ಜೆಡಿಎಸ್‍ ಪಂಚರತ್ನ ರಥಯಾತ್ರೆಗೆ ಅಭೂತಪೂರ್ವ ಬೆಂಬಲ

Social Share

ಬೆಂಗಳೂರು, ನ.19- ನಿನ್ನೆ ಪ್ರಾರಂಭವಾದ ಜೆಡಿಎಸ್‍ನ ಪಂಚರತ್ನ ರಥಯಾತ್ರೆ ಹಾಗೂ ಗ್ರಾಮ ವಾಸ್ತವ್ಯದ ಕಾರ್ಯಕ್ರಮಕ್ಕೆ ಜನರು ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಊರುಕುಂಟೆ ಮಿಟ್ಟೂರಿನಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಜನರಿಂದ ಸಿಗುತ್ತಿರುವ ಬೆಂಬಲದಿಂದ ನಮ್ಮ ಮುಂದಿನ ಹೋರಾಟಕ್ಕೆ ಶಕ್ತಿ ತುಂಬಿದಂತಾಗಿದೆ. ಶಿಕ್ಷಣ, ಆರೋಗ್ಯ, ಕೃಷಿಯಲ್ಲಿ ಇರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಕೆಲಸವಾಗಬೇಕು.ಯಾವ ಸರ್ಕಾರ ಕೂಡ ರೈತನಿಗೆ ಶಾಶ್ವತ ಪರಿಹಾರ ನೀಡಿಲ್ಲ ಎಂದು ಹೇಳಿದ್ದಾರೆ. ಉದ್ಯೋಗ ಇಲ್ಲದಿರುವುದರಿಂದ ಯುವಕರಿಗೆ ಮದುವೆಯಾಗಲು ಹೆಣ್ಣು ಮಕ್ಕಳನ್ನು ಕೊಡುತ್ತಿಲ್ಲ.

ನಮ್ಮ ಪಕ್ಷ ಅಧಿಕಾರಕ್ಕೆ ಬಂದ 5 ವರ್ಷದಲ್ಲಿ ಪಂಚರತ್ನ ಕಾರ್ಯಕ್ರಮಗಳನ್ನು ಜಾರಿ ಮಾಡದಿದ್ದರೆ ಪಕ್ಷ ವಿಸರ್ಜನೆ ಮಾಡುವುದಾಗಿ ಪುನರುಚ್ಚರಿಸಿದ್ದಾರೆ. ರೈತ ಕುಟುಂಬದಲ್ಲಿ ಜನಿಸುವ ಮಕ್ಕಳಿಗೆ ವಧು ಸಿಗುತ್ತಿಲ್ಲ ಎಂಬ ವರದಿ ನೋಡಿದೆ.

ಬಸವನಗುಡಿಯಲ್ಲಿ ಕಡಲೆಕಾಯಿ ಪರೀಷೆಗೆ ನಾಳೆ ಸಿಎಂ ಚಾಲನೆ

ಇಂತಹ ದಿನಗಳನ್ನು ನೋಡುತ್ತಿದ್ದೆ. ಆದರೆ, ರೈತರ ಅಭಿವೃದ್ಧಿಗೆ ಯೋಜನೆಗಳನ್ನು ತರುವುದು ನಮ್ಮ ಕೆಲಸ. ಸರ್ಕಾರ ಆರ್ಥಿಕ ನೆರವನ್ನು ಯುವಕರಿಗೆ, ಯುವತಿಯರಿಗೆ ಕೊಡುವ ಮೂಲಕ ಅವರು ಕೆಲವರಿಗೆ ಉದ್ಯೋಗ ಕೊಡುವಂತೆ ಮಾಡಬೇಕು ಎಂಬುದು ನನ್ನ ಆಶಯ ಎಂದರು.

ವೋಟರ್ ಐಡಿ ಅಕ್ರಮವೋ, ಸಕ್ರಮವೋ ಅದು ಬೇಕಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಗೆ ಚರ್ಚಿಸಲು ಬೇರೆ ವಿಷಯ ಇಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡೋದನ್ನು ಈ ಸರ್ಕಾರದ ಅವಧಿಯಲ್ಲಿ ಕಾಣುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಮತದಾರರ ವೈಯಕ್ತಿಕ ಮಾಹಿತಿ ಕಳುವಿನ ಬಗ್ಗೆ ದಾಖಲೆ ಸಿಕ್ಕಿಲ್ಲ: ತುಷಾರ್ ಗಿರಿನಾಥ್

ಸರ್ಕಾರದ ವೈಫಲ್ಯದ ಬಗ್ಗೆ ಚರ್ಚೆ ಮಾಡಲ್ಲ. ಈ ವೋರ್ಟ ಐಡಿಯಿಂದ ಮಹಾನ್ ಆಪತ್ತು ಬರುತ್ತೆ ಅಂತ ನನಗೇನೂ ಅನ್ನಿಸುವುದಿಲ್ಲ ಎಂದು ಹೇಳಿದ್ದಾರೆ.

ತಿಮ್ಮಕ್ಕ ಮತ್ತು ಅವರ ಪತಿ ಮನೆಕಟ್ಟಿಸಿಕೊಡುವಂತೆ ಊರುಕುಂಟೆ ಮಿಟ್ಟೂರಿನ ಹೊರವಲಯದಲ್ಲಿ ಮನವಿ ಮಾಡಿದರು. ಅನೇಕ ವರ್ಷಗಳಿಂದ ಗುಡಿಸಿಲಿನಲ್ಲಿ ವಾಸಿಸುತ್ತಿರುವ ದಂಪತಿಗಳ ಮನವಿಗೆ ಸ್ಪಂದಿಸಿದ ಕುಮಾರಸ್ವಾಮಿ, ಮನೆ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಮಕ್ಕಳಾಗಲಿಲ್ಲವೆಂದು ರುಬ್ಬುಕಲ್ಲಿನಿಂದ ಜಜ್ಜಿ ಮಹಿಳೆಯ ಕೊಲೆ

jds, pancharatna, yatra, kolar, HD kumaraswamy,

Articles You Might Like

Share This Article