ಟೋಕಿಯೋ,ಫೆ.22- ಉಕ್ರೇನ್‍ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸಿರುವುದಕ್ಕಾಗಿ ರಷ್ಯಾವನ್ನು ಜಪಾನ್ ಪ್ರಧಾನಿ ಫುಮಿಯೋ ಕಿಶದಾ ಅವರು ಟೀಕಿಸಿದ್ದಾರೆ. ಜಪಾನ್ ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ತೀವ್ರ ಆರ್ಥಿಕ ದಿಗ್ಬಂಧನ ಸೇರಿದಂತೆ ರಷ್ಯಾ ವಿರುದ್ಧ ಕಠಿಣ ಕ್ರಮಗಳ ಬಗ್ಗೆ ಚರ್ಚೆ ನಡೆಸಲಿದೆ ಎಂದು ಅವರು ಹೇಳಿದ್ದಾರೆ.
ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳನ್ನು ಸ್ವತಂತ್ರ ಎಂಬುದಾಗಿ ಗುರುತಿಸುವ ಡಿಕ್ರೀಗಳಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸಹಿ ಮಾಡಿರುವ ಬೆಳವಣಿಗೆ ಕುರಿತು ಅವರು ಪ್ರತಿಕ್ರಿಯೆ ನೀಡುತ್ತಿದ್ದರು.ಪುಟಿನ್ ಅವರ ಪ್ರಕಟಣೆ ಉಕ್ರೇನ್ ಮೇಲೆ ಸದ್ಯದಲ್ಲಿಯೇ ರಷ್ಯಾ ದಾಳಿ ನಡೆಸಲಿದೆ ಎಂಬ ಭೀತಿಯನ್ನು ಸೃಷ್ಟಿಸಿದೆ.
