ಜ.5 ರಿಂದ 2ನೇ ಹಂತದ ಪಂಚರತ್ನ ಯಾತ್ರೆ ಪ್ರಾರಂಭ

Social Share

ಬೆಂಗಳೂರು, ಜ.1- ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 123 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿ ಹೊಂದಿರುವ ಜೆಡಿಎಸ್‍ನ ಎರಡನೇ ಹಂತ ಪಂಚರತ್ನ ರಥಯಾತ್ರೆಯು ಜನವರಿ 5ರಿಂದ ಪ್ರಾರಂಭವಾಗಲಿದೆ.

ಕಳೆದ ನವೆಂಬರ 18ರಂದು ಮುಳಬಾಗಿಲಿನಿಂದ ಪ್ರಾರಂಭಿಸಲಾಗಿದ್ದ ಮೊದಲ ಹಂತ ರಥಯಾತ್ರೆಯು ನಿನ್ನೆ ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಪೂರ್ಣಗೊಂಡಿದೆ. ಮೊದಲ ಹಂತದ ರಥಯಾತ್ರೆಯಲ್ಲಿ ಒಟ್ಟು 35 ದಿನಗಳ ಕಾಲ ನಡೆಸಲಾಗಿದೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಈ ಯಾತ್ರೆ ಮೂಲಕ ವಿಧಾನಸಭೆ ಚುನಾವಣಾ ಪ್ರಚಾರ ಕೈಗೊಳ್ಳಲಾಗಿದೆ. ಬೀದರ್‍ನಿಂದ ಜನವರಿ 5ರಂದು ಆರಂಭವಾಗುವ ಎರಡನೇ ಹಂತದ ರಥಯಾತ್ರೆಯು ಒಟ್ಟು 8 ದಿನಗಳ ಕಾಲ ಜರುಗಲಿದೆ.

ಹೊಸ ವರ್ಷಾಚರಣೆ: ನಂದಿಬೆಟ್ಟಕ್ಕೆ ಹರಿದುಬಂದ ಜನಸಾಗರ

ಬೀದರ್ ಮತ್ತು ಕಲ್ಬರ್ಗಿ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿ ರಥಯಾತ್ರೆ ಸಾಗಲಿದೆ. ಈ ಎರಡು ಜಿಲ್ಲೆಗಳಲ್ಲಿ ಪೂರ್ಣಗೊಳಿಸಿದ ಬಳಿಕ ರಥಯಾತ್ರೆಯು ಕಲ್ಯಾಣ ಕರ್ನಾಟಕದ ಕೆಲವು ಕ್ಷೇತ್ರಗಳಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಆನಂತರ ಮಲೆನಾಡು ಭಾಗಕ್ಕೆ ಪ್ರವೇಶಿಸಲಿರುವ ಯಾತ್ರೆ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಸಲಾಗುತ್ತದೆ.

ಮೊದಲ ಹಂತದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಮಂಡ್ಯ ಜಿಲ್ಲೆಗಳಲ್ಲಿ ರಥಯಾತ್ರೆಯು ಯಶ್ವಯಾಗಿ ಪೂರ್ಣಗೊಂಡಿದ್ದು, ಎರಡನೇ ಹಂತದ ಯಾತ್ರೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಮಾರ್ಚ್‍ವರೆಗೂ ಈ ಯಾತ್ರೆ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಲಾಗುತ್ತದೆ. ಮೈಸೂರಿನಲ್ಲಿ ಯಾತ್ರೆಯ ಸಮಾರೋಪ ನಡೆಲಾಗುತ್ತದೆ. ಮಾರ್ಚ್ 15ರೊಳಗೆ ಪಂಚರತ್ನ ರಥಯಾತ್ರೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಕಣಕ್ಕಿಳಿಸಲಿರುವ ಅಭ್ಯರ್ಥಿಗಳಿಗೆ ಈ ಯಾತ್ರೆಯನ್ನು ಯಶಸ್ವಿಗೊಳಿಸುವ ಹೊಣೆಗಾರಿಕೆ ನೀಡಲಾಗಿದೆ. ಯಾತ್ರೆಯ ಸಂದರ್ಭದಲ್ಲಿ ಕುಮಾರಸ್ವಾಮಿ ಅವರಿಗೆ ಸ್ವಾಗತ ಕೋರಿದ ವಿವಿಧ ಬೆಳೆಗಳ – ಸಲಿನ ಬೃಹತ್ ಹಾರಗಳು ಹೊಸ ದಾಖಲೆ ನಿರ್ಮಿಸಿವೆ.

ನಾಡಿನಾದ್ಯಂತ ದೇವಾಲಯಗಳಿಗೆ ಭಕ್ತರ ದಂಡು

ಅಲ್ಲದೆ, ಮೊದಲ ಹಂತದಲ್ಲಿ ಯಾತ್ರೆಯಲ್ಲಿ ಜೆಡಿಎಸ್ ಅಭೂತಪೂರ್ವ ಜನ ಬೆಂಬಲ ದೊರೆತಿದೆ. ಪಂಚರತ್ನ ಯೋಜನೆಗಳ ಜನರ ವಿಶ್ವಾಸಕ್ಕೆ ಪಾತ್ರವಾಗಿವೆ ಎಂದು ಜೆಡಿಎಸ್ ಬಿಂಬಿಸಿದೆ.

jds, pancharatna rath yatra, HD Kumaraswamy,

Articles You Might Like

Share This Article