ಅಮೆರಿಕಾದ ದ್ವೇಷಪೂರಿತ ಅಪರಾಧಗಳಿಗೆ ಸಿಖ್ಖರ, ಯಹೂದಿಗಳೇ ಟಾರ್ಗೇಟ್

Social Share

ವಾಷಿಂಗ್ಟನ್,ಫೆ.23- ಯಹೂದಿಗಳು ಹಾಗೂ ಸಿಖ್‍ರು ಅಮೆರಿಕಾದಲ್ಲಿ ನಡೆದ ದ್ವೇಷಪೂರಿತ ಅಪರಾಧಗಳಿಗೆ ಗುರಿಯಾದ ಎರಡು ಪ್ರಮುಖ ದಾರ್ಮಿಕ ಗುಂಪುಗಳಾಗಿವೆ ಎಂದು ಎಫ್‍ಬಿಐ ಅಭಿಪ್ರಾಯಪಟ್ಟಿದೆ.

2002ರಲ್ಲಿ ನಡೆದ ದ್ವೇಷಪೂರಿತ ಅಪರಾಧಗಳಲ್ಲಿ ಯಹೂದಿ ಹಾಗೂ ಸಿಖ್‍ರು ಅತಿ ಹೆಚ್ಚು ದಾಳಿಗಳಿಗೆ ಗುರಿಯಾಗಿರುವುದು ವರದಿಯಿಂದ ಬಹಿರಂಗಗೊಂಡಿದೆ ಎಂದು ಅಮೆರಿಕಾದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಸಂಸ್ಥೆ ಮಾಹಿತಿ ನೀಡಿದೆ.

ಡ್ರಂಕ್ ಅಂಡ್ ಡ್ರೈವ್ ಪತ್ತೆಗೆ ಕೇರಳ ಪೊಲೀಸರಿಂದ ವಿಶೇಷ ಅಭಿಯಾನ

2021 ರಲ್ಲಿ ಧರ್ಮಕ್ಕೆ ಸಂಬಂಧಿಸಿದ ಒಟ್ಟು 1,005 ದ್ವೇಷದ ಅಪರಾಧಗಳು ವರದಿಯಾಗಿವೆ . ಧರ್ಮ-ಆಧಾರಿತ ಅಪರಾಧದ ದೊಡ್ಡ ವರ್ಗಗಳಲ್ಲಿ ಯಹೂದಿ-ವಿರೋಧಿ ಘಟನೆಗಳು ಶೇ.31.9 ರಷ್ಟು ಹಾಗೂ ಸಿಖ್ ವಿರೋಧಿ ಘಟನೆಗಳು ಶೇ.21.3 ರಷ್ಟಿದೆ. ಧರ್ಮಾಧಾರಿತ ದ್ವೇಷದ ಅಪರಾಧಗಳಲ್ಲಿ ಶೇಕಡಾ 9.5 ರಷ್ಟು ಮುಸ್ಲಿಂ ವಿರೋಧಿಗಳು. ಕ್ಯಾಥೋಲಿಕ್ ವಿರೋಧಿ ಘಟನೆಗಳು ಘಟಿಸಿದ್ದರೆ, ಶೇ. 6.1ಮತ್ತು ಪೂರ್ವ ಆರ್ಥೊಡಾಕ್ಸï ವಿರೋಧಿ ಬಣ ಶೇ. 6.5ರಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ, ಕಾನೂನು ಜಾರಿ ಸಂಸ್ಥೆಗಳು 7,262 ಒಟ್ಟು ಘಟನೆಗಳು ಮತ್ತು 9,024 ಬಲಿಪಶುಗಳನ್ನು ವರದಿ ಮಾಡಿದ್ದು, ದ್ವೇಷದ ಅಪರಾಧಗಳು ದೇಶಾದ್ಯಂತ ಸಮುದಾಯಗಳಿಗೆ ಕಳವಳವನ್ನುಂಟುಮಾಡುತ್ತವೆ ಎಂದು ಎಫ್‍ಬಿಐ ಹೇಳಿದೆ.

2021 ರ ಎಫ್‍ಬಿಐ ಮಾಹಿತಿಯ ಪ್ರಕಾರ ಶೇ. 64.8 ಪ್ರಕರಣಗಳು ಜನಾಂಗ, ಜನಾಂಗೀಯತೆ ಹಾಗೂ ಪೂರ್ವಜ ಪ್ರೇರಿತ ಅಪರಾಧ ಪ್ರಕರಣಗಳು ನಡೆದಿರುವುದು ಅತಿದೊಡ್ಡ ಪಕ್ಷಪಾತ ಪ್ರೇರಣೆ ವರ್ಗವಾಗಿ ಮುಂದುವರೆದಿದೆ.

ಡ್ರಂಕ್ ಅಂಡ್ ಡ್ರೈವ್ ಪತ್ತೆಗೆ ಕೇರಳ ಪೊಲೀಸರಿಂದ ವಿಶೇಷ ಅಭಿಯಾನ

ಕಪ್ಪು-ವಿರೋಧಿ ಅಥವಾ ಆಫ್ರಿಕನ್ ಅಮೇರಿಕನ್ ದ್ವೇಷದ ಅಪರಾಧಗಳು 2021 ರಲ್ಲಿ ಎಲ್ಲಾ ಏಕ-ಪಕ್ಷಪಾತ ಘಟನೆಗಳಲ್ಲಿ 63.2 ಪ್ರತಿಶತದೊಂದಿಗೆ ಅತಿದೊಡ್ಡ ಪಕ್ಷಪಾತ ಘಟನೆಯ ವರ್ಗವಾಗಿ ಮುಂದುವರೆದಿದೆ. ಹೆಚ್ಚುವರಿಯಾಗಿ, ಏಷ್ಯನ್ ವಿರೋಧಿ ಘಟನೆಗಳು 2021 ರಲ್ಲಿ ವರದಿಯಾದ ಘಟನೆಗಳಲ್ಲಿ 4.3 ಪ್ರತಿಶತವನ್ನು ಪ್ರತಿನಿಧಿಸುತ್ತವೆ.

Jews, Sikhs, most, targeted, faith groups, hate, crimes, US,

Articles You Might Like

Share This Article