ಬೆಂಗಳೂರು,ಡಿ.4- ಜೆಡಿಎಸ್ ಆರಂಭಿಸಿರುವ ಪಂಚರತ್ನ ರಥಯಾತ್ರೆ ಹಾಗೂ ಪಂಚರತ್ನ ಯೋಜನೆಗಳಿಗೆ ಜಾಗತಿಕವಾಗಿಯೂ ಜನ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಜಗತ್ತಿನ ಯಾವುದೇ ಮೂಲೆಯಲ್ಲಿ ಇದ್ದರೂ ಕನ್ನಡ ಸೊಗಡನ್ನು ಪ್ರೀತಿಸುವ ಸಂತೋಷ್ ಅವರಂಥ ಕನ್ನಡ ಹೃದಯಗಳಿಗೆ ನಾನು ಆಭಾರಿ ಎಂದಿದ್ದಾರೆ.
ಪಂಚರತ್ನ ರಥಯಾತ್ರೆ ಹಾಗೂ ಪಂಚರತ್ನ ಯೋಜನೆಗಳಿಗೆ ಜಾಗತಿಕವಾಗಿಯೂ ಜನ ಬೆಂಬಲ ವ್ಯಕ್ತವಾಗುತ್ತಿದೆ. ಒಳ್ಳೆಯ ಕಾರ್ಯಕ್ರಮಗಳಿಗೆ ಸದಾ ಬೆಂಬಲ ಇರುತ್ತದೆ ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ.#ಪಂಚರತ್ನ_ರಥಯಾತ್ರೆ #ಜಪಾನ್ #Japan pic.twitter.com/sIL4M9sMTX
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 4, 2022
ಜಪಾನ್ ದೇಶದಲ್ಲಿರುವ ಅವರು ಹಾಗೂ ಅವರ ಗೆಳೆಯರು, ಪುಟ್ಟ ಕಂದಮ್ಮ ತೋರಿದ ವಿಶ್ವಾಸಕ್ಕೆ ನನ್ನ ಮನಃಪೂರ್ವಕ ಅಭಿವಂದನೆಗಳು ಎಂದು ಹೇಳಿದ್ದಾರೆ.
ಇಂದು ರಾಜಸ್ಥಾನ ಪ್ರವೇಶಿಸಲಿರುವ ಭಾರತ್ ಜೊಡೊ ಯಾತ್ರೆ
ಒಳ್ಳೆಯ ಕಾರ್ಯಕ್ರಮಗಳಿಗೆ ಸದಾ ಬೆಂಬಲ ಇರುತ್ತದೆ ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ ಎಂದು ಅವರು ತಿಳಿಸಿದ್ದಾರೆ.
ಮಾನವ ಹಕ್ಕುಗಳ ಆಯೋಗದಿಂದ ತಮಿಳುನಾಡು, ಬಿಹಾರ ಸರ್ಕಾರಗಳಿಗೆ ನೊಟೀಸ್
JDS, Pancharatna Ratha Yatra, hd kumaraswamy, #ಪಂಚರತ್ನ_ರಥಯಾತ್ರೆ #ಜಪಾನ್ #Japan