ಬೆಂಗಳೂರು, ಫೆ.27- ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸಿ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರಬೇಕೆಂಬ ಗುರಿಯೊಂದಿಗೆ ಜೆಡಿಎಸ್ ಪಂಚರತ್ನ ರಥಯಾತ್ರೆ ಹೆಸರಿನಲ್ಲಿ ಪ್ರಚಾರ ಕೈಗೊಂಡಿದೆ. ಆದರೆ, ಅಭ್ಯರ್ಥಿಗಳಿಗೆ ಚುನಾವಣೆ ವೆಚ್ಚದ್ದೇ ದೊಡ್ಡ ಚಿಂತೆಯಾಗಿ ಕಾಡ ತೊಡಗಿದೆ.
ರಾಷ್ಟ್ರೀಯ ಪಕ್ಷಗಳು ಪೈಪೋಟಿ ಗಿಳಿದು ಚುನಾವಣೆ ಸಂದರ್ಭದಲ್ಲಿ ವೆಚ್ಚ ಮಾಡುತ್ತವೆ. ಆ ಪಕ್ಷಗಳ ಅಭ್ಯರ್ಥಿಗಳಿಗೆ ಸರಿಸಮನಾಗಿ ವೆಚ್ಚ ಮಾಡುವ ಶಕ್ತಿ ಬಹಳಷ್ಟು ಅಭ್ಯರ್ಥಿಗಳಿಗೆ ಇಲ್ಲ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಚುನಾವಣೆ ಘೋಷಣೆಯಾಗುವ ಮುನ್ನವೇ ಆಗುತ್ತಿರುವ ವೆಚ್ಚ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಆರ್ಥಿಕ ಸಂಪನ್ಮೂಲಕ್ಕಾಗಿ ವರಿಷ್ಠರತ್ತ ನೋಡುವಂತಾಗಿದೆ. ಚುನಾವಣೆಯಿಂದ ಚುನಾವಣೆಗೆ ವೆಚ್ಚದ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ. ಹಿಂದಿನ ಚುನಾವಣೆ ಗಳಲ್ಲಿ ಚುನಾವಣೆ ಸಂದರ್ಭದಲ್ಲಿ ಮಾತ್ರ ದುಬಾರಿ ವೆಚ್ಚವಾಗುತ್ತಿತ್ತು. ಆದರೆ, ಈಗ ಚುನಾವಣೆ ಆರೇಳು ತಿಂಗಳು ಇರುವಾಗಲೇ ಒಂದರ ಮೇಲೊಂದು ವೆಚ್ಚ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.
ಜಯನಗರ ವಾಣಿಜ್ಯ ಮಳಿಗೆಗಳ ಅಕ್ರಮ ಹಂಚಿಕೆ: ಸಿಐಡಿ ತನಿಖೆಗೆ ಎನ್.ಆರ್.ರಮೇಶ್ ಆಗ್ರಹ
ಕೆಲವು ಸ್ಪರ್ಧಾಕಾಂಕ್ಷಿಗಳು ಈಗಾಗಲೇ ತಮ್ಮ ತಮ್ಮ ಕ್ಷೇತ್ರದ ಜನರಿಗೆ ಪ್ರವಾಸಕ್ಕೆ ಬಸ್ ಭಾಗ್ಯ ಕಲ್ಪಿಸಿದ್ದಾರೆ. ಕುಕ್ಕರ್, ಟಿ ವಿ ಸೇರಿದಂತೆ ಹಲವು ಉಡುಗೊರೆಗಳನ್ನು ನೀಡಿ ಮತದಾರರನ್ನು ಓಲೈಸುವ ಪ್ರಯತ್ನ ಮಾಡತೊಡಗಿದ್ದಾರೆ. ಹೀಗಾಗಿ ಹಣವನ್ನು ಧಾರಾಳವಾಗಿ ಖರ್ಚು ಮಾಡದೇ ಚುನಾವಣೆ ಗೆಲ್ಲುವುದು ಯಾವುದೇ ಅಭ್ಯರ್ಥಿಗೆ ಸುಲಭವಲ್ಲ ಎಂಬ ಲೆಕ್ಕಾಚಾರದಲ್ಲಿ ಬಹಳಷ್ಟು ಜೆಡಿಎಸ್ ಅಭ್ಯರ್ಥಿಗಳಿದ್ದಾರೆ.
ಹಲವು ರೀತಿಯ ಆಮಿಷವೊಡ್ಡಲು ಸಾಧ್ಯವಾಗದಿದ್ದರೂ ಊರಿನ ಹಬ್ಬ, ದೇವಾಲಯದ ನಿರ್ಮಾಣ, ಪುನರುಜ್ಜೀವನ, ಜಾತ್ರೆ, ಸಾಂಸ್ಕøತಿ ಉತ್ಸವಗಳಿಗೆ ನೆರವು ನೀಡಲೇ ಬೇಕು. ಇಲ್ಲವಾದರೆ ಜನರ ಕೆಂಗಣ್ಣಿಗೆ ಗುರಿ ಯಾಗಬೇಕು ಎಂಬ ಆತಂಕವನ್ನು ಕೆಲವು ಅಭ್ಯರ್ಥಿಗಳು ವ್ಯಕ್ತಪಡಿಸಿದ್ದಾರೆ.
ಕೆಲವು ಕ್ಷೇತ್ರಗಳಲ್ಲಿ ಹೊಸದಾಗಿ ಸ್ರ್ಪಧಿಸುವ ಉದ್ದೇಶವುಳ್ಳವರು, ಶಾಸಕರಿಗಿಂತ ದುಪ್ಪಟ್ಟು ನೀಡಿ ಜನರ ಓಲೈಕೆ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅಭಿವೃದ್ಧಿ ಕಾರ್ಯಗಳಿಗಿಂತ ಹಣದ ನಿರೀಕ್ಷೆಯನ್ನೇ ಹೆಚ್ಚು ನೋಡುವುದು ಮಾಮೂಲಿ ಆಗಿದೆ.
ರಾಷ್ಟ್ರೀಯ ಪಕ್ಷಗಳಲ್ಲಿ ಪಕ್ಷದ ವತಿಯಿಂದ ಚುನಾವಣಾ ವೆಚ್ಚಕ್ಕೆ ಹಣ ನೀಡಲಾಗುತ್ತದೆ. ಜೆಡಿಎಸ್‍ನಲ್ಲೂ ಆ ರೀತಿ ಹಣ ನೀಡಿದರೆ ಅನುಕೂಲ. ಈಗಿರುವ ಹಾಲಿ ಶಾಸಕರ ಪೈಕಿ ಹತ್ತು-ಹನ್ನೆರಡು ಮಂದಿ ಮಾತ್ರ ಸ್ವಂತ ಸಂಪನ್ಮೂಲ ಬಳಸಿ ಚುನಾವಣೆ ಎದುರಿಸಬಹುದು. ಉಳಿದವರಿಗೆ ಆ ಸಾಮಥ್ರ್ಯವಿಲ್ಲ ಎಂದು ಹೆಸರು ಬಹಿರಂಗಗೊಳಿಸದ ಶಾಸಕರೊಬ್ಬರು ತಿಳಿಸಿದರು.
ಪ್ರಧಾನಿ ಮೋದಿಗೆ ಥ್ಯಾಂಕ್ಸ್ ಹೇಳಿದ ಕಾಂಗ್ರೆಸ್
ರಾಜ್ಯದ 123 ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಗುರಿ ಹೊಂದಿರುವ ಜೆಡಿಎಸ್ ಮೊದಲ ಹಂತದಲ್ಲಿ 93 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಎರಡನೇ ಹಂತದಲ್ಲಿ 50-60 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲು ಸಿದ್ಧತೆ ನಡೆಸಿದೆ. ಬಹಳಷ್ಟು ಮಂದಿ ಹೊಸಬರನ್ನು ಕಣಕ್ಕಿಳಿಸುತ್ತಿದ್ದು, ಆರ್ಥಿಕವಾಗಿ ಸದೃಢವಾಗಿರುವವರಿಗೆ ಆದ್ಯತೆ ನೀಡಿದೆ. ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರಬೇಕೆಂಬ ಗುರಿ ಹೊಂದಿರುವ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಯಾವ ರೀತಿ ಸಜ್ಜುಗೊಳಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.
JDS, candidates, assembly, elections, campaign,