ಜ್ಯುವೆಲರಿ ಅಂಗಡಿ ಮಾಲೀಕನ ಬ್ಯಾಗಿಗೆ ಬ್ಲೇಡ್ ಹಾಕಿ, ಆಭರಣ-ಹಣ ಕದ್ದ ಕಳ್ಳರು

Social Share

ಬೆಂಗಳೂರು, ಜ.17- ಚಿನ್ನದ ಗಟ್ಟಿ ಖರೀದಿಸಲು ಚಿಕ್ಕಬಳ್ಳಾಪುರದಿಂದ ನಗರಕ್ಕೆ ಬಂದಿದ್ದ ಜ್ಯುವೆಲರಿ ಮಾಲೀಕನ ಬ್ಯಾಗಿಗೆ ಬ್ಲೇಡ್ ಹಾಕಿದ ಚೋರರು 3.57 ಲಕ್ಷ ರೂ. ಹಣ ಹಾಗೂ 28 ಗ್ರಾಂ ಆಭರಣ ಕಳ್ಳತನ ಮಾಡಿರುವ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಮೂಲದ ಮೆಹರಾಮ್ ಎಂಬುವರು ಚಿನ್ನದ ಗಟ್ಟಿ ಖರೀದಿಸಲು ಜ.10ರಂದು ಹಣದೊಂದಿಗೆ ಬೆಂಗಳೂರಿಗೆ ಬಂದಿದ್ದಾರೆ. ಅಂದು ಮಧ್ಯಾಹ್ನ ಎಸ್‍ಪಿ ರಸ್ತೆಯ ಎಚ್‍ಕೆಕೆ ರಸ್ತೆಯಲ್ಲಿ ನಡೆದುಕೊಂಡು ಇವರು ಹೋಗುತ್ತಿದ್ದಾಗ ಜನಜಂಗುಳಿ ಮಧ್ಯೆ ಖದೀಮ ಇವರ ಬ್ಯಾಗನ್ನು ಬ್ಲೇಡ್‍ನಿಂದ ಕೊಯ್ದು ಹಣ ಹಾಗೂ ಆಭರಣ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.
ಕೆಲಸ ಸಮಯದ ಬಳಿಕ ಬ್ಯಾಗ್ ನೋಡಿಕೊಂಡಾಗ ಬ್ಯಾಗ್‍ನ ಒಂದು ಬದಿ ಕೊಯ್ದಿರುವುದು ಗಮನಿಸಿ ತೆಗೆದು ನೋಡಿದಾಗ ಅದರಲ್ಲಿದ್ದ ಹಣ ಹಾಗೂ 28 ಗ್ರಾಂ ಚಿನ್ನದ ಸರ ಕಳ್ಳತನವಾಗಿರುವುದು ಕಂಡುಬಂದಿದೆ.
ತಕ್ಷಣ ಮೆಹರಾಮ್ ಅವರು ಹಲಸೂರು ಗೇಟ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆ ಸ್ಥಳದ ಸುತ್ತಮುತ್ತಲಿನ ಸಿಸಿ ಟಿವಿ ಪರಿಶೀಲಿಸಿ ಚೋರರ ಪತ್ತೆಗೆ ಬಲೆ ಬೀಸಿದ್ದಾರೆ.

Articles You Might Like

Share This Article