ಜೆಡಿಎಸ್ ಸ್ವಂತಬಲದ ಮೇಲೆ ಅಧಿಕಾರ ಹಿಡಿಯಲು ಬೆಂಬಲ ನೀಡಿ: ನಿಖಿಲ್

Social Share

ಚನ್ನಪಟ್ಟಣ,ಜ.21- ಯಾವುದೇ ರಾಷ್ಟ್ರೀಯ ಪಕ್ಷಗಳ ಜೊತೆ ಹೊಂದಾಣಿಕೆಗೆ ಅವಕಾಶ ಮಾಡಿಕೊಡದೆ ಸ್ವಂತ ಬಲದ ಮೇಲೆ ರಾಜ್ಯದ ಅಧಿಕಾರ ಹಿಡಿಯಲು ಪ್ರಾದೇಶಿಕ ಪಕ್ಷ ಜೆಡಿಎಸ್‍ಗೆ ಈ ಭಾರಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಲಿದೆ ಎಂದು ರಾಜ್ಯ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‍ಕುಮಾರಸ್ವಾಮಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಕೋಡಂಬಳ್ಳಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ವಿರುಪಾಕ್ಷಿಪುರ ಗ್ರಾಮ ಪಂಚಾಯ್ತಿಯ ವಿರುಪಾಕ್ಷಿಪುರ ಗ್ರಾಮದಲ್ಲಿ ಆಯೋಜನೆ ಮಾಡಲಾಗಿದ್ದ, ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಪೂರ್ವ ಭಾವಿಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಅಲ್ಪತಿಂಗಳು ಮುಖ್ಯಮಂತ್ರಿಯಾಗಿ ಅಕಾರ ನಡೆಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿರವರು ಇತಿಹಾಸದಲ್ಲಿ ಯಾವ ಮುಖ್ಯಮಂತ್ರಿಯು ನಡೆಸದ ಅಧಿಕಾರ ನಡೆಸಿದರು, ಭರವಸೆ ನೀಡಿದಂತೆ ರಾಜ್ಯದ ಜನರಿಗೆ ನಡೆದುಕೊಳ್ಳಲಾಗದಿರಲು ರಾಷ್ಟ್ರೀಯ ಪಕ್ಕಗಳ ಜೊತೆಗಿನ ಹೊಂದಾಣಿಕೆಯೇ ಕಾರಣವಾಗಿದೆ ಎಂದರು.

2023 ರಲ್ಲಿ ಈ ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯದ ಜನರಿಗೆ ನೀಡಿರುವ ಭರವಸೆಗಳನ್ನು ಹಿಡೇರಿಸಲು ರಾಜ್ಯಾವ್ಯಾಪ್ತಿ ಈಗಾಗಲೇ ಜಲಧಾರೆ ಹಾಗೂ ಪಂಚರತ್ನಯಾತ್ರೆಯನ್ನು ಕೈಗೊಂಡಿರುವ ಜೆಡಿಎಸ್ ಪಕ್ಷವು ವಿಧಾನಸಭೆಯಲ್ಲಿ ಸ್ವಂತಬಲದ ಮೇಲೆ ಅಧಿಕಾರ ನಡೆಸುವುದರಲ್ಲಿ ಅನುಮಾನವೇ ಇಲ್ಲ ಎಂದು ತಿಳಿಸಿದರು.

ಜ.23ಕ್ಕೆ ಅಥಿಯಾ ಶೆಟ್ಟಿ-ಕೆ.ಎಲ್.ರಾಹುಲ್ ಮದುವೆ

ರಾಜ್ಯದ ಜನರ ಸಂಕಷ್ಟವನ್ನು ಅರಿತು,ಅವರ ಕಷ್ಟಸುಖಗಳನ್ನುಆಲಿಸಲು ರಾಜ್ಯವ್ಯಾಪ್ತಿ ತನಗೆ 64 ರ ಇಳಿ ವಯಸ್ಸಿನಲ್ಲಿಯೂ ತಮಗೆ ಅನಾರೋಗ್ಯವಿದ್ದರೂ ಲಕ್ಕಿಸದೆ ರಾಜ್ಯವ್ಯಾಪ್ತಿಯಲ್ಲಿ ಪಂಚರತ್ನಯಾತ್ರೆಯನ್ನು ಕೈಗೊಂಡು ಜನರ ಆಶೀರ್ವಾದ ಪಡೆಯುತ್ತಿ ರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿರವರ ಕಾರ್ಯದೊತ್ತಡದಿಂದ ಅವರ ಕೈ ಬಲಪಡಿಸಬೇಕಾದ ಜಾವಬ್ದಾರಿ ನಮ್ಮೆಲ್ಲರದಾಗಿದೆ ಎಂದರು.

ಬಾಲಕನನ್ನ ಕೊಂದು ತಿಂದು ಚಿರತೆ, ಅರಣ್ಯ ಇಲಾಖೆ ವಿರುದ್ಧಗ್ರಾಮಸ್ಥರ ಆಕ್ರೋಶ

ರಾಮನಗರ ಕೇತ್ರದಿಂದ ನನ್ನನ್ನು ಈಗಾಗಲೇ ಆಯ್ಕೆ ಮಾಡಲಾಗಿದ್ದು, ರಾಮನಗರ ಹಾಗೂ ಚನ್ನಪಟ್ಟಣ ಜೆಡಿಎಸ್‍ಗೆ ಅದರಲ್ಲೂ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‍ನ ಸರ್ವೋಚ್ಚನಾಯಕ ಎಚ್.ಡಿ.ದೇವೇಗೌಡ ಕುಟುಂಬಕ್ಕೆ ಎರಡು ಕಣ್ಣುಗಳಾಗಿದ್ದು, ಈ ನಿಟ್ಟಿನಲ್ಲಿ ಎರಡು ಕ್ಷೇತ್ರಗಳಲ್ಲಿನ ಸಂಪೂರ್ಣ ಜಾವಬ್ದಾರಿಯನ್ನು ನಾನೇ ಹೊತ್ತಿರುವುದಾಗಿ ತಿಳಿಸಿದರು.

Articles You Might Like

Share This Article