ಭದ್ರಾವತಿಯಿಂದ ಪಂಚರತ್ನ ರಥಯಾತ್ರೆ ಪುನಾರಂಭ

Social Share

ಬೆಂಗಳೂರು,ಫೆ.21-ಮಹಾ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಪಂಚರತ್ನ ರಥಯಾತ್ರೆಗೆ ಬಿಡುವು ನೀಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಇಂದಿನಿಂದ ರಥಯಾತ್ರೆಯನ್ನು ಮರು ಆರಂಭ ಮಾಡಿದ್ದಾರೆ.

ಶಿವಮೊಗ್ಗ ಜಿಲ್ಲಾಯ ಭದ್ರಾವತಿ ಕ್ಷೇತ್ರದಿಂದ ರಥಯಾತ್ರೆ ಶುರುವಾಗಿದ್ದು, ಒಟ್ಟು 9 ಕ್ಷೇತ್ರಗಳಲ್ಲಿ ಈ ಯಾತ್ರೆ ನಡೆಸಲಾಗುತ್ತದೆ. ನಾಳೆ ಶಿವಮೊಗ್ಗ ಗ್ರಾಮಾಂತರ, 23ರಂದು ಸೊರಬ, 24ರಂದು ಯಲ್ಲಾಪುರ ಮತ್ತು ತೀರ್ಥಹಳ್ಳಿ, 25ರಂದು ತೀರ್ಥಹಳ್ಳಿ ಹಾಗೂ ಕೊಪ್ಪ, ಫೆ.26ರಂದು ಶೃಂಗೇರಿ, ಕೊಪ್ಪ, 28ಕ್ಕೆ ಚಿಕ್ಕಮಗಳೂರು ಹಾಗೂ ಮಾರ್ಚ್ 1ರಂದು ಮೂಡಿಗೆರೆ ಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆ ನಡೆಯಲಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ವಿಮಾನಕ್ಕೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದ ಪ್ರಯಾಣಿಕನ ಬಂಧನ

ಈ ತಿಂಗಳ 27ರಂದು ಪಕ್ಷದ ಬೃಹತ್ ಸಮಾವೇಶ ಹಮ್ಮಿಕೊಳ್ಳುವ ಹಿನ್ನೆಲೆಯಲ್ಲಿ ಅಂದು ಪಂಚರತ್ನ ರಥಯಾತ್ರೆಗೆ ಬಿಡುವು ಕೊಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸಿ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರಬೇಕೆಂಬ ಗುರಿಯೊಂದಿಗೆ ಪಂಚರತ್ನ ರಥಯಾತ್ರೆ ಮೂಲಕ ಚುನಾವಣಾ ಪ್ರಚಾರ ಕೈಗೊಳ್ಳಲಾಗಿದೆ. ಈಗಾಗಲೇ 93 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದ್ದು, ಚುನಾವಣೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಬೀದಿ ಜಗಳಕ್ಕಿಳಿದ ರೂಪ – ರೋಹಿಣಿ ಎತ್ತಂಗಡಿ..?

ಎರಡನೇ ಹಂತದಲ್ಲಿ 50-60 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಸಧ್ಯದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

jds, pancharatna yatra, Bhadravati, HD Kumaraswamy,

Articles You Might Like

Share This Article