3ನೇ ದಿನಕ್ಕೆ ಕಾಲಿಟ್ಟ ಜೆಡಿಎಸ್ ಪಂಚರತ್ನ ರಥಯಾತ್ರೆ

Social Share

ಬೆಂಗಳೂರು, ನ.20-ಪಂಚರತ್ನ ರಥಯಾತ್ರೆಯ ಮೂರನೇ ದಿನವಾದ ಮಾಲೂರಿನಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ನಡೆಸಲಾಯಿತು. ಇಂದು ಬೆಳಿಗ್ಗೆ 10 ಗಂಟೆಗೆ ಮಾಲೂರಿನ ಕೆಂಪಸಂದ್ರದಿಂದ ಪ್ರಾರಂಭವಾದ ರಥಯಾತ್ರೆಯು
ಹುಣಸಿಕೋಟೆ , ಕೆ ಜಿ. ಹಳ್ಳಿ, ತೊರಲಕ್ಕಿ , ದಿನ್ನಹಳ್ಳಿ, ಮಾಸ್ತಿ, ಕುಡಿಯನೂರು,ಕೋಡಿಹಳ್ಳಿ ಗೇಟ್, ಸಂಪಂಗೆರೆ, ಚಿಕ್ಕತಿರುಪತಿ, ಲಕ್ಕೂರನಲ್ಲಿ ರಥಯಾತ್ರೆ ನಡೆಸಲಾಯಿತು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ನೇತೃತ್ವದಲ್ಲಿ ಜರುಗಿದ ಈ ರಥಯಾತ್ರೆಗೆ ಭಾರೀ ಜನ ಬೆಂಬಲ ವ್ಯಕ್ತವಾಯಿತು. ಯಾತ್ರೆ ಸಾಗಿದ ಕಡೆಗಳಲ್ಲಿ ಜನರು ಸ್ವಾಗತ ಕೋರಿ ಕುಮಾರಸ್ವಾಮಿ ಅವರಿಗೆ ಸಮಸ್ಯೆಗಳ ಮನವಿ ಸಲ್ಲಿಸಿದರು.

ಎನ್‌ಕೌಂಟರ್‌ನಲ್ಲಿ ಎಲ್‍ಇಟಿ ಭಯೋತ್ಪಾದಕನ ಹತ್ಯೆ

ಇದಕ್ಕೂ ಮುನ್ನ ಕೋಲಾರ ಜಿಲ್ಲೆ ಬಂಗಾರಪೇಟೆ ಕ್ಷೇತ್ರದ ಮಾಗೇರಿ ಗ್ರಾಮದಲ್ಲಿ 2ನೆ ದಿನ ವಾಸ್ತವ್ಯ ಹೂಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಇಂದು ಬೆಳಗ್ಗೆಯೇ ಗ್ರಾಮ ಸಭೆ ನಡೆಸಿದ ಅವರು, ರಾಗಿ, ಟೊಮ್ಯಾಟೋ, ತರಕಾರಿ ತೋಟಗಳ ಬಗ್ಗೆ ಮಾಹಿತಿ ಪಡೆದರು.

ಕಳೆದ ರಾತ್ರಿ ಗ್ರಾಮಸಭೆ ನಡೆಸಿದಾಗ ಮನವಿಗಳ ಮಹಾಪೂರವೇ ಹರಿದು ಬಂತು. ವಾಸ್ತವ್ಯವಿದ್ದ ಇಡೀ ಗ್ರಾಮ ತಳಿರು ತೋರಣಗಳಿಂದ ಅಲಂಕಾರಗೊಂಡಿತ್ತು. ಮನೆಗಳ ಮುಂದೆ ರಂಗೋಲಿ, ಬಾಳೆ ಕಂಬಗಳಿಂದ ಅಲಂಕರಿಸಿದ್ದರಿಂದ ಗ್ರಾಮದಲ್ಲಿ ಹಬ್ಬ ವಾತಾವರಣ ನಿರ್ಮಾಣವಾಗಿತ್ತು.

ಮಂಗಳೂರಿನಲ್ಲಿ ಆಟೋರಿಕ್ಷಾ ಸ್ಪೋಟ ಕುರಿತು ಗೃಹಸಚಿವರ ಪ್ರತಿಕ್ರಿಯೆ

ಗ್ರಾಮಸ್ಥರ ಜತೆ ಸಂವಾದ, ಚರ್ಚೆ, ವಿಚಾರ ವಿನಿಮಯ ಮಾಡಿದರಲ್ಲದೆ, ಪಂಚರತ್ನ ಯೋಜನೆಗಳ ಬಗ್ಗೆ ಐದು ಪಂಚರತ್ನ ವಾಹನಗಳ ಮೂಲಕ ಪ್ರಾತ್ಯಕ್ಷಿಕೆ ನೀಡಿದ ರು. ಅಷ್ಟೇ ಅಲ್ಲ, ವಿಕಲಚೇತನರು, ವೃದ್ಧರ ಜತೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಮಹಿಳೆಯರು, ಯುವಕರು, ರೈತರು, ವೃದ್ಧರನ್ನು ಭೇಟಿಯಾಗಿ ರಾತ್ರಿ ಐತಿಹಾಸಿಕ ವೆಂಕಟರಮಣ ದೇವರ ದೇವಾಲಯದಲ್ಲಿ ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದರು. ಇಂದು ಬೆಳಗ್ಗೆ ಈ ದೇವಾಲಯದಲಲಿ ವಿಶೇಷ ಪೂಜೆ ಸಲ್ಲಿಸಿ ರಥಯಾತ್ರೆ ಆರಂಭಿಸಿದರು.

ಮಂಗಳೂರು ಆಟೋ ಸ್ಪೋಟ ಆಕಸ್ಮಿಕವಲ್ಲ, ಭಯೋತ್ಪಾದನಾ ಕೃತ್ಯ

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್‍ಗೌಡ ಸೇರಿದಂತೆ ಸ್ಥಳೀಯ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.

JDS, Pancharatna, Rath, Yatra, Malur, hd kumaraswamy,

Articles You Might Like

Share This Article