆ ಮತ್ತು ತಕ್ಷಣ ಅದನ್ನು ನಿಲ್ಲಿಸುವಂತೆ ಒತ್ತಾಯಿಸಿವೆ.

ಲೋಕ್ ಅದಾಲತ್ ನಲ್ಲಿ ಒಂದಾದ ವಿಚ್ಛೇದನಕ್ಕೆ ಮುಂದಾಗಿದ್ದ 14 ದಂಪತಿಗಳು

ಕಂದಾಯ ಇಲಾಖೆಯ ಆಯುಕ್ತ ಕಾರ್ಯದರ್ಶಿ ವಿಜಯ್ ಕುಮಾರ್ ಬಿಧುರಿ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಸ್ಪಷ್ಟ ಸೂಚನೆ ನೀಡಿದ್ದು, ಅತಿಕ್ರಮಣವಾಗಿರುವ ಭೂಮಿಯನ್ನು ತೆರವು ಮಾಡುವಂತೆ ಸೂಚಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಈವರೆಗೂ 10 ಲಕ್ಷಕ್ಕೂ ಹೆಚ್ಚು ಕನಾಲ್ (ಒಂದು ಕನಲ್= 605 ಚದರ ಗಜ) ಭೂಮಿಯನ್ನು ಹಿಂಪಡೆದಿದ್ದಾರೆ. ಜನವರಿ 7 ರಿಂದ ಈ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ.

J-K, wanted, employment, love, BJP, bulldozer, Rahul Gandhi,

Articles You Might Like

Share This Article