ಜನತಾ ಪರಿವಾರದ ನಾಯಕ ಸಿಂ.ಲಿಂ.ನಾಗರಾಜು ವಿಧಿವಶ

Social Share

ಬೆಂಗಳೂರು, ಡಿ.3- ಜನತಾ ಪರಿವಾರದ ಹಿರಿಯ ನಾಯಕ, ಕನ್ನಡಪರ ಹಾಗೂ ರೈತಪರ ಹೋರಾಟಗಾರರಾದ ಸಿಂ.ಲಿಂ.ನಾಗರಾಜು ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 75 ವರ್ಷವಾಗಿತ್ತು. ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.

ಚನ್ನಪಟ್ಟಣ ತಾಲ್ಲೂಕಿನ ಸಿಂಗರಾಜಿಪುರದಲ್ಲಿ ಹೃದಯಾಘಾ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಚನ್ನಪಟ್ಟಣದ ಗಾಂಧಿ ಭವನದಲ್ಲಿ ಮಧ್ಯಾಹ್ನದವರೆಗೂ ಮೃತರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿತ್ತು.

ಚನ್ನಪಟ್ಟಣದಲ್ಲಿ ಅಜಾತಶತ್ರುವೆಂದೇ ಚಿರಪರಿಚಿತರಾಗಿದ್ದ ಅವರು, ಕಳೆದ 1967ರಿಂದಲ್ಲೂ ಸಕ್ರೀಯ ರಾಜಕಾರಣದಲ್ಲಿದ್ದರು. ಕಳೆದ 2011ರಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಅಮೆರಿಕಾಗೂ ಕಾಡುತ್ತಿದೆ ಚೀನಾದ ಟಿಕ್‍ಟಾಕ್ ಭಯ

ಸಾಮಾನ್ಯ ಕಾರ್ಯಕರ್ತರಾಗಿದ್ದ ಸಿ.ಲಿಂ.ನಾಗಾರಾಜು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು, ರಾಜ್ಯಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಒಡನಾಡಿಯಾಗಿದ್ದರು. ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ನಾಗರಾಜು, ಕನ್ನಡಪರ ಹಾಗೂ ರೈತರ ಪರ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.

ಅಪಘಾತಗಳ ನಗರಿ ಎಂಬ ಕುಖ್ಯಾತಿ ಪಾತ್ರವಾದ ಸಿಲಿಕಾನ್‍ಸಿಟಿ ಬೆಂಗಳೂರು

ಅವರಿಗೆ 75 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲು ಅಭಿಮಾನಿ ಬಳಗವು ಸಿಂ.ಲಿಂ-75 ವಜ್ರಮಹೋತ್ಸವ ಅಭಿನಂದನಾ ಸಮಿತಿ ರಚಿಸಲಾಗಿತ್ತು. ಅವರಿಗೆ ವಜ್ರ ಮಹೋತ್ಸವದ ಗೌರವ ಸಲ್ಲಿಸುವ ಮುನ್ನವೇ ನಮ್ಮನ್ನು ಅಗಲಿದ್ದಾರೆ ಎಂದು ಅಭಿಮಾನಿಗಳು ದುಃಖ ವ್ಯಕ್ತಪಡಿಸಿದ್ದಾರೆ.

ಸಿಂ.ಲಿಂ.ನಾಗರಾಜು ಅವರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅಮೆರಿಕಾದ ಮಾಜಿ ಗುಪ್ತಚರ ಅಧಿಕಾರಿಗೆ ರಷ್ಯಾ ಪೌರತ್ವ

Janata Parivar, leader, Nagaraju, passed, away,

Articles You Might Like

Share This Article