ಜಾರ್ಖಂಡ್‍ನಲ್ಲಿ ಇಬ್ಬರಿಗೆ ಕೊರೋನಾ ವೈರಸ್ ಶಂಕೆ

Spread the love

ರಾಂಚಿ, ಫೆ.1-ಭಾರತ ಕರೋನಾ ವೈರಾಣು ಸೋಂಕಿನ ಆತಂಕ ಕವಿದಿರುವಾಗಲೇ ಜಾರ್ಖಂಡ್‍ನಲ್ಲಿ ಇಬ್ಬರು ನಿವಾಸಿಗಳಲ್ಲಿ ಡೆಡ್ಲಿ ವೈರಸ್ ಇರುವ ಶಂಕೆ ವ್ಯಕ್ತವಾಗಿದೆ ಎಂದು ವರದಿಯಾಗಿದೆ. ಪಿಎಚ್ಡಿ ಮಾಡಲು ಶಾಂಘೈಯಲ್ಲಿದ್ದ ದಂಪತಿ ಹಿಂದಿರುಗಿದ್ದರು. ಅವರಲ್ಲಿ ಸೋಂಕು ಇರುವ ಬಗ್ಗೆ ದೆಹಲಿ ವಿಮಾನ ನಿಲ್ದಾಣವು ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳನ್ನು ಎಚ್ಚರಿಸಿತ್ತು.

ಅವರಿಬ್ಬರೂ ರಾಂಚಿಯ ಕಂಕೇ ಮತ್ತು ಬರ್ಜಾ ಎಂಬ ಪ್ರದೇಶಕ್ಕೆ ಸೇರಿದವರು ಎಂದು ತಿಳಿದು ಬಂದಿದೆ.ರಾಂಚಿಗೆ ಆಗಮಿಸಿದ ನಂತರ ಅವರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪುಣೆಗೆ ಪರೀಕ್ಷೆಗೆ ಕಳುಹಿಸಲಾಗಿದ್ದು, ಅಲ್ಲಿಂದ ವರದಿ ಬಂದ ನಂತರವೇ ಅವರಲ್ಲಿ ಕೊರೊನಾ ವೈರಸ್ ಇದೆಯೇ ಅಥವಾ ಇಲ್ಲವೆ ಎಂಬುದು ದೃಢಪಡಲಿದೆ.

ಈಗಾಗಲೇ ಕೇರಳ ಮತ್ತು ಇತರ ರಾಜ್ಯಗಳಲ್ಲಿ ಶಂಕಿತ ಸೋಂಕು ಪ್ರಕರಣಗಳು ಪತ್ತೆಯಾಗಿದ್ದರೂ ಕರೋನಾ ವೈರಸ್‍ಗೆ ಇದು ಕಾರಣವಲ್ಲ ಎಂದು ದೃಢಪಟ್ಟಿದೆ.

Facebook Comments