ಬೆಂಗಳೂರು,ಸೆ.17- ಸಿದ್ದರಾಮೋತ್ಸವದ ಬಳಿಕ ಉತ್ಸಾಹದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ್ಯಂತ ನಡೆಯಲಿರುವ ಜನಾಶೀರ್ವಾದ ಯಾತ್ರೆಗೆ ಹೈಟೆಕ್ ಬಸ್‍ನೊಂದಿಗೆ ಸಜ್ಜಾಗಿದ್ದಾರೆ. 2023ರ ಚುನಾವಣೆಗೆ ಕಾಂಗ್ರೆಸ್ ಸರ್ವಸನ್ನದ್ಧವಾಗಿದ್ದು, ಈಗಾಗಲೇ ಸಿದ್ದರಾಮೋತ್ಸವದಿಂದ ರಾಜ್ಯ ರಾಜಕೀಯದಲ್ಲಿ ಸೃಷ್ಟಿಯಾಗಿದ್ದ ಸಂಚಲನದಿಂದ ಸ್ಪೂರ್ತಿ ಗೊಂಡು ಹೊಸ ಮಾದರಿಯಲ್ಲಿ ಜನಾಶೀರ್ವಾದ ಯಾತ್ರೆಗೆ ಸಿದ್ಧತೆ ನಡೆಸಿದ್ದಾರೆ.
ಆಂಧ್ರದ ಪ್ರತಿಷ್ಠಿತ ಕಂಪೆನಿಯೊಂದು ಈ ಬಸ್ ಸಿದ್ಧಗೊಳಿಸಿದ್ದು, ಇದರಲ್ಲಿ ನಾಲ್ಕು ಸುಖಾಸೀನ, ಹವಾ ನಿಯಂತ್ರಣ ವ್ಯವಸ್ಥೆ, ಎರಡು ಟಿವಿ, ಬಸ್‍ನ ರೂಪ್‍ಗೆ ಹೋಗಲು ಲಿಪ್ಟ್, ಮೀಟಿಂಗ್ ಹಾಲ್, ವಾಸ್‍ರೂಂ ಹಾಗೂ ಅತ್ಯದ್ಬುತ ಲೈಟಿಂಗ್ ವ್ಯವಸ್ಥೆ ಇದೆ.
ಇದನ್ನೂ ಓದಿ : ಬಿಜೆಪಿ ಸರ್ಕಾರದ ಭಾರೀ ಹಗರಣ ಬಾಂಬ್ ಸಿಡಿಸಲು ಜೆಡಿಎಸ್ ಸಿದ್ಧತೆ
ಭಾರತ ಜೋಡೋ ಯಾತ್ರೆ ಮುಗಿಯುತ್ತಿದ್ದಂತೆ ರಾಜ್ಯಾದ್ಯಂತ ಜನಾಶೀರ್ವಾದ ಯಾತ್ರೆ ನಡೆಯಲಿದ್ದು, ಇದಕ್ಕೆ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡರು ತೆರಳಲು ಐಟೆಕ್ ಬಸ್ ಸಿದ್ಧಗೊಂಡಿದೆ. ಸಿದ್ದು ಜನರ ಆಶೀರ್ವಾದ ಕೇಳಲು ಈ ಬಸ್‍ನಲ್ಲಿ ರಾಜ್ಯದ 224 ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ.