ಮಧುಗಿರಿ,ಡಿ.3- ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವ ನಿರೀಕ್ಷೆಯಿದ್ದು ಸಂಪೂರ್ಣ ಸರ್ಕಾರ ರಚನೆಯಾದ 24 ಗಂಟೆಯಲ್ಲಿ ಸ್ತ್ರೀ ಶಕ್ತಿ ಸಂಘಗಳ ಸಂಪೂರ್ಣ ಸಾಲವನ್ನು ಮನ್ನಾ ಮಾಡಿ ಹೆಣ್ಣು ಮಕ್ಕಳನ್ನು ಋಣಮುಕ್ತರನ್ನಾಗಿ ಮಾಡಲಾಗುವುದೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಪಂಚರತ್ನ ಯೋಜನೆಯ ರಥಯಾತ್ರೆಯೊಂದಿಗೆ ಮಧುಗಿರಿಗೆ ಆಗಮಿಸಿದ ಅವರನ್ನು ಗಡಿಭಾಗದಿಂದಲೂ ಮಹಿಳೆಯರು ಆರತಿ ಮಾಡಿದರೆ ಕಾರ್ಯಕರ್ತರು ಹೂವಿನ ಸುರಿ ಮಳೆಯೊಂದಿಗೆ ಸ್ವಾಗತಿಸಿದರು.
ಪಟ್ಟಣದಲ್ಲಿ ಗ್ರಾಮ ದೇವತೆ ದಂಡಿನ ಮಾರಮ್ಮ ದೇವರ ದರ್ಶನ ಮಾಡಿ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತ ಈ ಕ್ಷೇತ್ರದ ಋಣ ನಮ್ಮ ಮೇಲಿದೆ. ಕಳೆದ ಬಾರಿ ಮಧುಗಿರಿ ಅಭಿವೃದ್ಧಿಗೆ ಮುಂದಾಗುವಾಗಲೇ ನನ್ನ ಸರ್ಕಾರವನ್ನು ಕುತಂತ್ರದಿಂದ ಕಿತ್ತು ಹಾಕಿದರು. ಆದರೂ 25 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದು ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನದ ಜೊತೆಗೆ ಕೈಗಾರಿಕಾ ವಲಯ ಮಂಜೂರು ಮಾಡಿದೆ ಎಂದು ವಿವರಿಸಿದರು.
500ಕೆಜಿ ನಿಷೇಧಿತ ಪ್ಲಾಸ್ಟಿಕ್ ಸೀಜ್, 34 ಸಾವಿರ ರೂ.ದಂಡ
ಪಂಚರತ್ನ ಯೋಜನೆಯ ಮೂಲಕ ಎಲ್ಲರಿಗೂ 50 ಲಕ್ಷದವರೆಗೂ ಉಚಿತ ಆರೋಗ್ಯ ರಕ್ಷೆ, ಮಕ್ಕಳಿಗೆ 1 ರಿಂದ 12 ತರಗತಿಯವರೆಗೂ ಉಚಿತ ಶಿಕ್ಷಣ, ಯುವ ಜನತೆಗೆ ಉದ್ಯೋಗ, ಪ್ರತಿ ಕುಟುಂಬಕ್ಕೂ 10 ಲಕ್ಷದ ಮನೆ, ಹಾಗೂ ಪ್ರತಿ ಗ್ರಾಪಂ ಮಟ್ಟದಲ್ಲಿ ಪ್ರತಿ ದಿನ ಸುಸಜ್ಜಿತ ಆಸ್ಪತ್ರೆಯನ್ನು ಆರಂಭಿಸುವ ಯೋಜನೆಯನ್ನು ಹಾಕಿಕೊಂಡಿದ್ದೇನೆ.
ನಿಮ್ಮ ಮನೆ ಮಗನಿಗೆ ಈ ಯೋಜನೆಗಳ ಜಾರಿಗೆ ನನಗೆ ಆಶೀರ್ವಾದವನ್ನು ಮಾಡಿ ಎಂದರು. ನಂತರ ಜಾಥವು ಪಟ್ಟಣ ಪ್ರವೇಶಕ್ಕೂ ಮುನ್ನಾ ಹಜರತ್ ಸೈಪುಲ್ಲಾ ಖಾದ್ರಿ ದರ್ಗಾಕ್ಕೆ ಭೇಟಿ ಹಾಗೂ ಪಾವಗಡ ವೃತ್ತದ ಬಳಿಯಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಕಾರ್ಯಕರ್ತರು ಬೃಹತ್ ಶೇಂಗಾ ಸೇಬಿನ ಹಾರಗಳನ್ನು ಹಾಕಿ ಸಂಭ್ರಮಿಸಿದರು.
ಮಗು ಸಾವು : ಕಣ್ಣೀರಿಟ್ಟ ಕುಮಾರಸ್ವಾಮಿ, ನಿಖಿಲ್
ಹೆಚ್ಡಿಕೆ ಯೋಜನೆಯ ಬಗ್ಗೆ ಮಾತನಾಡುತ್ತಿದ್ದಾಗಲೇ ಮಗುವಿನ ಸಾವಿನ ಸುದ್ದಿ ಬಂದು ಎಲ್ಲರನ್ನು ಮೂಕರನ್ನಾಗಿಸಿತು. ಹೆಚ್ಡಿಕೆ ಹಾಗೂ ಪುತ್ರ ನಿಖಿಲ್ ಕುಮಾರ ಸ್ವಾಮಿ ಕಣ್ಣೀರಿಟ್ಟರು.
ಸುಂದರ್ ಪಿಚೈಗೆ ಅಮೆರಿಕಾದಲ್ಲಿ ಪದ್ಮಭೂಷಣ ಪ್ರದಾನ
ಇದೇ ಗ್ರಾಮದ ವಾಸಿ ಶೌಕತ್ ಎಂಬುವವರ ಮಗು 4 ವರ್ಷದ ಮಹಮ್ಮದ್ ಅಬ್ಬಾಸ್ ನೀರಿನ ಸೊಂಪಿಗೆ ಬಿದ್ದಿದ್ದು ಯಾರೂ ನೋಡಿಕೊಂಡಿರಲಿಲ್ಲ. ನಂತರ ಮಗುವನ್ನು ಕಂಡು ಆಸ್ಪತ್ರೆಗೆ ಕರೆತಂದರು.
ಆದರೂ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಅಂಬ್ಯುಲೆನ್ಸ್ ಚಾಲಕ ಇಲ್ಲದ ಕಾರಣ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲು ಸಾಧ್ಯವಾಗಲಿಲ್ಲ. ಇದರಿಂದಲೇ ಮಗು ಮೃತಪಟ್ಟಿದೆ ಎಂದು ಪಾಲಕರು ಆರೋಪಿಸಿದರು.
ನಂತರ ಹೆಚ್ಡಿಕೆ ಬಳಿಗೆ ಮಗುವಿನ ಮೃತದೇಹ ತಂದಾಗ ಕುಮಾರಸ್ವಾಮಿ ಮಗುವಿನ ಸ್ಥಿತಿ ಕಂಡು ಮರುಗಿದರು. ನನ್ನ ಮನೆಯಲ್ಲೂ ಒಂದು ಮಗುವಿದೆ. ಇಂತಹ ನೋವು ಯಾವ ತಂದೆ-ತಾಯಿಗೂ ಬಾರಬಾರದು ಎಂದು ಕಣ್ಣೀರಿಟ್ಟರು.
ವೈಯಕ್ತಿಕ ಪರಿಹಾರ ಘೋಷಿಸಿದ ಹೆಚ್ಡಿಕೆ: ಕುಮಾರಸ್ವಾಮಿ ಈ ಮಗುವಿನ ಕುಟುಂಬಕ್ಕೆ ಸ್ಥಳದಲ್ಲೇ ವೈಯಕ್ತಿಕವಾಗಿ ಪರಿಹಾರ ನೀಡುವುದಾಗಿ ಘೋಷಿಸಿದರು. ಇವರಂತೆ ಶಾಸಕ ವೀರಭದ್ರಯ್ಯ ಕೂಡ 1 ಲಕ್ಷ ಪರಿಹಾರ ಘೋಷಿಸಿದರು. ಕರ್ತವ್ಯ ಲೋಪ ಎಸಗಿದ ವೈದ್ಯರನ್ನು ಕೂಡಲೇ ಅಮಾನತುಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.
ಎಲ್.ಸಿ.ನಾಗರಾಜ್ ಗೆ ಟಿಕೆಟ್ ನೀಡಲು ಮನವಿ :
ಕೊಡಿಗೇನಹಳ್ಳಿ ಹೋಬಳಿಗೆ ಪಂಚರತ್ನ ರಥಯಾತ್ರೆ ಆಗಮಿಸುತ್ತಿದ್ದಂತೆ ಚಿಕ್ಕ ಮಾಲೂರು, ದೊಡ್ಡಮಾಲೂರು ಹಾಗೂ ಕೊಡಿಗೇನಹಳ್ಳಿಯಲ್ಲಿ ಕೆಎಎಸ್ ಅಧಿಕಾರಿ ಎಲ್.ಸಿ.ನಾಗರಾಜ್ಗೆ ಜೆಡಿಎಸ್ ಟಿಕೆಟ್ ನೀಡುವಂತೆ ಹೆಚ್ಡಿಕೆ ಕಾರು ತಡೆದು ಮನವಿ ಮಾಡಿದರು.
ದತ್ತ ಜಯಂತಿಗೆ ಬಿಗಿ ಪೊಲೀಸ್ ಬಂದೋಬಸ್ತ್
ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಡಿಕೆ ಸ್ಥಳೀಯರಾದ ಎಲ್.ಸಿ.ನಾಗರಾಜ್ ನನ್ನ ಆಪ್ತರು. ಇವರಿನ್ನೂ ಅಧಿಕಾರಿಯಾಗಿದ್ದಾರೆ. ಆದರೆ ಅವರ ಅಧಿಕಾರಿ ಸ್ಥಾನಕ್ಕೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಈ ವಿಚಾರವನ್ನು ಮುಂದಿನ ದಿನದಲ್ಲಿ ಚರ್ಚೆ ಮಾಡಲಿದ್ದು ಸೂಕ್ತ ನಿರ್ಧಾರ ಮಾಡೋಣ. ಎಲ್ಲರೂ ಜೊತೆಯಾಗಿ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದರು.
JDS, comes, power, women, Loan, hd kumaraswamy,