ರಾಜ್ಯದಲ್ಲಿ ಜನ ಬದಲಾವಣೆ ಬಯಸುತ್ತಿದ್ದಾರೆ : ಹೆಚ್‌ಡಿಕೆ

Social Share

ಬೆಂಗಳೂರು,ನ.21-ರಾಜ್ಯದ ಜನರು ಹೊಸ ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಕೋಲಾರ ವಿಧಾನ ಸಭಾಕ್ಷೇತ್ರಕ್ಕೆ ಪಂಚರತ್ನ ರಥಯಾತ್ರೆ ತೆರಳುವ ಮುನ್ನ ಶಿವಾರಪಟ್ಟಣದಲ್ಲಿ ಮಾತನಾಡಿದ ಅವರು, ಕೋಲಾರ ಜಿಲ್ಲಾಯ ಮೂರು ಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆಗೆ ಜನರು ಸ್ವಪ್ರೇರಣೆಯಿಂದ ಬೆಂಬಲ ನೀಡಿದ್ದಾರೆ. ಜನರಿಗೆ ಹೊಸ ಬದಲಾವಣೆ ಬೇಕಾಗಿದೆ ಎಂಬುದು ಕಾಣುತ್ತಿದೆ ಎಂದಿದ್ದಾರೆ.

ಪಂಚರತ್ನದ ಅದ್ಬುತ ಕಲ್ಪನೆ ಅನುಷ್ಠಾನ ಮಾಡಲಿಕ್ಕೆ ಸಾಧ್ಯವೆ ಎಂದು ಕೇಳುತ್ತಾರೆ. ಆದರೆ, ಸರ್ಕಾರಕ್ಕೆ ಬದ್ಧತೆ ಇದ್ದರೆ ಯಾವುದು ಅಸಾಧ್ಯವಲ್ಲ. ಸ್ವತಂತ್ರವಾದ ಸರ್ಕಾರವನ್ನು ರಾಜ್ಯದ ಜನರು ನೀಡಿದಾಗ ಅನುಷ್ಠಾನಕ್ಕೆ ಕಷ್ಟವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಲವ್ ಜಿಹಾದ್ ನಿಷೇಧ ಕಾಯ್ದೆ ಜಾರಿಗೆ ಸರ್ಕಾರ ಚಿಂತನೆ

ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಅವತ್ತಿನ ಸಮಸ್ಯೆಗಳು, ಆರ್ಥಿಕ ಪರಿಸ್ಥಿತಿಗಳು ಬೇರೆ ಬೇರೆ ಇದ್ದವು. ಆಡಳಿತ ನಡೆಸಿದವರು ಹಲವು ಸವಾಲುಗಳನ್ನು ಎದುರಿಸಿದ್ದಾರೆ. ಕೆಲವು ಪ್ರಗತಿಯನ್ನು ಕಂಡಿದ್ದೇವೆ. ಒಬ್ಬೊಬ್ಬರು ಒಂದೊಂದು ರೀತಿಯ ಚಿಂತನೆ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ಕೊಟ್ಟಿದ್ದಾರೆ. ಆ ಬಗ್ಗೆ ಹಾಗೂ ಬೇರೆ ಪಕ್ಷದ ನಾಯಕರ ಬಗ್ಗೆ ಲಘುವಾಗಿ ಮಾತಾಡಲ್ಲ ಎಂದು ಹೇಳಿದ್ದಾರೆ.

ಪ್ರಗತಿಯ ನಡುವೆಯು ಶ್ರೀಮಂತ, ಬಡವ ಎಂಬ ಅಂತರ ಬಹಳ ದೊಡ್ಡ ಮಟ್ಟದಲ್ಲಿ ಕಾಣುತ್ತಿದೆ. ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ವಲಸೆ ಹೋಗಿರುವ ಶ್ರಮ ಜೀವಿಗಳು ಬದುಕು ಕಟ್ಟಿಕೊಳ್ಳುವ ದುಸ್ಥಿತಿ ಕಾಣುತ್ತಿದ್ದೇವೆ. ಜಿಡಿಪಿಯಿಂದ ಬೆಳವಣಿಗೆ ಗ್ರಾಫ್ ಮೇಲೆ ಹೋದರೆ ಸಾಲದು. ಗ್ರಾಫ್ ಏರಿಕೆಯಿಂದ ನಾವು ಆರ್ಥಿಕವಾಗಿ ಸುಭದ್ರವಾಗಿ ಇದ್ದೇವೆ ಎಂದು ಹೇಳೋದೆ ಬೇರೆ ಎಂದು ವ್ಯಾಖ್ಯಾನಿಸಿದ್ದಾರೆ.

ಆದರೆ, ರೈತರ ಬದುಕು ಹಸನಾಗಿಲ್ಲ. ದೇಶದ ಅಭಿವೃದ್ಧಿಗೆ ರೈತರ ಕೊಡುಗೆ ಬಹಳ ದೊಡ್ಡ ಮಟ್ಟದಲ್ಲಿದೆ. ರೈತರ ಬದುಕನ್ನು ಹಸನು ಮಾಡಲು ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸವಾಗಬೇಕು. ಅತ್ಯಂತ ಕಷ್ಟ ಪರಿಸ್ಥಿತಿಯಲ್ಲೂ ಕೃಷಿ ವಲಯದಲ್ಲಿನ ಅಭಿವೃದ್ಧಿಗೆ ರೈತರ ಕೊಡುಗೆ ಇದೆ. ಆದರೂ ನಾವು ರೈತರನ್ನು ನಿರ್ಲಕ್ಷ್ಯ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಮಂಗಳೂರು ಸ್ಪೋಟದ ರುವಾರಿ ಶಾರೀಕ್‍ಗೆ ಐಸಿಸ್ ಲಿಂಕ್

ಶ್ರೀಮಂತ ಮನೆಯವರು 10 ಲಕ್ಷ ರೂಪಾಯಿಯಾದರೂ ಶಿಕ್ಷಣ, ಆರೋಗ್ಯ ವಿಚಾರಕ್ಕೆ ಖರ್ಚು ಮಾಡುತ್ತಾರೆ. ಬಡತನ ಇರುವ ಕುಟುಂಬದವರಿಗೆ ಆರೋಗ್ಯ ತೊಂದರೆ ಉಂಟಾದಾಗ ಅವರ ಜೀವನ ಹಾಳಾಗುತ್ತದೆ. ಅಂಬೇಡ್ಕರ್, ವೀರಶೈವ, ಎಸ್.ಟಿ. ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಿದ್ದರೂ ಬಡತನವನ್ನು ಹೋಗಲಾಡಿಸಲು ಸಾಧ್ಯವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಶಿವಾರಪಟ್ಟಣದಲ್ಲಿ ಇಂದು ಬೆಳಗ್ಗೆ 4ನೇ ದಿನದ ಪಂಚರತ್ನ ರಥಯಾತ್ರೆ ಅರಂಭಕ್ಕೂ ಮುನ್ನ ಜನರ ಅಹವಾಲು ಆಲಿಸಿದ ಕುಮಾರಸ್ವಾಮಿ, ಕೆಲವರ ಸಮಸ್ಯೆಗೆ ಸ್ಥಳದಲ್ಲಿಯೇ ಬಗೆಹರಿಸುವ ಪ್ರಯತ್ನ ಮಾಡಿದರು.

ಇಂಡೋನೇಷ್ಯಾದಲ್ಲಿ ಭೂಕಂಪ, 20 ಸಾವು, 300ಕ್ಕೂ ಹೆಚ್ಚು ಮಂದಿಗೆ ಗಾಯ

ಈ ಸಂದರ್ಭದಲ್ಲಿ ಸಾ„ಕ್ ಎಂಬ ಯುವಕನಿಗೆ ಕಿಡ್ನಿ ಆಪರೇಷನ್‍ಗೆ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದರು.
ಬಳಿಕ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಿಧ್ಯಾಭ್ಯಾಸ ಮಾಡಿದ ಶಿವಾರಪಟ್ಟಣ ಸರ್ಕಾರಿ ಶಾಲೆಯ ಮೈದಾನದಲ್ಲಿ ನೇರಳೆ ಗಿಡ ನೆಟ್ಟರು. ಪಟ್ಟಣದ ಹೊರಭಾಗದಲ್ಲಿರುವ ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

jds, pancharatna, yatra, malur, hd kumaraswamy,

Articles You Might Like

Share This Article