ಕಾಶ್ಮೀರದಲ್ಲಿ ಐವರು ಉಗ್ರ ಕ್ರಿಮಿಗಳನ್ನು ಹೊಸಕಿಹಾಕಿದ ಸೇನೆ..!

Social Share

ಶ್ರೀನಗರ, ಜ. 30 – ಜಮು-ಕಾಶ್ಮೀರದಲ್ಲಿ ರಾತ್ರಿ ಪುಲ್ವಾಮಾ ಮತ್ತು ಬುದ್ಗಾಮ್ ಜಿಲ್ಲಾಗಳಲ್ಲಿ ನಡೆದ ಎರಡು ಪ್ರತ್ಯೇಕ ಎನ್ಕೌಂಟರ್‍ಗಳಲ್ಲಿ ಭಧ್ರತಾ ಪಡೆ ಐವರು ಭಯೋತ್ಪಾದಕರನ್ನು ಹೊಡೆದುರುಳಿಸಿದೆ. ಲಷ್ಕರ್-ಎ-ತೊಯ್ಬಾ (ಎಲïಇಟಿ) ಮತ್ತು ಜೈಶ-ಎ-ಮೊಹಮ್ಮದ್ (ಜೆಇಎಂ) ಸಂಘಟನೆಗಳಿಗೆ ಸೇರಿದ ಈ ಉಗ್ರರ ಭೇಟೆ ಸೇನೆ ಕಾರ್ಯಚರಣೆಗೆ ದೊಡ್ಡ ಯಶಸ್ಸು ಸಿಕಿದೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾದ ನೈರಾ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ನಾಲ್ವರು ಭಯೋತ್ಪಾದಕರು ಹತರಾಗಿದ್ದರೆ, ಮಧ್ಯ ಕಾಶ್ಮೀರದ ಬುದ್ಗಾಮ್ ಜಿಲ್ಲಾಯ ಚ್ರಾದ್ರ-ಇ-ಶರೀಫ್ ಪ್ರದೇಶದಲ್ಲಿ ಬಬ್ಬ ಉಗ್ರನನ್ನು ಹತ್ಯೆ ಮಾಡಲಾಗಿದೆ ಪುಲ್ವಾಮಾ ಗುಂಡಿನ ಚಕಮಕಿಯಲ್ಲಿ ಹತರಾದ ನಾಲ್ವರು ಭಯೋತ್ಪಾದಕರು ಜೆಎಂಗೆ ಸೇರಿದವರು ಎಂದು ಮೂಲಗಳು ತಿಳಿಸಿವೆ.
ಎನ್ಕೌಂಟರ್ ನಡೆದ ಸ್ಥಳದಿಂದ ಎಕೆ 56 ರೈಫಲ್,ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಜೆಇಎಂ ಕಮಾಂಡರ್ ಜಾಹಿದ್ ವಾನಿ ಸೇರಿದಂತೆ ಐವರು ಭಯೋತ್ಪಾದಕರ ಹತ್ಯೆ ಭದ್ರತಾ ಪಡೆಗಳಿಗೆ ದೊಡ್ಡ ಯಶಸ್ಸು ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ಹೇಳಿದ್ದಾರೆ.

Articles You Might Like

Share This Article