ಭಾರತ-ಫಿಲಿಪೈನ್ಸ್ ವಿದೇಶಾಂಗ ಸಚಿವರ ಮಾತುಕತೆ

Social Share

ಮನಿಲಾ,ಫೆ.14- ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಇಂದು ಫಿಲಿಪೈನ್ಸ್‍ನ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಟಿಯೋಡೋರೋ ಎಲ್.ಲೋಕ್ಸಿನ್ ಅವರೊಂದಿಗೆ ವಿಶಾಲಾ ತಳಹದಿಯ ಮಾತುಕತೆ ನಡೆಸಿದರು. ಆಗ್ನೇಯ ಏಷ್ಯಾದ ಈ ಪ್ರಮುಖ ರಾಷ್ಟ್ರಕ್ಕೆ ಇದು ಜೈಶಂಕರ್ ಅವರ ಪ್ರಥಮ ಭೇಟಿಯಾಗಿದೆ.
ಕಾರ್ಯದರ್ಶಿ ಟೆಡ್ಡಿ ಬಾಯ್ ಲೋಕ್ಸಿನ್ ಮತ್ತು ಸಚಿವ ಡಾ.ಎಸ್.ಜೈಶಂಕರ್ ಅವರು ಫಿಲಿಪೈನ್ಸ್ ಮತ್ತು ಭಾರತದ ನಡುವಿನ ಪ್ರಸಕ್ತ ಬಾಂಧವ್ಯದ ಕುರಿತು ಮತ್ತು ದ್ವಿಪಕ್ಷೀಯ ಸಂಬಂಧಗಳ ಭವಿಷ್ಯರು ದಿಕ್ಕಿನ ಕುರಿತು ಚರ್ಚಿಸುವ ನಿರೀಕ್ಷೆ ಇದೆ ಎಂದು ಫಿಲಿಪೈನ್ಸ್‍ನ ವಿದೇಶಾಂಗ ವ್ಯವಹಾರಗಳ ಇಲಾಕೆ ಇಂದು ಟ್ವೀಟ್ ಮಾಡಿದೆ.
ಉಭಯತ್ರರು ಆರೋಗ್ಯ ಮತ್ತು ಭದ್ರತೆ ಮತ್ತು ಇತರ ಸಮಾನ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳು, ಅದರಲ್ಲೂ ಕೋವಿಡ್ ನಂತರದ ಸುಧಾರಣಾ ಕಾರ್ಯಗಳಲ್ಲಿ ತೊಡಗುವ ನಿಟ್ಟಿನಲ್ಲಿ ಚರ್ಚೆ ನಡೆಸಲಿದ್ದಾರೆ.
ಈ ಮುನ್ನ ವಿದೇಶಾಂಗ ಸಚಿವಾಲಯಕ್ಕೆ ಆಗಮಿಸಿದ ಜೈಶಂಕರ್ ಅವರನ್ನು ಫಿಲಿಫೈನ್ಸ್ ವಿದೇಶಾಂಗ ಕಾರ್ಯದರ್ಶಿ ಲೋಕ್ಸಿನ್ ಅವರು ಬರಮಾಡಿಕೊಂಡರು.

Articles You Might Like

Share This Article