ಕೇಪ್ ಕ್ಯಾನವೆರಲ್, ಆ.23- ವಿಶ್ವದ ಹೊಸ ಮತ್ತು ಅತಿ ದೊಡ್ಡ ಜೇಮ್ಸ ವೆಬ್ ಬಾಹ್ಯಾಕಾಶ ದೂರದರ್ಶಕದಲ್ಲಿ ಗುರುಗ್ರಹವನ್ನು ಹಿಂದೆಂದಿಗಿಂತಲೂ ಅತಿ ಹತ್ತಿರದಲ್ಲಿ ನೋಡಬಹುದು ಎಂದು ಇಲ್ಲಿನ ವಿಜ್ಞಾನಿಗಳು ಹೇಳಿದ್ದಾರೆ.
ಸೌರವ್ಯೂಹದ ಅತಿದೊಡ್ಡ ಗ್ರಹ ಗುರುವಿನ ಉತ್ತರ ಮತ್ತು ದಕ್ಷಿಣದ ಅಭೂತಪೂರ್ವ ವೀಕ್ಷಣೆಗಳು ಮತ್ತು ಸುತ್ತುತ್ತಿರುವ ಧ್ರುವ ಮಬ್ಬುಗಳನ್ನು ದೂರದರ್ಶಕ ಸೆರೆಹಿಡಿದಿದ್ದು ಆ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಗುರುಗ್ರಹದ ಗ್ರೇಟ್ ರೆಡ್ ಸ್ಪಾಟ, ಭೂಮಿಯನ್ನು ನುಂಗುವಷ್ಟು ದೊಡ್ಡ ಚಂಡ ಮಾರುತ, ಲೆಕ್ಕವಿಲ್ಲದಷ್ಟು ಸಣ್ಣ ಬಿರುಗಾಳಿಗಳ ಜೊತೆಗೆ ಪ್ರಕಾಶಮಾನವಾಗಿ ಎದ್ದು ಕಾಣುತ್ತದೆ.
ಒಂದು ವಿಶಾಲ ಕ್ಷೇತ್ರದ ಚಿತ್ರ ವಿಶೇಷವಾಗಿ ರೊಮಾಂಚನಗೊಳಿಸಿದೆ. ಗ್ರಹದ ಸುತ್ತಲಿನ ಮಸುಕಾದ ಉಂಗುರಾಕಾರ ಹಾಗೆಯೇ ಗೆಲಾಕ್ಸಿಗಳ ಹೊಳೆಯುವ ಎರಡು ಸಣ್ಣ ಚಂದ್ರನನ್ನು ತೋರಿಸುತ್ತಿದೆ. ನಾವು ಗುರುಗ್ರಹವನ್ನು ಈ ರೀತಿ ನೋಡಿಲ್ಲ. ಇದೆಲ್ಲವೂ ನಂಬಲ ಸಾಧ್ಯವಾಗಿದೆ ಎಂದು ಗ್ರಹಗಳ ಖಗೋಳ ಶಾಸ್ತ್ರಜ್ಞ ಇಮ್ಕೆ ಡಿ ಪಾಟರ್ ಹೇಳಿದ್ದಾರೆ.
ಕ್ಯಾಲಿಪೋರ್ನಿಯಾ ವಿಶ್ವವಿದ್ಯಾ ಲಯದ ಬಕ್ಲಿರ್ ಸಹಾಯ ಮಾಡಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ಉತ್ತಮವಾಗಿದೆ ನಿಜವಾಗಿಯೂ ಈ ಕ್ಷಣವನ್ನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ. ಅತಿಕೆಂಪು ಚಿತ್ರಗಳನ್ನು ನೀಲಿ, ಬಿಳಿ, ಹಸಿರು, ಹಳದಿ ಮತ್ತು ಕಿತ್ತಳೆ ಬಣ್ಣಗಳಲ್ಲಿ ಕೃತಕವಾಗಿ ಬಣ್ಣಿಸಲಾಗಿದೆ, ಯುಎಸ -ಫ್ರೆಂಚ್ ಸಂಶೋಧನಾ ತಂಡದ ಪ್ರಕಾರ, ವೈಶಿಷ್ಟ್ಯಗಳನ್ನು ಎದ್ದು ಕಾಣುವಂತೆ ಮಾಡಲು ಭಾರಿ ಸಾಹಸ ಪಟ್ಟಿತ್ತು.
ನಾಸಾ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ 10 ಶತಕೋಟಿ ವೆÀಚ್ಚದಲ್ಲಿ ಹಬಲ್ ಬಾಹ್ಯಾಕಾಶ ದೂರದರ್ಶಕವನ್ನು ಕಳೆದ ವರ್ಷದ ಕೊನೆಯಲ್ಲಿ ರಾಕೆಟ್‍ನಿಂದ ನಭಕ್ಕೆ ಹಾರಿಸಲಾಗಿತ್ತು. ಆಂದ ಹಾಗೆ ಈ ವೀಕ್ಷಣಾಲಯ ಭೂಮಿಯಿಂದ 1 ಮಿಲಿಯನ್ ಮೈಲಿ (1.6 ಮಿಲಿಯನ್ ಕಿಲೋಮೀಟರ್) ದೂರದಲ್ಲಿದೆ.