ಬೆಂಗಳೂರು, ಮಾ. 17- ಮೈಸೂರಿನಲ್ಲಿ ನಡೆಸಲು ನಿರ್ಧರಿಸಲಾಗಿರುವ ಜೆಡಿಎಸ್ ಪಂಚರತ್ನ ರಥಯಾತ್ರೆಯ ಸಮಾರೋಪದ ಪೂರ್ವಭಾವಿ ಸಭೆ ನಾಳೆ ನಡೆಯಲಿದೆ. ಸಮಾರೋಪ ಸಮಾರಂಭದ ಮೂಲಕ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ಮಾಡಲು ಉದ್ದೇಶಿಸಲಾಗಿದೆ.
ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂದ ನೇತೃತ್ವದಲ್ಲಿ ಮೈಸೂರಿನಲ್ಲಿ ನಡೆಯುವ ಸಮಾರಂಭದ ಪೂರ್ವ ಸಿದ್ಧತಾ ಸಭೆ ಜರುಗಲಿದೆ.
ನಾಳೆ ಮಧ್ಯಾಹ್ನ ಜೆ.ಪಿ. ಭವನದಲ್ಲಿ ಈ ಸಭೆ ನಡೆಯಲಿದ್ದು, ಪಕ್ಷದ ಶಾಸಕರು, ನಾಯಕರು ಮುಖಂಡರು ಸಮಾಲೋಚನೆ ನಡೆಸಿ ಪಂಚರತ್ನ ರಥಯಾತ್ರೆಯ ಸಮಾರೋಪದ ರೂಪುರೇಷೆ ನಿರ್ಧರಿಸಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ನಾಳೆ 108 ಅಡಿ ಮಾದಪ್ಪ ಪ್ರತಿಮೆ ಲೋಕಾರ್ಪಣೆ
ಮೈಸೂರಿನಲ್ಲಿ ಮಾ.26ರಂದು ನಡೆಸಲು ತೀರ್ಮಾನಿಸಿರುವ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಲಕ್ಷಾಂತರ ಕಾರ್ಯಕರ್ತರು ಹಾಗೂ ಜನರು ಸೇರುವ ನಿರೀಕ್ಷೆ ಇದೆ. ಮುಂಬರುವ ವಿಧಾನಸಭೆ ಚುನಾಣೆಯ ಹಿಲ್ಲೆಯಲ್ಲಿ ಈ ಸಮಾರಂಭವನ್ನು ದೊಡ್ಡ ಮಟ್ಟದಲ್ಲಿ ಮಾಡಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ. ಅಂದರೆ, ನೆಲಮಂಗಲದ ಬಳಿ ಜನತಾ ಜಲಧಾರೆ ಕಾರ್ಯಕ್ರಮದ ಸಮಾರೋಪದ ರೀತಿಯಲ್ಲೇ ಬೃಹತ್ ಪ್ರಮಾಣದಲ್ಲಿ ಮಾಡುವ ನಿರೀಕ್ಷೆ ಇದೆ.
ಈಗಾಗಲೇ ಪ್ರಕಟಿಸಿರುವಂತೆ ಬೆಂಗಳೂರಿನಿಂದ ಮೈಸೂರಿನವರೆಗೂ ರೋಡ್ ಷೋ ಮಾಡಲು ಉದ್ದೇಶಿಸಲಾಗಿದೆ. ಕುಂಬಳಗೂಡಿನಿಂದ ಮೈಸೂರುವರೆಗೂ ತೆರೆದ ವಾಹನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ರೋಡ್ ಷೋನಲ್ಲಿ ಭಾಗಿ ಯಾಗುವ ಸಾಧ್ಯತೆಗಳಿವೆ. ಇದರ ರೂಪು ರೇಷೆಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುತ್ತದೆ.
ಮುಳಬಾಗಿಲು ವಿಧಾನಸಭಾ ಕ್ಷೇತ್ರದಿಂದ ಆರಂಭವಾದ ಪಂಚರತ್ನ ರಥಯಾತ್ರೆಯು ಈಗಾಗಲೇ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಪೂರ್ಣಗೊಳಿಸಿದೆ. ಸಮಾರೋಪದ ನಂತರವೂ ಬೆಂಗಳೂರಿನ ಕೆಲವು ಕ್ಷೇತ್ರಗಳಲ್ಲಿ ಈ ಯಾತ್ರೆ ಮುಂದುವರೆಸಲಾಗುತ್ತದೆ.
ಅಪ್ಪು ಜನ್ಮದಿನ : ಸಮಾಧಿ ಬಳಿಗೆ ಹರಿದು ಬಂದ ಅಭಿಮಾನಿ ಸಾಗರ
ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಯಾತ್ರೆ ನಡೆಯುತ್ತಿದೆ. ಪಕ್ಷದ ಸಂಭವನೀಯ ಅಭ್ಯರ್ಥಿಗಳೊಂದಿಗೆ ಆಯಾ ಕ್ಷೇತ್ರದಲ್ಲಿ ಜನಸಂಪರ್ಕಸಭೆ, ರ್ಯಾಲಿ ಹಾಗೂ ಗ್ರಾಮ ವಾಸ್ತವ್ಯದ ಮೂಲಕ ಬಹು ನಿರೀಕ್ಷಿತ ಪಂಚರತ್ನ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟು, ಸ್ವಂತ ಬಲದ ಮೇಲೆ ಜೆಡಿಎಸ್ ಅಕಾರಕ್ಕೆ ಬರಲು ಆರ್ಶೀವಾದ ಮಾಡುವಂತೆ ಕೋರಲಾಗುತ್ತಿದೆ.
jds, pancharatna, yatra, Mysore, hd kumaraswamy,