ಬೆಂಗಳೂರು, ಡಿ.18- ಹೊಸ ಪಕ್ಷ ಘೋಷಣೆ ಮಾಡುವ ತಯಾರಿಯಲ್ಲಿರುವ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ, ಹಲವು ಮಠಗಳಿಗೆ ಭೇಟಿ ನೀಡಲಿದ್ದು, ಡಿ.21ರಂದು ಪ್ರಮುಖ ಮುಖಂಡರ ಸಭೆ ನಡೆಸಲಿದ್ದಾರೆ.
ಈಗಾಗಲೇ ಬಹಿರಂಗವಾಗಿ ರುವ ಮಾಹಿತಿ ಪ್ರಕಾರ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಸ್ಥಾಪನೆಯಾಗಲಿದ್ದು, ಜನಾರ್ಧನ ರೆಡ್ಡಿ ಅವರು ಅದರ ನೇತೃತ್ವ ವಹಿಸಲಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದಿಂದ ಸ್ರ್ಪಸಲು ನಿರ್ಧರಿಸಿದ್ದು, ಅಲ್ಲಿ ಮನೆ ಮಾಡಿ ಗೃಹ ಪ್ರವೇಶವನ್ನು ಮಾಡಿದ್ದಾರೆ.
ನಮ್ಮ ಹತ್ರ ಅಣುಬಾಂಬ್ ಇದೆ : ಭಾರತಕ್ಕೆ ಬೆದರಿಕೆ ಹಾಕಿದ ಪಾಕ್ ಸಚಿವೆ
ಡಿ.25ರಂದು ಬೆಂಗಳೂರಿನಲ್ಲಿ ಪತ್ರಿಕಾ ಗೋಷ್ಠಿ ನಡೆಸಿರುವುದಾಗಿ ಹೇಳಿರುವ ಅವರು, ರಾಜಕೀಯ ಕುರಿತು ಅಂತಿಮ ನಿರ್ಧಾರವನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ. ನಾಳೆಯಿಂದ ಐದು ದಿನಗಳ ಪ್ರವಾಸ ಕಾರ್ಯಕ್ರಮವನ್ನು ಪ್ರಕಟಿಸಿರುವ ಜನಾರ್ಧನ ರೆಡ್ಡಿ, ಮೊದಲು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಭೇಟಿ ನೀಡುವರು.
ಡಿ.20ರಂದು ಗದಗದ ತೋಂಟದಾರ್ಯ ಶ್ರೀಗಳ ಗದ್ದುಗೆ ಹಾಗೂ ಪುಟ್ಟರಾಜು ಗವಾಯಿಗಳ ಗದ್ದುಗೆ ದರ್ಶನ ಪಡೆಯಲಿದ್ದಾರೆ. ಡಿ.21ರಂದು ಮಸ್ಕಿಯಲ್ಲಿ ಪ್ರಮುಖ ಮುಖಂಡರ ಜೊತೆ ಸಮಾಲೋಚನೆ ನಡೆಸುವರು. ಡಿ.22ರಂದು ಗಂಗಾವತಿಯಲ್ಲಿ ಗ್ರಾಮದೇವತೆ ದುರ್ಗಾದೇವಿ ಜಾತ್ರಾ ಮಹೋತ್ಸವ ಹಾಗೂ ಪ್ರಮುಖ ಮುಖಂಡರ ಭೇಟಿ ಕಾರ್ಯಕ್ರಮ ನಿಗದಿಯಾಗಿದೆ.
ಮೂರು ದಿನಗಳ ಕಾಲ ಅಲ್ಲೇ ತಂಗಲಿದ್ದು, ಡಿ.25ರಂದು ಬೆಂಗಳೂರಿಗೆ ವಾಪಸಾಗಿ ಹೊಸ ಪಕ್ಷದ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
#JanardhanReddy, #PoliticalParty,