ನವರಸ ನಾಯಕನಿಗೆ 60ರ ಸಂಭ್ರಮ

Social Share

ಬೆಂಗಳೂರು, ಮಾ. 17- ನಟ ಹಾಗೂ ರಾಜ್ಯಸಭಾ ಸದಸ್ಯ ನವರಸ ನಾಯಕ ಜಗ್ಗೇಶ್‍ಗೆ ಇಂದು 60 ರ ಜನ್ಮ ದಿನದ ಸಂಭ್ರಮ. ಚಿತ್ರರಂಗ ಹಾಗೂ ರಾಜಕೀಯ ಅಂಗಳದಲ್ಲಿ ಸದಾ ಬ್ಯುಸಿಯಾಗಿರುವ ಸ್ನೇಹಜೀವಿ ಜಗ್ಗೇಶ್ ಅವರು ಅಪ್ಪಟ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರಾಗಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಪತ್ನಿ ಪರಿಮಳಾ ಹಾಗೂ ಕುಟುಂಬ ಸದಸ್ಯರೊಂದಿಗೆ ಮಂತ್ರಾಲಯದಲ್ಲಿ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ.

60ರ ಸಂವತ್ಸರದ ಜನ್ಮದಿನದ ಸಂಭ್ರಮದಲ್ಲಿರುವ ಚಂದನವನದ ನವರಸ ನಾಯಕನಿಗೆ ಸಿನಿಮಾ ರಂಗ ಹಾಗೂ ರಾಜಕೀಯರಂಗದ ಕೆಲವು ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರಿದ್ದಾರೆ.

ನಾಳೆ 108 ಅಡಿ ಮಾದಪ್ಪ ಪ್ರತಿಮೆ ಲೋಕಾರ್ಪಣೆ

ರಾಘವೇಂದ್ರ ಸ್ವಾಮಿ ವಿಗ್ರಹ ಉಡುಗೊರೆ :
ರಾಜಸಭಾ ಸದಸ್ಯರೂ ಆಗಿರುವ ಜಗ್ಗೇಶ್ ಅವರು ಇತ್ತೀಚೆಗೆ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುಟುಂಬ ಸದಸ್ಯರೊಂದಿಗೆ ಭೇಟಿ ಆಗಿ, ತಮ್ಮ ಜನ್ಮದಿನದ ಸವಿನೆನಪಿಗಾಗಿ ಪ್ರಧಾನಿಗೆ ತಮ್ಮ ಆರಾಧ್ಯ ದೈವವಾದ ರಾಘವೇಂದ್ರ ಸ್ವಾಮಿಯವರ ಬೆಳ್ಳಿ ವಿಗ್ರಹವನ್ನು ಉಡುಗೊರೆಯಾಗಿ ನೀಡಿ ಆಶೀರ್ವಾದ ಪಡೆದಿಕೊಂಡಿ ದ್ದರು.

28ಕ್ಕೆ ರಾಘವೇಂದ್ರ ಸ್ಟೋರ್ಸ್ ದರ್ಶನ :
ಸಾಮಾನ್ಯವಾಗಿ ಸ್ಟಾರ್ ನಟರುಗಳ ಜನ್ಮದಿನದಂದು ಹೊಸ ಚಿತ್ರಗಳ ಘೋಷಣೆ, ಟೀಸರ್, ಟ್ರೈಲರ್ ಬಿಡುಗಡೆ, ಚಿತ್ರಗಳ ಬಿಡುಗಡೆಯ ದಿನಾಂಕ ಘೋಷಿಸುವುದು ಸರ್ವೇ ಸಾಮಾನ್ಯ. ಅದರಂತೆ ನವರಸ ನಾಯಕ ಜಗ್ಗೇಶ್ ಹುಟ್ಟುಹಬ್ಬದ ಅಂಗವಾಗಿ ಹೊಂಬಾಳೆ ಫಿಲಂಸ್ ನಡಿ ತಯಾರಾಗಿರುವ ರಾಘವೇಂದ್ರ ಸ್ಟೋರ್ಸ್ ಸಿನಿಮಾದ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಾಗಿದೆ.

ಅಪ್ಪು ಜನ್ಮದಿನ : ಸಮಾಧಿ ಬಳಿಗೆ ಹರಿದು ಬಂದ ಅಭಿಮಾನಿ ಸಾಗರ

ತಮ್ಮ ಅಧಿಕೃತ ಟ್ವಿಟ್ಟರ್ ಖಾತೆ ಮೂಲಕ ಈ ವಿಷಯ ತಿಳಿಸಿದ್ದು, `ನಮ್ಮ ರಾಘವೇಂದ್ರ ಸ್ಟೋರ್ಸ್‍ನ ಖ್ಯಾತ ಬಾಣಸಿಗರಾದ ಜಗ್ಗೇಶ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನವಿರಾಗಿ ಸಿದ್ಧಪಡಿಸಿರುವ ನವರಸದೌತಣವನ್ನು ಏಪ್ರಿಲ್ 28, 2023 ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಉಣಬಡಿಸಲಿದ್ದೇವೆ, ವಯಸ್ಸು ಕೈ ಜಾರಿದೆ, ಕೈ ಹಿಡಿಯಲು ಒಂದು ವಧು ಬೇಕಿದೆ’ ಎಂದು ಹೇಳುವ ಮೂಲಕ ಚಿತ್ರ ಬಿಡುಗಡೆಯ ವಿಷಯ ತಿಳಿಸುವ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

Jaggesh, birthday, Raghavendra Stores, release,

Articles You Might Like

Share This Article