ನ್ಯೂಜಿಲೆಂಡ್ ಪ್ರಧಾನಿ ಸ್ಥಾನಕ್ಕೆ ಜಸಿಂದಾ ಆರ್ಡೆರ್ನ್ ರಾಜಿನಾಮೆ

Social Share

ವೆಲ್ಲಿಂಗ್ಟನ್, ಜ.19- ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರು ರಾಜಿನಾಮೆ ನೀಡುತ್ತಿರುವುದಾಗಿ,ಮತ್ತು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ರ್ಪಧಿಸುವುದಿಲ್ಲ ಎಂದು ಘೋಷಿಸಿದ್ದಾರೆ.

ಮುಂದಿನ ಫೆಬ್ರವರಿ 7 ರಂದು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವುದಾಗಿ ನೇಪಿಯರ್‍ನಲ್ಲಿ ಸುದ್ದಿಗಾರರಿಗೆ ಅರ್ಡೆರ್ನ್ ತಿಳಿಸಿದರು. ದೊಡ್ಡ ಜವಾಬ್ದಾರಿ ಇರುವ ಉನ್ನತ ಹುದ್ದೆಯನ್ನು ನಿರ್ವಹಿಸಲು ನನಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪ್ರಧಾನಿ ಸ್ಥಾನ ತ್ಯಜಿಸಲು ಇದು ಸೂಕ್ತ ಸಮಯ ಎಂದು ಹೇಳಿದ್ದಾರೆ.

ಕಳೆದ 2017 ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರಕ್ಕೆ ಏರಿದ್ದ ಜಸಿಂಡಾ ಅರ್ಡೆರ್ನ ಮೂರು ವರ್ಷ ಯಶಸ್ವಯಾಗಿ ಆಡಳಿತ ನಡೆಸಿದ್ದರು ನಂತರ ನಡೆದ ಚುನಾವಣೆಯಲ್ಲಿ ತಮ್ಮ ಲೇಬರ್ ಪಕ್ಷವನ್ನು ಭಾರಿ ಗೆಲುವಿನತ್ತ ಮುನ್ನಡೆಸಿದ್ದರು ಎರಡನೇ ಭಾರಿಗೆ ಪ್ರಧಾನಿಯಾದರು.ಆದರೆ, ಕೊವಿಡ್ ಸಂದರ್ಭದಲ್ಲಿ ಜನರಿಗೆ ಸ್ಪಂದಿಸಲು ಎಡವಿದರು ಎಂಬ ಆರೋಪಗಳು ಕೇಳಿಬಮದಿತ್ತು.

ಬೆಂಗಳೂರಲ್ಲಿ ಡ್ರಗ್ಸ್ ಮಾರುತ್ತಿದ್ದ ಅಲಿ, ಶೇಖ್, ಪಾಷಾ ಸೇರಿ ನಾಲ್ವರ ಬಂಧನ

ಇತ್ತೀಚಿನ ಸಮೀಕ್ಷೆಗಳಲ್ಲಿ ಅವರ ಪಕ್ಷ ಮತ್ತು ಜಸಿಂಡಾ ಅರ್ಡೆರ್ನ್ ಅವರ ವೈಯಕ್ತಿಕ ಜನಪ್ರಿಯತೆ ಕುಸಿತ ಕಂಡಿದೆ ಎಂದು ಹೇಳಲಾಗಿತ್ತು . ಈ ಹಿನ್ನೆಲೆ ಪ್ರಧಾನಿ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.

42 ವರ್ಷ ವಯಸ್ಸಿನ ಪ್ರಧಾನಿಯೊಬ್ಬರು ಇಷ್ಟು ಬೇಗ ಪ್ರಧಾನಿ ಹುದ್ದೆಗೆ ರಾಜೀನಾಮೆ ಘೋಷಿಸಿರುವುದು ನಿಜಕ್ಕೂ ಅಚ್ಚರಿದಾಯಕ ವಿಚಾರ ಎಂದು ಅವರ ಬೆಂಬಲಿಗ ಸಂಸದರು ಹೇಳಿದ್ದಾರೆ.

20 ಸಾವಿರ ಕೋಟಿ ರೂ.ಗಳ ಬಿಲ್ ಬಿಡುಗಡೆಗೆ ಗುತ್ತಿಗೆದಾರರ ಆಗ್ರಹ

ನನಗೆ ಇದೇ ಸರಿಯಾದ ಸಮ ಯ, ನನ್ನ ಕುಟುಂಬದೊಂದಿಗೆ ನೆಮ್ಮದಿಯಿಂದ ಕಾಲ ಕಳೆಯಲು ಬಯಸಿದ್ದೇನೆ, ಮುಂದಿನ ಅಕ್ಟೋಬರ್‍ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಥಿಸುವುದಿಲ್ಲ ಎಂದರು. ಫ್ರಧಾನಿ ದೊಡ್ಡ ಮತ್ತು ಅತ್ಯಂತ ಹೆಚ್ಚಿನ ಜವಾಬ್ದಾರಿಯುವ ಹುದ್ದೆಯಾಗಿದೆ. ಅದನ್ನು ನಿರ್ವಹಿಸುವುದು ಕೂಡ ಸುಲಭವಲ್ಲ. ಅಂತಹ ಹುದ್ದೆಗೆ ಸೂಕ್ತ ವ್ಯಕ್ತಿ ಇದ್ದರೆ ಚೆನ್ನ. ನನಗೆ ಪ್ರಧಾನಿ ಹುದ್ದೆ ನಿಭಾಯಿಸಲು, ಪದವಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಜಸಿಂಡಾ ನೀಡಿದ್ದಾರೆ.

New Zealand, Jacinda Ardern, resign, Prime Minister,

Articles You Might Like

Share This Article