ಬೆಂಗಳೂರು,ಫೆ.13- ಪಂಚಮಶಾಲಿಗಳ ಬೇಡಿಕೆ ಈಡೇರಿಸದಿದ್ದರೆ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ 74 ವಿಧಾನಸಭಾ ಕ್ಷೇತ್ರದಲ್ಲಿ ತೊಂದರೆ ಎದುರಾಗಲಿದೆ ಎಂದು ಬಸವ ಜಯ ಮೃತ್ಯುಂಜಯ ಸ್ವಾಮಿಜಿ ಭವಿಷ್ಯ ನುಡಿದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಶಾಲಿಗಳಿಗೆ ಮೀಸಲಾತಿ ಕಲ್ಪಿಸುವುದಾಗಿ ತಾಯಿ ಮೇಲೆ ಆಣೆ ಪ್ರಮಾಣ ಮಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತ್ತೆ ಮಾತು ತಪ್ಪಿರುವುದರಿಂದ ಹೋರಾಟ ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು.
ಪಂಚಮಶಾಲಿಗಳು ಮಾಜಿ ಸಿಎಂ ಜೆ.ಹೆಚ್.ಪಟೇಲ್ ನಂತರ ನಿಮ್ಮನ್ನು ನಂಬಿದ್ದರೂ ಆದರೂ ನೀವು ಇದುವರೆಗೂ ನಮ್ಮ ಬೇಡಿಕೆ ಈಡೇರಿಸದಿರುವುದರಿಂದ ಬೇಸರವಾಗಿದೆ ಎಂದರು.
ಅಮೆರಿಕದ ಆಕಾಶದಲ್ಲಿ ಕಾಣಿಸಿಕೊಂಡಿದ್ದು ಏಲಿಯನ್ಸ್ ಇರಬಹುದೇ.. ?
ರಾಜ್ಯದಲ್ಲಿ ನಾವು ಸರ್ವೆ ಮಾಡಿಸಿದ್ದೇವೆ. ಇಲ್ಲಿ ಶೇ.15 ರಷ್ಟು ಪಂಚಮಸಾಲಿ ಮತಗಳಿವೆ. ನಮ್ಮನ್ನು ನೀವು ಮತ್ತೆ ಕಡೆಗಣಿಸಿದರೆ ದೊಡ್ಡ ಗಂಡಾಂತರ ರಾಜ್ಯಕ್ಕೆ ಆಗಮಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಮ್ಮ ಬೇಡಿಕೆ ಈಡೇರಿಸಲು ಗಮನ ಹರಿಸಬೇಕು ಇಲ್ಲದಿದ್ದರೆ ಬಿಜೆಪಿಗೆ ಕಷ್ಟವಾಗಲಿದೆ ಎಂದು ಅವರು ತಿಳಿಸಿದರು.
ಪಂಚಮಶಾಲಿಗಳಿಗೆ 2ಎ ಮೀಸಲಾತಿ ನೀಡುವ ಕುರಿತು ಚುನಾವಣಾ ನೀತಿ ಸಂಹಿತೆ ಮುನ್ನ ಘೋಷಣೆ ಮಾಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಶ್ರೀಗಳು ಎಚ್ಚರಿಸಿದರು.
ಬಿಜೆಪಿ ಸರ್ಕಾರದ ಕೊನೆ ಅವೇಶನ ನಡೆಯುತ್ತಿರುವುದರಿಂದ ನಮ್ಮ ಬೇಡಿಕೆ ಈಡೇರಿಸಲು ಮನಸು ಮಾಡಬೇಕು ಇಲ್ಲದಿದ್ದರೆ, ಈ ಬಾರಿ ನಾವು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಲ್ಲ ಪಕ್ಷಗಳ ಶಾಸಕರುಗಳು ಪಕ್ಷಭೇದ ಮರೆತು ನಮ್ಮ ಮೀಸಲಾತಿ ಪರ ದ್ವನಿಯೆತ್ತಲಿ ಇಲ್ಲದೇ ಇದ್ರೇ 2023 ರ ಚುನಾವಣೆಯ ಸಂದರ್ಭದಲ್ಲಿ ನಿಮ್ಮ ವಿರುದ್ಧ ಅಸಮಾಧಾನ ಸೋಟಗೊಳ್ಳಲಿದೆ ಎಂದು ಅವರು ತಿಳಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅಕ್ಕಮಹಾದೇವಿ, ಚನ್ನಮ್ಮ , ಕೆಳದಿ ಶಿವಪ್ಪ ನಾಯಕ ಹೆಸರು ಇಡಲಿ ಎಂದು ಅವರು ಇದೇ ಸಂದರ್ಭದಲ್ಲಿ ಸಲಹೆ ನೀಡಿದರು.
#JayaMrutyunjayaSwamiji, #Warning, #BJP,