ಜ್ಯುವೆಲ್ಸ್ ಆಫ್ ಇಂಡಿಯಾವನ್ನು ಉದ್ಘಾಟಿಸಿದ ನಟಿ ಮೇಘನಾರಾಜ್

Social Share

ಬೆಂಗಳೂರು- ನಗರದ ಸೈಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ ಅಕ್ಟೋಬರ್ 13ರಿಂದ 16 ರವರೆಗೂ ಆಯೋಜಿಸಿರುವ “ಜ್ಯುವೆಲ್ಸ್ ಆಫ್‌ ಇಂಡಿಯಾ” ನಟಿ ಮೇಘನಾ ರಾಜ್ ಅವರಿಂದ ಉದ್ಘಾಟನೆಯಾಗಿದೆ.

ಹೆಣ್ಣು ಮಕ್ಕಳಿಗೆ ಆಭರಣ ಎಂದರೆ ಅಚ್ಚುಮೆಚ್ಚು. ಅವರಿಗೆ ಬೇಕಾದ ಎಲ್ಲಾ ರೀತಿಯ ಅಭರಣಗಳು ಒಂದೇ ಕಡೆ ಸಿಗುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ನಾನು ಹಿಂದೆ ಜ್ಯುವೆಲ್ಸ್ ಆಫ್ ಇಂಡಿಯಾ ಗೆ ಬಂದಿದೆ. ಆದರೆ ನಾನೇ ಇದಕ್ಕೆ ರಾಯಭಾರಿ ಆಗುತ್ತೇನೆ ಅಂದುಕೊಂಡಿರಲಿಲ್ಲ. ಜ್ಯವೆಲ್ಸ್ ಆಫ್ ಇಂಡಿಯಾ ಆಭರಣ ಮೇಳ ಯಶಸ್ವಿಯಾಗಲಿ ಎಂದು ಮೇಘನರಾಜ್ ಹಾರೈಸಿದರು.

ಖ್ಯಾತ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಪತ್ನಿ ಶೈಲಜಾ ವಿಜಯ್ ಕುಮಾರ್, ಸಂದೀಪ್ ಬೇಕಲ್ ಸೇರಿದಂತೆ ಅನೇಕ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Articles You Might Like

Share This Article