ಕುಟುಂಬ ಸಮೇತ ಪ್ರಧಾನಿ ಮೋದಿ ಭೇಟಿಯಾದ ಜಗ್ಗೇಶ್

Social Share

ನವದೆಹಲಿ,ಮಾ.15-ಕನ್ನಡ ಚಿತ್ರರಂಗದ ಹಿರಿಯ ನಟ ಹಾಗು ರಾಜ್ಯಸಭಾ ಸದಸ್ಯರಾದ ಜಗ್ಗೇಶ್ ಅವರು ನವದೆಹಲಿಯಲ್ಲಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರನ್ನು ಕುಟುಂಬ ಸಮೇತ ಭೇಟಿಯಾಗಿ ಅಭಿನಂದಿಸಿದರು.

ಹುಟ್ಟುಬ್ಬದ ನಡುವೆ ಜಗ್ಗೇಶ್ ಅವರು ಮೊದಲ ಭಾರಿಗೆ ಪತ್ನಿ ಪರಿಮಳಾ ಹಾಗೂ ಪುತ್ರ ಯತಿರಾಜ್ ಜೊತೆ ಪ್ರಧಾನಿಯವರನ್ನು ಭೇಟಿಯಗಿ ಕೆಲ ಕಾಲ ಚರ್ಚೆ ನಡೆಸಿ ಖುಷಿ ಪಟ್ಟರು. ದೇವರು ನಿಮಗೆ ಆರೋಗ್ಯ, ಆಯಸ್ಸು ನೀಡಲಿ ಎಂದು ಪ್ರಧಾನಿ ಮೋದಿ ಮನತುಂಬಿ ಆಶೀರ್ವದಿಸಿದರು.

ಸತತ 3ನೇ ದಿನವೂ ನಡೆಯದ ಸಂಸತ್ ಕಲಾಪ, ಅಮೂಲ್ಯ ಸಮಯ ವ್ಯರ್ಥ

ಪರಿಮಳಾ ಜಗ್ಗೇಶ್ ಅವರು ಸಿರಿಧಾನ್ಯಗಳನ್ನು ಬಳಸಿ ಮಧುಮೇಹವನ್ನು ಹತೋಟಿಗೆ ತರುವುದರ ಕುರಿತು ವಿಶೇಷ ಅಧ್ಯಯನ ಮಾಡಿದ್ದಾರೆ, ಇದರ ಉಪಯೋಗವನ್ನು ಸಾಕಷ್ಟು ಜನರು ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಲಾಯಿತು. ಈ ವಿಷಯವನ್ನು ತಿಳಿದ ಪ್ರಧಾನಿಗಳು ಬಹಳ ಖುಷಿಪಟ್ಟರು ಎಂದು ಜಗ್ಗೇಶ್ ತಿಳಿಸಿದರು.

ಮಧುಮೇಹಕ್ಕೆ ಸಂಬಂಧಿಸಿದ ಹಾಗೆ ಸರ್ಕಾರದಿಂದ ನಡೆಯುತ್ತಿರುವ ಕಾರ್ಯಗಳಲ್ಲಿ ಪರಿಮಳಾ ಜಗ್ಗೇಶ್ ಅವರು ಪಾಲ್ಗೊಳ್ಳಲು ಸೂಚಿಸಿದರು. ಅಲ್ಲಿಂದಲೇ ಕೇಂದ್ರ ಸಚಿವರಿಗೂ ಈ ವಿಷಯವನ್ನು ತಿಳಿಸಿದರು.

Jaggesh, family, meet, PM Modi,

Articles You Might Like

Share This Article