ಕಳೆದ ಮೂರು ದಿನಗಳಿಂದ ಜೆಡಿಎಸ್ ಅಭ್ಯರ್ಥಿಗಳಿಗೆ ಸೀಕ್ರೆಟ್ ಟ್ರೇನಿಂಗ್

Social Share

ಬೆಂಗಳೂರು,ನ.7-ಮುಂಬರುವ ವಿಧಾನಸಭೆ ಚುನಾವಣೆಯ ಸಂಭವನೀಯ ಅಭ್ಯರ್ಥಿಗಳಿಗೆ ಕಳೆದ ಮೂರು ದಿನಗಳಿಂದ ಜೆಡಿಎಸ್ ನೀಡುತ್ತಿರುವ ಗೌಪ್ಯ ತರಬೇತಿಯು ಗುರುವಾರ ಮುಕ್ತಾಯಗೊಳ್ಳಲಿದೆ. ನಗರದ ಹೊರ ವಲಯದಲ್ಲಿ ಅಭ್ಯರ್ಥಿಗಳಿಗೆ ಚುನಾವಣಾ ಚಾಣಾಕ್ಷರಿಂದ ಚುನಾವಣೆ ಸಿದ್ಧತೆ ಕುರಿತಂತೆ ಜೆಡಿಎಸ್ ವತಿಯಿಂದ ತರಬೇತಿ ನೀಡಲಾಗುತ್ತಿದೆ.

ದೆಹಲಿಯ ಒಂದು ತಂಡ ಹಾಗೂ ಬೆಂಗಳೂರಿನ ಎರಡು ತಂಡಗಳು ಪ್ರತಿ ಕ್ಷೇತ್ರದ ಸಂಭವನೀಯ ಅಭ್ಯರ್ಥಿ ಜತೆ ಪ್ರತ್ಯೇಕ ಸಭೆ ನಡೆಸಿ ಚುನಾವಣೆ ಬಗ್ಗೆ ಮಾರ್ಗದರ್ಶನ ಮಾಡುತ್ತಿವೆ. ಅಭ್ಯರ್ಥಿಗಳ ಸಹಾಯಕರನ್ನು ಹೊರಗಿಟ್ಟು ರಹಸ್ಯವಾಗಿ ತರಬೇತಿ ನೀಡಲಾಗುತ್ತಿದೆ.

ಯಾರು ತರಬೇತಿ ನೀಡುತ್ತಿದ್ದಾರೆ ಎಂಬ ಮಾಹಿತಿಯನ್ನು ಕೂಡ ಬಹಿರಂಗಗೊಳಿಸಿಲ್ಲ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಈ ತರಬೇತಿ ನಡೆಯುತ್ತಿದೆ. ಮೈಸೂರಿನ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ 126 ಕ್ಷೇತ್ರಗಳ ಅಭ್ಯರ್ಥಿಗಳಿಗೆ ಮೊದಲ ಹಂತದಲ್ಲಿ ತರಬೇತಿ ನೀಡಲಾಗುತ್ತಿದೆ. ಪಂಚರತ್ನ ರಥಯಾತ್ರೆ ಆರಂಭವಾದ ಬಳಿಕ ಎರಡನೇ ಹಂತದಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ದೀಪಾವಳಿ ಮುಗಿದರೂ ನಿಲ್ಲದ ಪಟಾಕಿ ಹಾವಳಿ

2023ರ ವಿಧಾನಸಭೆ ಚುನಾವಣೆಯಲ್ಲಿ 123 ಕ್ಷೇತ್ರಗಳಲ್ಲಿ ಗೆಲುವು ಸಾ„ಸಿ ಸ್ವಂತ ಶಕ್ತಿಯ ಮೇಲೆ ಅ„ಕಾರಕ್ಕೆ ಬರಬೇಕು ಎಂಬ ಗುರಿ ಹೊಂದಿರುವ ಜೆಡಿಎಸ್, ತನ್ನ ಸಂಭವನೀಯ ಅಭ್ಯರ್ಥಿಗಳಿಗೆ ಶಿಸ್ತುಬದ್ಧವಾಗಿ ತರಬೇತಿ ನೀಡುತ್ತಿದೆ. ಮೊದಲ ಹಂತದ ಪಟ್ಟಿಯಲ್ಲಿರುವ 126 ಕ್ಷೇತ್ರಗಳ ಬಗ್ಗೆಯೂ ಸಮಗ್ರ ವರದಿಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪಡೆದ ಬಳಿಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್„ಸಿ ಜಯಗಳಿಸಿದ ಹಾಗೂ ಸೋತ ಅಭ್ಯರ್ಥಿಗಳ ವಿಚಾರದಲ್ಲೂ ವರದಿ ಪಡೆದುಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಪಕ್ಷದ ಅಭ್ಯರ್ಥಿ ಗೆದ್ದಿದ ಕ್ಷೇತ್ರದಲ್ಲಿ ಯಾವ ಆಧಾರದ ಮೇಲೆ ಚುನಾಯಿತರಾಗಿದ್ದರು. ಸೋತ ಕ್ಷೇತ್ರಗಳಲ್ಲಿ ಯಾವ ಕಾರಣಕ್ಕಾಗಿ ಸೋತಿದ್ದರು. ಪಕ್ಷದ ಅಭ್ಯರ್ಥಿಯ ದೌರ್ಬಲ್ಯ, ಸಾಮಥ್ರ್ಯ, ನ್ಯೂನ್ಯತೆ ಮೊದಲಾದ ಅಂಶಗಳ ಆಧಾರದ ಮೇಲೆ ವರದಿ ಪಡೆದುಕೊಂಡಿದ್ದಾರೆ.

BIG NEWS : ಆರ್ಥಿಕ ದುರ್ಬಲರಿಗೆ ಶೇ.10ರಷ್ಟು ಮೀಸಲಾತಿ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಕ್ಷೇತ್ರವಾರು ವರದಿ ಆದರಿಸಿ ಮುಂದಿನ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಹಾಗೂ ಚುನಾವಣಾ ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳ ರೀತಿಯಲ್ಲಿ ವಿಶೇಷ ಚುನಾವಣಾ ಪೂರ್ವ ಸಮೀಕ್ಷೆ ನಡೆಸದಿದ್ದರೂ ಆಂತರಿಕವಾಗಿ ವಾಸ್ತವ ಸಂಗತಿಗಳನ್ನು ಪಡೆದುಕೊಂಡಿದ್ದಾರೆ.

ತ್ರಿವೇಣಿ ಸಂಗಮದಲ್ಲಿ ವಿಜೃಂಭಣೆಯ ಲಕ್ಷ ದೀಪೋತ್ಸವ

ಅಲ್ಲದೆ, ರಾಷ್ಟ್ರೀಯ ಪಕ್ಷಗಳು ನಡೆಸಿರುವ ಸಮೀಕ್ಷೆಗಳಿಂದ ನಮ್ಮ ಪಕ್ಷದ ನ್ಯೂನ್ಯತೆಗಳ ಅರಿವಾಗಿದ್ದು, ಪರೋಕ್ಷವಾಗಿ ರಾಜಕೀಯ ಪಕ್ಷಗಳ ಸಮೀಕ್ಷೆಗಳು ಪಕ್ಷ ಬಲಗೊಳಿಸಲು ಸಹಕಾರಿಯಾಗಿವೆ .ಹೀಗಾಗಿ ಪ್ರತಿ ಕ್ಷೇತ್ರಕ್ಕೂ ಭಿನ್ನವಾದ ಕಾರ್ಯತಂತ್ರ ರೂಪಿಸಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

Articles You Might Like

Share This Article