ನವದೆಹಲಿ,ಜ.30- ಭಾರತೀಯ ಕ್ರಿಕೆಟಿಗರನ್ನು ಹಿಯಾಳಿಸುವ ತಮ್ಮ ಹಳೆ ಕ್ಯಾತೆಯನ್ನು ಪಾಕ್ ಕ್ರಿಕೆಟಿಗರು ಮತ್ತೆ ಮುಂದುವರೆಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಅದ್ಭುತ ಬೌಲರ್ ಜಸ್‍ಪ್ರಿತ್ ಬೂಮ್ರಾ ಅವರನ್ನು ಹಿಯಾಳಿಸಿರುವ ಪಾಕ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಬ್ದುಲ್ ರಜಾಕ್ ಅವರು ಶಾಹಿನ್ ಆಫ್ರೀದಿ ಅವರನ್ನು ಹಾಡಿ ಹೊಗಳಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಬೌಲರ್ ಬೂಮ್ರಾ ಅವರು ಶಾಹಿನ್ ಆಫ್ರಿದಿಗೆ ಸರಿಸಾಟಿಯಲ್ಲ. ಅವರು ಭವಿಷ್ಯದಲ್ಲಿ ಅಫ್ರಿದಿ ಹತ್ತಿರಕ್ಕೂ ಬರಲು ಸಾಧ್ಯವಿಲ್ಲ ಎನ್ನುವ ಮೂಲಕ ತಮ್ಮ ಭಾರತ ವಿರೋಧಿ ಧೋರಣೆಯನ್ನು ಬಹಿರಂಗಪಡಿಸಿದ್ದಾರೆ.
ಶಾರ್ಜಾದಿಂದ ಬರುತ್ತಿದ್ದ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ
ಶಾಹೀನ್ ಬಹುತ್ ಅಚ್ಚಾ ಹೈ, ಬುಮ್ರಾ ತೋ ಉಸ್ಕೆ ಪಾಸ್ ಭೀ ನಹೀ ಆತಾ (ಶಹೀನ್ ತುಂಬಾ ಒಳ್ಳೆಯವನು. ಬುಮ್ರಾ ಅವನ ಹತ್ತಿರ ಬರುವುದಿಲ್ಲ) ಎಂದು ಅಬ್ದುಲ್ ರಜಾಕ್ ಅವರು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಶಾಹೀನ್ ಅಫ್ರಿದಿ ಮತ್ತು ಜಸ್ಪ್ರೀತ್ ಬುಮ್ರಾ ಪ್ರಸ್ತುತ ಉಪಖಂಡದಲ್ಲಿ ಅತ್ಯಂತ ಮಾರಕ ವೇಗಿಗಳಲ್ಲಿದ್ದಾರೆ. ಸದ್ಯ ಬೂಮ್ರಾ ಗಾಯದಿಂದ ಕ್ರಿಕೆಟ್‍ನಿಂದ ದೂರ ಉಳಿದಿದ್ದಾರೆ. ಆದಾಗ್ಯೂ, ಅವರ ಹಿಂದಿನ ಸಾಧನೆಗಳು ಅವರನ್ನು ಭಾರತೀಯ ಬೌಲಿಂಗ್ ದಾಳಿಯ ಮುಂಚೂಣಿಗೆ ತಂದು ನಿಲ್ಲಿಸಿದೆ.
29ರ ಹರೆಯದ ಬುಮ್ರಾ 30 ಟೆಸ್ಟ್‍ಗಳಲ್ಲಿ 128 ವಿಕೆಟ್‍ಗಳನ್ನು ಪಡೆದಿದ್ದರೆ, 72 ಏಕದಿನ ಪಂದ್ಯಗಳಲ್ಲಿ 121 ವಿಕೆಟ್‍ಗಳನ್ನು ಉರುಳಿಸಿದ್ದಾರೆ. 60 ಟಿ20 ಪಂದ್ಯಗಳಲ್ಲಿ 70 ವಿಕೆಟ್ ಉರುಳಿಸಿದ್ದಾರೆ.
ಆದರೆ, ಪಾಕ್ ತಂಡದ ಎಡಗೈ ವೇಗಿ ಶಾಹೀನ್ 25 ಟೆಸ್ಟ್‍ಗಳಲ್ಲಿ 99 ವಿಕೆಟ್‍ಗಳನ್ನು ಪಡೆದಿದ್ದಾರೆ. 22ರ ಹರೆಯದ ಅವರು 32 ಏಕದಿನ ಪಂದ್ಯಗಳಲ್ಲಿ 62 ವಿಕೆಟ್‍ಗಳನ್ನು ಮತ್ತು 47 ಟಿ20 ಪಂದ್ಯಗಳಲ್ಲಿ 58 ವಿಕೆಟ್‍ಗಳನ್ನು ಉರುಳಿಸಿದ್ದಾರೆ.
ಸರ್ವಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ
ಅಂಕಿ ಅಂಶಗಳ ಪ್ರಕಾರ ಶಾಹೀನ್ ಅವರಿಗಿಂತ ಬೂಮ್ರಾ ಉತ್ತಮ ಸಾಧನೆ ಮಾಡಿರುವುದು ತಿಳಿದಿದ್ದರೂ ಪಾಕ್ ಕ್ರಿಕೆಟ್ ತಂಡದ ಮಾಜಿ ಆಟಗಾರ ನೀಡಿರುವ ಈ ಹೇಳಿಕೆ ಉದ್ದೇಶಪೂರ್ವಕ ಎಂಬುದು ಇದರಿಂದ ಗೊತ್ತಾಗಿದೆ.
Jasprit Bumrah, Shaheen Afridi, Ex-Pakistan, Star, Startling, Claim,