ತುಮಕೂರು,ಡಿ.2-ಮುಂದಿನ ವಿಧಾನಸಭೆ ಚುನಾವಣೆಗೆ ಈಗಾಗಲೇ ಘೋಷಣೆ ಮಾಡಿರುವ ಜೆಡಿಎಸ್ ಅಭ್ಯರ್ಥಿಗಳ ಬದಲಾವಣೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರತಿಯೊಂದು ಕ್ಷೇತ್ರದಲ್ಲೂ ಅಭ್ಯರ್ಥಿಗಳು ಮಾಡುವ ಕೆಲಸದ ಮೇಲೆ ತೀರ್ಮಾನ ಮಾಡುತ್ತಾರೆ. ನಾನು ಈಗಾಗಲೇ ಸುಮಾರು 14 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೇನೆ ಎಂದರು.
ಈಗಾಗಲೇ ಘೋಷಣೆಯಾಗಿರುವ ಅಭ್ಯರ್ಥಿಗಳು ಪಂಚರತ್ನ ರಥಯಾತ್ರೆಯಲ್ಲಿ ದೊರೆಯುತ್ತಿರುವ ಜನ ಬೆಂಬಲವನ್ನು ನೋಡಿ ಮೈಮರೆತರೆ ಬದಲಾವಣೆಯಾಗಬಹುದು ಎಂದು ದೇವೇಗೌಡರು ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಚುನಾವಣೆಯಲ್ಲಿ ನಾವು ಜನರ ವಿಶ್ವಾಸದಿಂದ ಗೆಲ್ಲಬೇಕೆ ಹೊರತು. ಕುತಂತ್ರದಿಂದ ಗೆಲ್ಲುವ ಅವಶ್ಯಕತೆ ಇಲ್ಲ ಎಂದು ಅಭ್ಯರ್ಥಿಗಳಿಗೆ ಕಿವಿಮಾತು ಹೇಳಲಾಗಿದೆ. ಕಾರ್ಯಕರ್ತರ ವಿಶ್ವಾಸ ಗಳಿಸಿ ನಾವು ಚುನಾವಣೆಯಲ್ಲಿ ಗೆಲ್ಲಬೇಕಿದೆ ಎಂದರು.
ಪ್ರತಿ ತಿಂಗಳು ನಮಗೂ ಒಂದು ವರದಿ ಬರುತ್ತದೆ. ಅದರ ಆಧಾರದ ಮೇಲೆ ಅಭ್ಯರ್ಥಿಗಳು ಯಾವ ರೀತಿ ಸಂಘಟನೆ ಮಾಡಬೇಕು, ಶ್ರಮ ವಹಿಸಬೇಕು ಎಂಬ ಬಗ್ಗೆ ಮಾರ್ಗದರ್ಶನ ನೀಡಲಾಗುವುದು. ನಮ್ಮಲ್ಲಿರುವ ಸಣ್ಣಪುಟ್ಟ ಸಮಸ್ಯೆಗಳಿಂದ ತುಮಕೂರು ನಗರದಲ್ಲಿ ಸೋಲಿಸಿಲ್ಲ. ಸಂಪರ್ಕದ ಕೊರತೆಯಿಂದಾಗಿ ಸೋತಿದ್ದೇವೆ. ಇದನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಯುಪಿ ಡಿಸಿಎಂಗಳಿಗೆ ಬಂಪರ್ ಆಫರ್ ನೀಡಿದ ಅಖಿಲೇಶ್ ಯಾದವ್
ಮಾಜಿ ಸಚಿವರಾದ ಜಮೀರ್ ಅಹಮ್ಮದ್ ಖಾನ್, ಟಿ.ಬಿ.ಜಯಚಂದ್ರ ಅವರು ಜೆಡಿಎಸ್‍ಗೆ ಸೇರ್ಪಡೆಯಾಗುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಅವರು ಕಾಂಗ್ರೆಸ್ ಟಿಕೆಟ್‍ಗಾಗಿ ಅರ್ಜಿ ಹಾಕಿಕೊಂಡಿದ್ದಾರೆ. ಹಿರಿಯ ನಾಯಕರಾದ ಜಯಚಂದ್ರ ಅವರಿಗೆ ಕಾಂಗ್ರೆಸ್‍ನಲ್ಲಿನ ವಿಷಮ ಪರಿಸ್ಥಿತಿ ಚೆನ್ನಾಗಿ ಗೊತ್ತಿದೆ ಎಂದರು.
ಬಿಜೆಪಿ ಸರ್ಕಾರ ಬರಲು ಕಾಂಗ್ರೆಸ್ ಕಾರಣ ಎಂದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ಷೇತ್ರ ಹುಡುಕಾಟ ಮಾಡುತ್ತಿರುವ ಬಗ್ಗೆ ಲಘುವಾಗಿ ಮಾತನಾಡುವುದಿಲ್ಲ ಎಂದು ಹೇಳಿದರು.
ಗಾಯಕ ಸಿಧು ಮೂಸೆವಾಲಾ ಹಂತಕ ಗೋಲ್ಡಿ ಅಮೆರಿಕಾದಲ್ಲಿ ಸೆರೆ..!
ಮುಂದಿನ ನಾಲ್ಕು ತಿಂಗಳು ಅತ್ಯಂತ ಸೂಕ್ಷ್ಮವಾಗಿದ್ದು, ಪಕ್ಷದ ಮುಖಂಡರು, ಕಾರ್ಯಕರ್ತರು ಮೈಮರೆಯಬಾರದು. ನಮ್ಮ ಗುರಿ 50-60 ಸ್ಥಾನಗಳನ್ನು ಗೆಲ್ಲುವುದಲ್ಲ. 123ರ ಗುರಿ ತಲುಪಬೇಕಾಗಿದೆ. ಅದಕ್ಕಾಗಿ ಪಂಚರತ್ನ ರಥಯಾತ್ರೆಯನ್ನು ಮಾ.25ರವರೆಗೂ ಮುಂದುವರೆಸಲಾಗುವುದು. ಜನ ತೋರುತ್ತಿರುವ ಬೆಂಬಲ ನೋಡಿ ದೇಹಕ್ಕೆ ಆಗುತ್ತಿರುವ ಆಯಾಸವನ್ನು ಮರೆಯುತ್ತಿದ್ದೇನೆ ಎಂದರು.
ನಮ್ಮ ಸಮೀಕ್ಷೆ ಪ್ರಕಾರ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‍ಗೆ ಅಕಾರ ಸಿಗಲಿದೆ. ಎರಡೂ ರಾಷ್ಟ್ರೀಯ ಪಕ್ಷಗಳನ್ನು ದೂರ ಇಡಲು ಜನರು ನಿರ್ಧಾರ ಮಾಡಿದ್ದಾರೆ. ಗಡಿ ವಿವಾದ ಮುಗಿದಿರುವ ಅಧ್ಯಾಯವಾಗಿದ್ದರೂ ಪದೇ ಪದೇ ಏಕೆ ಕೆಣಕುತ್ತಿದ್ದಾರೆ ಎಂದ ಅವರು, ಅಭಿವೃದ್ದಿ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವುದಿಲ್ಲ. ಗಡಿ ವಿವಾದ ಬಿಜೆಪಿಯ ಹುನ್ನಾರವಲ್ಲವೇ ಎಂದು ಅವರು ಇದೇ ಸಂದರ್ಭದಲ್ಲಿ ಟೀಕಿಸಿದರು.
JDS, candidates, announced, hd kumaraswamy,