ದೇವೇಗೌಡರ ಹುಟ್ಟುಹಬ್ಬದ ನಂತರ ಜೆಡಿಎಸ್ ಮೇಲ್ಮನೆ ಅಭ್ಯರ್ಥಿಗಳ ಆಯ್ಕೆ

ಬೆಂಗಳೂರು, ಮೇ 15- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹುಟ್ಟುಹಬ್ಬದ ನಂತರ ವಿಧಾನಸಭೆಯಿಂದ ವಿಧಾನ ಪರಿಷತ್ ಹಾಗೂ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಲಿದೆ.

ಮೇಲ್ಮನೆ ಚುನಾವಣೆಗೆ ಜೆಡಿಎಸ್‍ನಿಂದ ಸ್ರ್ಪಧಿಸಲು ಮೇಲ್ಮನೆ ಸದಸ್ಯರಾದ ರಮೇಶ್‍ಗೌಡ, ಕೆ.ವಿ.ನಾರಾಯಣಸ್ವಾಮಿ, ಮೇಲ್ಮನೆ ಮಾಜಿ ಅಧ್ಯಕ್ಷ ಟಿ.ಎ. ಶರವಣ ಆಕಾಂಕ್ಷಿಗಳಾಗಿದ್ದಾರೆ.

ರಾಜ್ಯಸಭೆಗೆ ಮತ್ತೆ ಸ್ಪರ್ಧೆ ಮಾಡಲು ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರರೆಡ್ಡಿ ಇಚ್ಛೆ ವ್ಯಕ್ತಪಡಿಸಿದ್ದು, ಮೇ 18ರಂದು ಗೌಡರ ಹುಟ್ಟುಹಬ್ಬ ನಡೆಯಲಿದೆ. ನಂತರ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳ್ಳಲಿದೆ.