ಜೈಲಿನಲ್ಲಿದ್ದುಕೊಂಡೇ ಚುನಾವಣೆಗೆ ಸ್ಪರ್ಧಿಸಿರುವ ಅಮೃತ್‌ಪಾಲ್‌ಸಿಂಗ್‌ಗೆ ಮೈಕ್‌ ಚಿಹ್ನೆ

ನವದೆಹಲಿ,ಮೇ.20– ಜೈಲಿನಲ್ಲಿದ್ದುಕೊಂಡೇ ಚುನಾವಣೆಗೆ ಸ್ಪರ್ಧಿಸಿರುವ ಪ್ರತ್ಯೇಕತಾವಾದಿ ಅಮೃತ್‌ಪಾಲ್‌ ಸಿಂಗ್‌ ಅವರಿಗೆ ಮೈಕ್‌ ಚಿಹ್ನೆ ಲಭಿಸಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅಸ್ಸಾಂ ಜೈಲಿನಲ್ಲಿರುವ ಸಿಂಗ್‌ ಪಂಜಾಬ್‌ನ ಖದೂರ್‌ ಸಾಹಿಬ್‌ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಚುನಾವಣಾ ಚಿಹ್ನೆಗಳನ್ನು ಹಂಚಲಾದ ಒಟ್ಟು 328 ಅಭ್ಯರ್ಥಿಗಳ ಪೈಕಿ 169 ಸ್ವತಂತ್ರ ಸ್ಪರ್ಧಿಗಳಲ್ಲಿ ಅವರು ಸೇರಿದ್ದಾರೆ. ವಾರಿಸ್‌‍ ಪಂಜಾಬ್‌ ದೇ ಸಂಘಟನೆಯ ಮುಖ್ಯಸ್ಥ ಅಮತಪಾಲ್‌ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅಸ್ಸಾಂನ ದಿಬ್ರುಗಢ ಜೈಲಿನಲ್ಲಿ ಇರಿಸಲಾಗಿದೆ. ಫರೀದ್‌ಕೋಟ್‌ (ಮೀಸಲು) ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ … Continue reading ಜೈಲಿನಲ್ಲಿದ್ದುಕೊಂಡೇ ಚುನಾವಣೆಗೆ ಸ್ಪರ್ಧಿಸಿರುವ ಅಮೃತ್‌ಪಾಲ್‌ಸಿಂಗ್‌ಗೆ ಮೈಕ್‌ ಚಿಹ್ನೆ