ನಾಳೆಯಿಂದ ಮತ್ತೆ ಪ್ರಾರಂಭ ಜೆಡಿಎಸ್ ಪಂಚರತ್ನ ರಥಯಾತ್ರೆ

Social Share

ಬೆಂಗಳೂರು, ಡಿ.14-ಮ್ಯಾಂಡೋಸ್ ಚಂಡ ಮಾರುತದ ಪ್ರಭಾವದಿಂದ ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಜೆಡಿಎಸ್ ಪಂಚರತ್ನ ರಥಯಾತ್ರೆ ನಾಳೆಯಿಂದ ಮತ್ತೆ ಮಾಗಡಿ ವಿಧಾನಸಭಾ ಕ್ಷೇತ್ರದಿಂದ ಪ್ರಾರಂಭವಾಗಲಿದೆ.

ಪೂರ್ವ ನಿಗದಿಯಂತೆ ಮೊದಲ ಹಂತದ ಮುಂದುವರೆದ ಪಂಚರತ್ನ ರಥಯಾತ್ರೆಯು ಡಿ.11ರಂದು ಚಿಕ್ಕನಾಯಕನಹಳ್ಳಿ ವಿಧಾನಸಭೆ ಕ್ಷೇತ್ರದಿಂದ ಮರು ಆರಂಭವಾಗಬೇಕಿತ್ತು. ಮಳೆಯಿಂದ ಪಂಚರತ್ನ ರಥಯಾತ್ರೆಯನ್ನು ನಾಲ್ಕು ದಿನಗಳ ಮಟ್ಟಿಗೆ ಮುಂದೂಡಲಾಗಿತ್ತು.

ಕಳೆದ ಒಂದು ವಾರದಿಂದ ನಿರಂತರವಾಗಿ ಬರುತ್ತಿದ ಮಳೆ ಬಿಡುವು ಕೊಟ್ಟಿರುವ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯಿಂದ ಈ ಯಾತ್ರೆಯನ್ನು ಪ್ರಾರಂಭ ಮಾಡಲಾಗುತ್ತದೆ.

ಮಾಜಿ ಮುಖ್ಯಮಂತ್ರಿ ಹೆಚï.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಮೊದಲ ಹಂತದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪಂಚರತ್ನ ರಥಯಾತ್ರೆ ನಡೆಸಲಾಗಿದೆ. ಪೂರ್ವ ನಿಗದಿತ ವೇಳಾಪಟ್ಟಿಯಂತೆ ರಥಯಾತ್ರೆಯು ಚಿಕ್ಕನಾಯಕನಹಳ್ಳಿಯಿಂದ ಶುರುವಾಗಬೇಕಿತ್ತು. ತದನಂತರ ತುರುವೇಕೆರೆ, ತುಮಕೂರು ಗ್ರಾಮಾಂತರ, ಕುಣಿಗಲ್ ಕ್ಷೇತ್ರಗಳಲ್ಲಿ ರಥಯಾತ್ರೆ ನಡೆಯಬೇಕಿತ್ತು.

ನೀರಾವರಿ ಯೋಜನೆಗಳಲ್ಲಿ ನ್ಯಾಯಕ್ಕಾಗಿ ಮೋದಿ ಬಳಿ ಎಚ್‍ಡಿಡಿ ಮನವಿ

ಮಳೆಯಿಂದಾಗಿ ಪಂಚರತ್ನ ರಥಯಾತ್ರೆ ಮಾರ್ಗ, ವೇಳಾಪಟ್ಟಿಯನ್ನು ಕುಮಾರಸ್ವಾಮಿ ಅವರು ಪರಿಷ್ಕರಣೆ ಮಾಡಿದ್ದಾರೆ. ನಾಳೆ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ರಥಯಾತ್ರೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾಗಡಿಯಿಂದ ಆರಂಭವಾಗುವ ಯಾತ್ರೆಯು ರಾಮನಗರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಸಾಗಲಿದೆ.

ಡಿಸೆಂಬರ್ 16ರಂದು ರಾಮನಗರ, 17ರಂದು ಹಾರೋಹಳ್ಳಿ, 18ರಂದು ಕನಕಪುರ, 19ರಂದು ಚನ್ನಪಟ್ಟಣ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆಸಲಾಗುತ್ತದೆ. ಬಳಿಕ ಮಂಡ್ಯ ಜಿಲ್ಲಾಗೆ ರಥಯಾತ್ರೆ ಪ್ರವೇಶ ಮಾಡಲಿದ್ದು, 20ರಂದು ಮಳವಳ್ಳಿ, 21ಕ್ಕೆ ಮದ್ದೂರು, 22ಕ್ಕೆ ಮಂಡ್ಯ, 23ಕ್ಕೆ ಶ್ರೀರಂಗಪಟ್ಟಣ, 24ಕ್ಕೆ ಪಾಂಡವಪುರ, 25ಕ್ಕೆ ಕೆ.ಆರ್.ಪೇಟೆ, 26ಕ್ಕೆ ನಾಗಮಂಗಲ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆಸಲು ಉದ್ದೇಶಿಸಲಾಗಿದೆ.

ಭಾರತ-ಚೀನಾ ಗಡಿ ಸಂಘರ್ಷ ಕುರಿತು ಅಮೇರಿಕ ಪ್ರತಿಕ್ರಿಯೆ ಏನು ಗೊತ್ತೇ..?

ಮತ್ತೆ ತುಮಕೂರು ಜಿಲ್ಲೆಗೆ ರಥಯಾತ್ರೆ ಪ್ರವೇಶ ಮಾಡಲಿದ್ದು, ಡಿಸೆಂಬರ್ 27ರಂದು ತುರುವೇಕೆರೆ, 28ರಂದು ಚಿಕ್ಕನಾಯಕನಹಳ್ಳಿ, 29ರಂದು ತುಮಕೂರು ಗ್ರಾಮಾಂತರ, 30ರಂದು ಕುಣಿಗಲ್ ಕ್ಷೇತ್ರದಲ್ಲಿ ರಥಯಾತ್ರೆ ನಡೆಯಲಿದೆ.

JDS, Pancharatna Rath, Magadi, hd kumaraswamy,

Articles You Might Like

Share This Article