12ರಿಂದ ಹಾಲುಮತ ಸಂಸ್ಕೃತಿ ವೈಭವ

Social Share

ಬೆಂಗಳೂರು,ಜ.10- ರಾಯಚೂರಿನ ಶ್ರೀ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರು ಪೀಠ ತಿಂಥಣಿಬ್ರಿಜ್ ಶ್ರೀ ಮಠದಲ್ಲಿ ಇದೇ 12ರಿಂದ ಮೂರು ದಿನಗಳ ಕಾಲ 16ನೇ ಹಾಲು ಮತ ಸಂಸ್ಕೃತಿ ವೈಭವ-2023 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ಎಂ.ರೇವಣ್ಣ , ಜಾನಪದ, ನಾಟಕ ಸೇರಿದಂತೆ ವಿವಿಧ ಕಲೆಗಳಿಗೆ ಸರ್ಕಾರ ಅಕಾಡೆಮಿ ರೂಪಿಸಿ ಕಲೆಯ ಬೆಳವಣಿಗೆಗೆ ಸಹಕಾರ ನೀಡುತ್ತಿದೆ. ಡೊಳ್ಳು ಕುಣಿತ, ಗೊರವರ ಕುಣಿತ, ಪೂಜಾಕುಣಿತ, ಕರಡಿ ಕುಣಿತದಂತ ಹಲವಾರು ನೃತ್ಯ ಕಲೆಗಳು ಹಾಲು ಮತ ಧರ್ಮದಲ್ಲಿ ಬೆಸೆದುಕೊಂಡಿದೆ.

ಈ 15ಕ್ಕೂ ಹೆಚ್ಚು ಕಲಾಪ್ರಕಾರಗಳು ಸರ್ಕಾರದಿಂದ ಕಡೆಗಣಿಸಲ್ಪಟ್ಟಿದೆ. ಅಕಾಡೆಮಿಯನ್ನು ಸ್ಥಾಪಿಸಬೇಕೆಂಬ ಬೇಡಿಕೆಯನ್ನಿಟ್ಟುಕೊಂಡು 12ರಂದು ಹಾಲುಮತ ಕಲಾವಿದರ ಮತ್ತು ಕಲಾಪ್ರಕಾರಗಳ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ರಾತ್ರಿ ಸಿದ್ದಪುರುಷ ಗಾದಿಲಿಂಗೇಶ್ವರ ನಾಟಕವನ್ನು ಸಹ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗು ಸಾವು..!

13ರಂದು ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಮಧ್ಯಾಹ್ನ ಹಾಲುಮತ ಧರ್ಮ ವೈಶಿಷ್ಟ್ಯ ಹಾಗೂ ರಾಜ್ಯ ಯುವ ಕುರುಬ ಸಂಘದ ಜಿಲ್ಲಾಧ್ಯಕ್ಷರ ಪದಗ್ರಹಣ ನಡೆಯಲಿದೆ. ಕೇಂದ್ರ ಸಚಿವ ಭಗವಂತ ಖೂಬಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

ಗೋವಾದ ಮಾಜಿ ಉಪಮುಖ್ಯಮಂತ್ರಿ ಚಂದ್ರಶೇಖರ್ ಕವಳೆಕರ್, ಎಂಟಿಬಿ ನಾಗರಾಜ್, ಬೈರತಿ ಬಸವರಾಜ್, ಹಾಗೂ ಅಪ್ಪು ಗೌಡ ಪಾಟೀಲ್ ಶಶಿಲಾ ಮೋಸಿ ಇತರೆ ಮುಖಂಡರು ಶಿವನಗೌಡ ನಾಯಕ್ ಪಾಲ್ಗೊಳ್ಳಲಿದ್ದಾರೆ. ಅಂದು ಮಧ್ಯಾಹ್ನ ಟಗರುಗಳ ಕಾಳಗ ಹಾಗೂ ರಾತ್ರಿ ಇಟಗಿ ಭೀಮಾಂಬಿಕೆಯ ನಾಟಕವನ್ನು ಏರ್ಪಡಿಸಲಾಗಿದೆ ಎಂದು ವಿವರಿಸಿದರು.

ಪ್ರಶಸ್ತಿ ಪ್ರದಾನ: ಜ.14 ರಂದು 12:30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದ್ದು, ಹಾಲುಮತ ಭಾಸ್ಕರ ಪ್ರಶಸ್ತಿಗೆ ಅಡಿವೆಪ್ಪ ಮಹಾರಾಜರು, ಕನಕರತ್ನ ಪ್ರಶಸ್ತಿಗೆ ಪ್ರೊ.ಸಿದ್ದಣ್ಣ ಫಕೀರಪ್ಪ ಜಕಬಾಳ ಹಾಗೂ ಸಿದ್ದಶ್ರೀ ಪ್ರಶಸ್ತಿಗೆ ಚಿನ್ನಮ್ಮ ಮುದ್ದಮಗುಡ್ಡಿ ಭಾಜನರಾಗಿದ್ದಾರೆ. ಪುರಸ್ಕೃತರಿಗೆ ತಲಾ 50,000 ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ.

ಸಿದ್ದರಾಮೇಶ್ವರ ಜಯಂತಿಯನ್ನು ರಾಯಚೂರು ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನಿಯನಕೊಪ್ಪ ಉದ್ಘಾಟಿಸಲಿದ್ದಾರೆ. ಬೀದರ್ ಜಿಲ್ಲೆಯ ಮುಖಂಡರಾದ ಅಮೃತರಾವ್ ಚಿಮ್ಕೋಡೆಯವರು ಅಧ್ಯಕ್ಷತೆ ವಹಿಸಲಿದ್ದು, ಆಂಧ್ರದ ಸಂಸದರಾದ ಗೋರಂಟ್ಲ ಮಾಧವ, ಉಷಾ ಶ್ರೀಚರಣ್, ಮಹಿಳಾ ಮತ್ತು ಕಲ್ಯಾಣ ಸಚಿವರು ಪಾಲ್ಗೊಳ್ಳಲಿದ್ದಾರೆ ಎಂದರ.

ಸಂಜೆ 6:30ಕ್ಕೆ ಲಕ್ಷ ದೀಪೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಮೂರು ದಿನಗಳ ಕಾರ್ಯಕ್ರಮಕ್ಕೆ 11 ದೇವರ ಪಲ್ಲಕ್ಕಿಗಳು, ಹಲವಾರು ಪೂಜಾರಿಗಳು ಆಗಮಿಸಲಿದ್ದು, ರಾಜ್ಯದ ಕನಕ ಗುರು ಪೀಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ರೇವಣ್ಣ ಕೋರಿದ್ದಾರೆ.

ವಿಧಾನಸೌಧದೆದುರು ಬಸವಣ್ಣ, ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಜ.13 ರಂದು ಶಂಕುಸ್ಥಾಪನೆ

ಪರಮಪೂಜ್ಯ ಸಿದ್ದರಾಮನಂದ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಹಾಗೂ ಕನಕ ಗುರು ಪೀಠದ ಪೂಜ್ಯ ನಿರಂಜನಾನಂದಪುರಿ ಮಹಾಸ್ವಾಮಿಗಳ, ಪೂಜ್ಯ ಈಶ್ವರಾನಂದಪುರಿ ಮಹಾಸ್ವಾಮಿಗಳ, ಶ್ರೀ ಶಿವಾನಂದಪುರಿ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ವಿಧಾನಪರಿಷತ್ ಸದಸ್ಯ ಹೆಚ್‍ವಿಶ್ವನಾಥ ವಹಿಸಲಿದ್ದಾರೆ, ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ಸುರೇಶ್ ಬೈರತಿ, ರಾಘವೇಂದ್ರ ಹಿಟ್ನಾಳ್ ಹಾಗೂ ಇತರೆ ಮುಖಂಡರು ಭಾಗವಹಿಸಲಿದ್ದಾರೆ.

Jan 12, halumatha, Samskruthi, Raichur,

Articles You Might Like

Share This Article