ವಿಶ್ವಸಂಸ್ಥೆ.ಸೆ.25- ಯಾರೇ ಆಗಲಿ, ಎಷ್ಟೇ ಪವಿತ್ರವಾದುದಾದರೂ ರಕ್ತದ ಕಲೆಗಳನ್ನು ಎಂದಿಗೂ ಮುಚ್ಚಿಡಲು ಸಾಧ್ಯವಿಲ್ಲ ಎಂದು ಭಯೋತ್ಪಾದನೆ ವಿರುದ್ದ ವಿದೇಶಾಂಗ ಸಚಿವ ಎಸ್.ಜೈಶಂಕರ್ ವಿಶ್ವಸಂಸ್ಥೆ ಅಧಿವೇಶನದಲ್ಲಿ ಕಟುವಾಗಿ ಹೇಳಿದ್ದಾರೆ.
ಘೋಷಿತ ಭಯೋತ್ಪಾದಕರನ್ನು ರಕ್ಷಿಸುವ ರಾಷ್ಟ್ರಗಳು ತಮ್ಮ ಹಿತಾಸಕ್ತಿಗಳನ್ನು ಗಮನಿಸುವುದಿಲ್ಲ ಎಂದು ಚೀನಾ ಮತ್ತು ಪಾಕಿಸ್ತಾನವನ್ನು ಪರೋಕ್ಷವಾಗಿ ಟೀಕಿಸಿ ಸಂದೇಶ ನೀಡಿದ್ದಾರೆ.
ಭಯೋತ್ಪಾದಕರನ್ನು ರಕ್ಷಿಸುವ, ಪೋಷಿಸುವ ಮಟ್ಟಿಗೆ ಹೋಗಿ ಯೋಚಿಸುವುದಿಲ್ಲ , ಗಡಿಯಾಚೆಗಿನ ಭಯೋತ್ಪಾದನೆ ವಿರುದ್ದ ಭಾರತ ಹೋರಾಟ ನಡೆಸುತ್ತಿದ್ದರು ಶೂನ್ಯ-ಸಹಿಷ್ಣುತೆ ವಿಧಾನವನ್ನು ದೃಢವಾಗಿ ಪ್ರತಿಪಾದಿಸುತ್ತದೆ ಎಂದು ಹೇಳಿದರು. ನಮ್ಮ ದೃಷ್ಟಿಯಲ್ಲಿ ಯಾವುದೇ ಭಯೋತ್ಪಾದಕ ಕೃತ್ಯಕ್ಕೆ ಸಮರ್ಥನೆ ಇಲ್ಲ.
ಭಯೋತ್ಪಾಕರ ಕರಾಳತೆ ತಿಳಿದಿದ್ದರೂ ಜಾಗತಿಕ ಮಾನವ ಕ್ರೂರಿಗಳಾಗಿದ್ದರು ವಿಶ್ವಸಂಸ್ಥೆಯಲ್ಲಿ ಅಪರಾದಿಗಳು ಎಂದು ಘೊಷಿಸುವಾಗ ರಾಜಕೀಯ ಮಾಡುತ್ತಾರೆ ಭದ್ರತಾ ಮಂಡಳಿಯ ನಿರ್ಬಂಧಗಳ ಅಡಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರನ್ನು ಕಪ್ಪುಪಟ್ಟಿಗೆ ಸೇರಿಸಲು ಭಾರತ, ಅಮೆರಿಕಾ ಮತ್ತು ಇತರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಮುಂದಾದಾಗ ಖಾಯಂ ಸದಸ್ಯ ಚೀನಾ ವಿರುದ್ದ ಮತಹಾಕಿ ತಡೆಹಿಡಿಯಲಾಗಿದೆ ಇದು ಮುಂದೆ ದೊಡ್ಡ ತಪ್ಪು ಎಂದು ತಿಳಿಯುತ್ತದೆ ಎಂದು ಹೇಳಿದ್ದಾರೆ.