ಖಾಸಗಿ ಆಸ್ಪತ್ರೆಗೆ ಬೆಂಕಿ : ಇಬ್ಬರು ವೈದ್ಯರು ಸೇರಿ ಐವರ ಸಜೀವ ದಹನ

Social Share

ಧನ್‍ಬಾದ್,ಜ.28- ಖಾಸಗಿ ನರ್ಸಿಂಗ್ ಹೋಮ್‍ನಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ದುರಂತದಲ್ಲಿ ಇಬ್ಬರು ವೈದ್ಯರು ಸೇರಿದಂತೆ ಐದು ಮಂದಿ ಸುಟ್ಟು ಕರಕಲಾಗಿರುವ ಘಟನೆ ಜಾರ್ಖಂಡ್‍ನ ಧನ್‍ಬಾದ್‍ನಲ್ಲಿ ನಡೆದಿದೆ.

ಅಗ್ನಿ ದುರಂತದಲ್ಲಿ ಮೃತಪಟ್ಟವರನ್ನು ವೈದ್ಯಕೀಯ ಸಂಸ್ಥೆ ಮಾಲೀಕ ಡಾ.ವಿಕಾಸ್ ಹಜ್ರಾ, ಅವರ ಪತ್ನಿ ಡಾ. ಪ್ರೇಮಾ ಹಜ್ರಾ, ಸೋದರಳಿಯ ಸೋಹನ್ ಖಮಾರಿ ಮತ್ತು ಮನೆ ಸಹಾಯಕಿ ತಾರಾದೇವಿ ಸೇರಿದ್ದಾರೆ.

ರಾಂಚಿಯಿಂದ ಸುಮಾರು 170 ಕಿ.ಮೀ ದೂರದಲ್ಲಿರುವ ಧನ್‍ಬಾದ್‍ನ ಬ್ಯಾಂಕ್ ಮೋರ್ ಪ್ರದೇಶದಲ್ಲಿನ ನರ್ಸಿಂಗ್ ಹೋಂ-ಕಮ-ಪ್ರೈವೇಟ್ ಹೌಸ್‍ನ ಸ್ಟೋರ್ ರೂಮ್‍ನಲ್ಲಿ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡ ಅಗ್ನಿ ಈ ದುರಂತಕ್ಕೆ ಕಾರಣವಾಗಿದೆ,

ಪರೀಕ್ಷೆಯಲ್ಲಿ ನಕಲು ಮಾಡಬಹುದು, ಜೀವನದಲ್ಲಿ ಯಶಸ್ವಿಯಾಗುವುದಿಲ್ಲ : ಪ್ರಧಾನಿ ಮೋದಿ

ಸ್ಟೋರ್ ರೂಮ್‍ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಉಸಿರುಗಟ್ಟಿದ ಕಾರಣ ಮಾಲೀಕರು ಮತ್ತು ಅವರ ಪತ್ನಿ ಸೇರಿದಂತೆ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ. ಒಬ್ಬ ವ್ಯಕ್ತಿಯೂ ಗಾಯಗೊಂಡಿದ್ದಾರೆ. ಬೆಂಕಿಗೆ ಕಾರಣ ಎಂಬುದು ಇನ್ನೂ ಖಚಿತವಾಗಬೇಕಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಧನ್‍ಬಾದ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಪ್ರೇಮ್ ಕುಮಾರ್ ತಿವಾರಿ ತಿಳಿಸಿದ್ದಾರೆ.

Jharkhand, 2 Doctors, 5 Killed, Dhanbad, Nursing Home, Fire,

Articles You Might Like

Share This Article