ಉಪರಾಷ್ಟ್ರಪತಿ ಚುನಾವಣೆ : ಗೆಲುವಿನ ಅಂತರದಲ್ಲಿ ದಾಖಲೆ ಬರೆದ ಜಗದೀಪ್ ಧನ್ಕರ್

Social Share

ನವದೆಹಲಿ,ಆ.7-ಉಪರಾಷ್ಟ್ರಪತಿ ಆಯ್ಕೆಗೆ ನಿನ್ನೆ ನಡೆದ ಚುನಾವಣೆಯಲ್ಲಿ ಎನ್‍ಡಿಎ ಬೆಂಬಲಿತ ಜಗದೀಪ್ ಧನ್ಕರ್ ಅವರು 25 ವರ್ಷಗಳ ಬಳಿಕ ಅತಿಹೆಚ್ಚು ಅಂತರದಿಂದ ಗೆಲುವು ಸಾಧಿಸುವ ಮೂಲಕ ದಾಖಲೆ ಬರೆದಿದ್ದಾರೆ.

ನಿನ್ನೆ ಬೆಳಗ್ಗೆ ಸಂಸತ್ ಭವನದಲ್ಲಿ ಬೆಳಗ್ಗೆ 10ರಿಂದ 5 ಗಂಟೆವರೆಗೆ ನಡೆದ ಮತದಾನದಲ್ಲಿ 725 ಮಂದಿ ಮತ ಚಲಾವಣೆ ಮಾಡಿದ್ದರು. ಅದರಲ್ಲಿ 15 ಮತಗಳು ಅನರ್ಹಗೊಂಡಿದ್ದವು. ಬಾಕಿ ಉಳಿದ 710 ಮತಗಳಲ್ಲಿ ಜಗದೀಪ್ ಧನ್ಕರ್ 578(ಶೇ.72.5) ಮತಗಳನ್ನು ಪಡೆದು 246 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಪ್ರತಿಪಕ್ಷಗಳ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ಮಾರ್ಗೆಟ್ ಆಳ್ವ ಕೇವಲ 182 ಮತಗಳನ್ನು ಪಡೆಯಲು ಸಾಧ್ಯವಾಗಿದೆ.
ಜಗದೀಪ್ ಧನ್ಕರ್ ಅವರ ಆಯ್ಕೆಯನ್ನು ದೃಢೀಕರಿಸಿರುವ ಪ್ರಮಾಣ ಪತ್ರವನ್ನು ಇಂದು ಚುನಾವಣಾ ಆಯೋಗ ನೀಡಿದೆ. ಆಯೋಗದ ಮುಖ್ಯ ಆಯುಕ್ತ ರಾಜೀವ್‍ಕುಮಾರ್, ಆಯುಕ್ತ ಅಲೋಕ್ ಚಂದ್ರ ಪಾಂಡೆ ಅವರು ಸಹಿ ಮಾಡಿರುವ ಪ್ರಮಾಣ ಪತ್ರವನ್ನು ಕೇಂದ್ರ ಗೃಹ ಕಾರ್ಯದರ್ಶಿ ಅವರಿಗೆ ಹಸ್ತಾಂತರಿಸಲಾಗಿದೆ.

ಆ.10ಕ್ಕೆ ಹಾಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕಾರ ಅವ ಪೂರ್ಣಗೊಳ್ಳುತ್ತಿದ್ದು, ಅದೇ ದಿನ ನೂತನ ಉಪರಾಷ್ಟ್ರಪತಿಯವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಉಪರಾಷ್ಟ್ರಪತಿಯಾದವರು ರಾಜ್ಯಸಭೆಯ ಅಧ್ಯಕ್ಷರಾಗಿಯೂ ಕೆಲಸ ಮಾಡಲಿದ್ದಾರೆ.

1997ರ ಬಳಿಕ ಈವರೆಗೂ ಆರು ಉಪರಾಷ್ಟ್ರಪತಿ ಚುನಾವಣೆಗಳು ನಡೆದಿವೆ. 1992ರಲ್ಲಿ ನಡೆದ ಚುನಾವಣೆಯಲ್ಲಿ ಕೆ.ಆರ್.ನಾರಾಯಣ ಅವರು 701 ಮತಗಳ ಪೈಕಿ 700 ಮತಗಳನ್ನು ಪಡೆಯುವ ಮೂಲಕ ಹೆಚ್ಚು ದಾಖಲೆ ನಿರ್ಮಿಸಿದ್ದರು.
2007ರ ಚುನಾವಣೆಯಲ್ಲಿ ಕಾಂಗ್ರೆಸ್‍ನ ಅಭ್ಯರ್ಥಿ ಮೊಹಮ್ಮದ್ ಅಮೀದ್ ಅನ್ಸಾರಿ 762 ಮತಗಳ ಪೈಕಿ ಶೇ.60.51ರಷ್ಟನ್ನು ಗಳಿಸಿದ್ದರು.2017ರಲ್ಲಿ ಬಿಜೆಪಿಯ ವೆಂಕಯ್ಯ ನಾಯ್ಡು 760 ಮತಗಳಲ್ಲಿ ಶೇ.67.89ರಷ್ಟನ್ನು ಪಡೆದಿದ್ದರು ಎಂದು ಮೂಲಗಳು ತಿಳಿಸಿವೆ.

Articles You Might Like

Share This Article