Saturday, September 23, 2023
Homeಇದೀಗ ಬಂದ ಸುದ್ದಿಹೃದಯಾಘಾತಕ್ಕೆ ಬಲಿಯಾದ `ಜೈಲರ್' ನಟ ಮಾರಿಮುತ್ತು

ಹೃದಯಾಘಾತಕ್ಕೆ ಬಲಿಯಾದ `ಜೈಲರ್’ ನಟ ಮಾರಿಮುತ್ತು

- Advertisement -

ಚೆನ್ನೈ, ಸೆ.8- ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ಮಾರಿಮುತ್ತು (57) ಅವರು ಇಂದು ಬೆಳಗ್ಗೆ 8.30ರ ಸಮಯದಲ್ಲಿ ಹೃದಯಾಘಾತದಿಂದ ವಿವಶರಾಗಿದ್ದಾರೆ. ಇಂದು ಬೆಳಗ್ಗೆ ಧಾರಾವಾಹಿ ಒಂದರ ಡಬ್ಬಿಂಗ್ ಕಾರ್ಯದಲ್ಲಿ ತೊಡಗಿಕೊಂಡಿದ್ದಾಗ ಅವರಿಗೆ ಲಘು ಹೃದಯಾಘಾತ ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಸೂರ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ವಿವಶರಾಗಿದ್ದಾರೆ.

ಜೈಲರ್‍ನಲ್ಲಿ ನಟನೆ:
ಇತ್ತೀಚೆಗೆ ಸೂಪರ್‍ಸ್ಟಾರ್ ರಜನಿಕಾಂತ್ ನಟಿಸಿದ್ದ ಜೈಲರ್' ಚಿತ್ರದಲ್ಲಿ ಖಳನಟನ ಸಹಾಯಕನಾಗಿ ನಟಿಸಿದ್ದ ಮಾರಿಮುತ್ತು ಅವರ ಸಾವು ತಮಿಳು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದ್ದು,ಸೂಪರ್ ಸ್ಟಾರ್ ರಜನಿಕಾಂತ್, ಇಳಯದಳಪತಿ ವಿಜಯ್, ಸೂರ್ಯ ಸೇರಿದಂತೆ ಹಲವು ಕಲಾವಿದರು ಹಾಗೂ ತಂತ್ರಜ್ಞರು ಶೋಕ ವ್ಯಕ್ತಪಡಿಸಿ ಕಂಬನಿ ಮಿಡಿದಿದ್ದಾರೆ.

- Advertisement -

ಸಹಾಯಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿ: ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕರಾದ ವಸಂತ್, ಸೀಮನ್, ಎಸ್.ಜೆ.ಸೂರ್ಯ ಸೇರಿದಂತೆ ಹಲವು ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಮಾರಿಮುತ್ತು, 2008ರಲ್ಲಿ ಕಣ್ಣುಮ್ ಕಣ್ಣುಮ್’ ಸಿನಿಮಾದ ಮೂಲಕ ಸ್ವಾತಂತ್ರ್ಯ ನಿರ್ದೇಶಕರಾದರು. 2014ರಲ್ಲಿ ತಾವು ನಿರ್ದೇಶಿಸಿದ್ದ ಪುಲಿವಾಲ್' ಚಿತ್ರದಲ್ಲಿ ಪ್ರಸನ್ನ ಎಂಬ ಮುಖ್ಯ ಪಾತ್ರ ಮಾಡುವ ಮೂಲಕ ನಟನೆಗೂ ಪದಾರ್ಪಣೆ ಮಾಡಿದ ಅವರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮರುದು’, ಬೈರವ',ಕಡಲ್‍ಕುಟ್ಟಿ ಸಿಂಗಮ್’, `ವೀರಾಮೆ ವಾಗಯ್ ಸೋಡುಮ್’ ಸಿನಿಮಾಗಳು ಇವರಿಗೆ ಹೆಸರು ತಂದುಕೊಟ್ಟಿದ್ದವು.
ಮಾರಿಮುತ್ತು ಅವರು ಕೆಲವು ಧಾರಾವಾಹಿಗಳಲ್ಲೂ ನಟಿಸಿ ಗಮನ ಸೆಳೆದಿದ್ದರು.

jailer, #actor, #marimuthu, #dies,

- Advertisement -
RELATED ARTICLES
- Advertisment -

Most Popular