ಜಮ್ಮು,ಜ.18- ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೀಡಿರುವ ಮಾರ್ಗಸೂಚಿ ಅನ್ವಯ ಕಳೆದ ಡಿಸೆಂಬರ್ನಲ್ಲಿ ಇಲ್ಲಿನ ಸಿದ್ರಾ ಪ್ರದೇಶದಲ್ಲಿ ನಡೆದ ಎನ್ಕೌಂಟರ್ ಪ್ರಕರಣದವನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದೆ.
ಡಿಸೆಂಬರ್ 28 ರಂದು ಸಿದ್ರಾದಲ್ಲಿ ಪೊಲೀಸ್ ಚೆಕ್-ಪಾಯಿಂಟ್ ಬಳಿ ನಡೆದ ಎನ್ಕೌಂಟರ್ನಲ್ಲಿ ನಾಲ್ವರು ಭಯೋತ್ಪಾದಕರು ಹತರಾಗಿದ್ದರು. ಪ್ರಕರಣವನ್ನು ಜಮ್ಮುವಿನ ಸಹಾಯಕ ಆಯುಕ್ತ ಪಿಯೂಷ್ ಧೋತ್ರಾ ತನಿಖೆ ನಡೆಸಲಿದ್ದಾರೆ. ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಸಿ ವರದಿಯನ್ನು ಜಮ್ಮುವಿನ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಸಲ್ಲಿಸಲು ಸೂಚಿಸಲಾಗಿದೆ ಎಂದರು ತನಿಖಾಧಿಕಾರಿ ತಿಳಿಸಿದ್ದಾರೆ.
ಏರ್ಬ್ಯಾಗ್ಗಳಲ್ಲಿ ದೋಷ : 17 ಸಾವಿರ ಕಾರುಗಳನ್ನು ವಾಪಸ್ ಪಡೆದ ಮಾರುತಿ
ಹೆಚ್ಚುವರಿ ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶದ ಪ್ರಕಾರ, ನ್ಯಾಯಯುತ ಮತ್ತು ಪಾರದರ್ಶಕ ರೀತಿ ವಿಚಾರಣೆ ನಡೆಯಲಿದೆ. ಮಾಹಿತಿ ಹೊಂದಿರುವವರು ಇಂದಿನಿಂದ ಜನವರಿ 21 ರವರೆಗೆ ಕಚೇರಿಗೆ ಬಂದು ಹೇಳಿಕೆ ದಾಖಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದಿಂದ ನುಸುಳಿದ ನಾಲ್ವರು ಶಂಕಿತ ಭಯೋತ್ಪಾಕರು, ಕಾಶ್ಮೀರಕ್ಕೆ ಟ್ರಕ್ನಲ್ಲಿ ಪ್ರಯಾಣಿಸುತ್ತಿದ್ದರು. ಅವರು ಶಸ್ತ್ರಸಜ್ಜಿತರಾಗಿದ್ದರು. ಭದ್ರತಾ ಪಡೆಗಳು ಟ್ರಕ್ ತಡೆದು ತಪಾಸಣೆ ನಡೆಸಲು ಮುಂದಾದಾಗ ಗುಂಡಿನ ಚಕಮಕಿ ನಡೆಯಿತು.
ಈ ಸಂಘರ್ಷದಲ್ಲಿ ನಾಲ್ವರು ಕೊಲ್ಲಲ್ಪಟ್ಟಿದ್ದರು. ಶಂಕಿತರ ಬಳಿಯಿಂದ ಏಳು ಎಕೆ ಅಸಾಲ್ಟ್ ರೈಫಲ್ಗಳು, ಒಂದು ಎಂ4 ರೈಫಲ್, ಮೂರು ಪಿಸ್ತೂಲ್ಗಳು ಮತ್ತು ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ವೈರಲ್ ಆಯ್ತು ಬಿಜೆಪಿ ಮುಖಂಡನ ಪುತ್ರನ ರೌಡಿಸಂ ವಿಡಿಯೋ
ಆದರೆ ಈ ಕಾರ್ಯಾಚರಣೆಯನ್ನು ನಕಲಿ ಎಂದು ಆರೋಪಿಸಲಾಗಿದ್ದು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿತ್ತು. ಅಲ್ಲಿನ ಸೂಚನೆ ಮೇರೆಗೆ ವಿಚಾರಣಾ ಸಮಿತಿ ರಚಿಸಲಾಗಿದೆ.
Jammu, Suspected, terrorist, encounter, Judicial inquiry,