Saturday, September 23, 2023
Homeಇದೀಗ ಬಂದ ಸುದ್ದಿನೂತನ ಸಂಸತ್‍ ಭವನದಲ್ಲಿ ಧ್ವಜಾರೋಹಣ ನೆರವೇರಿಸಿದ ಉಪರಾಷ್ಟ್ರಪತಿ

ನೂತನ ಸಂಸತ್‍ ಭವನದಲ್ಲಿ ಧ್ವಜಾರೋಹಣ ನೆರವೇರಿಸಿದ ಉಪರಾಷ್ಟ್ರಪತಿ

- Advertisement -

ನವದೆಹಲಿ,ಸೆ.17- ಸಂಸತ್‍ನ ನೂತನ ಭವನದಲ್ಲಿ ಇಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ್ದಾರೆ. ಲೋಕಸಭೆಯ ಅಧ್ಯಕ್ಷ ಹೋಂಬಿರ್ಲಾ ಅವರೊಂದಿಗೆ ಹೊಸ ಸಂಸತ್ ಗಜದ್ವಾರದಲ್ಲಿ ಧ್ವಜಾರೋಹಣ ನಡೆದಿದೆ. ಈ ಮೂಲಕ ಸೋಮವಾರದಿಂದ ಆರಂಭಗೊಳ್ಳುವ 5 ದಿನಗಳ ಅಧಿವೇಶನ ಹೊಸಭವನದಲ್ಲೇ ನಡೆಯಲು ಸಿದ್ಧತೆ ನಡೆದಿವೆ.

ಸಂಸತ್ ಅಧಿವೇಶನಕ್ಕೂ ಮುನ್ನ ಉಭಯ ಸದನಗಳ ಅಧ್ಯಕ್ಷರು ಧ್ವಜಾರೋಹಣ ನೆರವೇರಿಸುವ ಸಂಪ್ರದಾಯ ಮೊದಲಿನಿಂದಲೂ ಜಾರಿಯಲ್ಲಿದೆ.

- Advertisement -

ಸರ್ವಾಧಿಕಾರಿ ಆಡಳಿತವನ್ನು ಕಿತ್ತೊಗೆಯಲು ಸಂಘಟನಾತ್ಮಕ ಹೋರಾಟ: ಮಲ್ಲಿಕಾರ್ಜುನ ಖರ್ಗೆ

ಅದರ ಮುಂದುವರೆದ ಭಾಗವಾಗಿ ಇಂದು ಹೊಸ ಸಂಸತ್ ಭವನದಲ್ಲಿ ಧ್ವಜಾರೋಹಣ ನೆರವೇರಿಸಲಾಗಿದೆ. ಇದಕ್ಕೂ ಮುನ್ನ ಸಿಆರ್‍ಪಿಎಫ್ ಪಡೆಗಳು ಜಗದೀಪ್ ಧನಕರ್ ಹಾಗೂ ಹೋಂಬಿರ್ಲಾ ಅವರಿಗೆ ಪ್ರತ್ಯೇಕವಾಗಿ ಗೌರವ ವಂದನೆ ಸಲ್ಲಿಸಿದರು.

JagdeepDhankhar, #hoists, #nationalflag, #newParliament,

- Advertisement -
RELATED ARTICLES
- Advertisment -

Most Popular