ಬೆಂಗಳೂರು, ಆ.4- ರಾತ್ರಿ ವೇಳೆಯಲ್ಲಿ ಮನೆಗೆ ಹಾಕಿದ್ದ ಲಾಕ್ ಮುರಿದು ಕನ್ನಗಳವು ಮಾಡುತ್ತಿದ್ದ ಇಬ್ಬರು ಹಳೆ ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿ 4 ಲಕ್ಷ ಮೌಲ್ಯದ 92 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಕೆಜಿ ಹಳ್ಳಿಯ ಸಯ್ಯದ್ ನದೀಂ (37) ಮತ್ತು ಸಾರಾಯಿ ಪಾಳ್ಯದ ಅಜಂ ಖಾನ್ (42) ಬಂಧಿತ ಆರೋಪಿಗಳು.
ಇವರಿಬ್ಬರು ಈ ಹಿಂದೆ ಕೆಜಿ ಹಳ್ಳಿ, ಆರ್ಟಿ ನಗರ, ಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಹಲವಾರು ಬಾರಿ ಮನೆಕಳವು ಮಾಡಿ ಸಿಕ್ಕಿಬಿದ್ದು ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದರೂ ಮತ್ತೆ ತಮ್ಮ ಹಳೆ ಚಾಳಿ ಮುಂದುವರಿಸಿದ್ದರು.
ಆರೋಪಿಗಳ ಬಂಧನದಿಂದ ಈ ಹಿಂದೆ ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ರಾತ್ರಿ ಕನ್ನಗಳವು ಮತ್ತು ಉಪ್ಪಾರಪೇಟೆ ಪೊಲೀಸ್ ಠಾಣೆಯ ಒಂದು ಪಿಕ್ ಪಾಕೆಟ್ ಕಳವು ಪ್ರಕರಣ ಪತ್ತೆಯಾಗಿವೆ.
ಇವರು ನೀಡಿದ ಮಾಹಿತಿ ಮೇರೆಗೆ ಪೊಲೀಸರು 4 ಲಕ್ಷ ಬೆಲೆಬಾಳುವ 92 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಬಾಣಸವಾಡಿ ಠಾಣೆ ಇನ್ಸ್ಪೆಕ್ಟರ್ ಸಂತೋಷ್ಕುಮಾರ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಸಿ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಹಿರಿಯ ಅಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.