ಜಾರ್ಖಂಡ್‍ನಲ್ಲಿ ಯಾವುದೇ ಕ್ಷಣ ಬಾಂಬ್ ಸ್ಪೋಟಿಸಬಹುದು : ರಮೇಶ್ ಬೈಸ್

Social Share

ರಾಂಚಿ,ಅ.28- ಜಾರ್ಖಾಂಡ್‍ನಲ್ಲಿ ಯಾವ ಸಂದರ್ಭದಲ್ಲಿ ಬೇಕಾದರೂ ಪರಮಾಣು ಬಾಂಬ್ ಸ್ಪೋಟಿಸಬಹುದು ಎಂಬ ರಾಜ್ಯಪಾಲ ರಮೇಶ್ ಬೈಸ್ ಅವರ ಹೇಳಿಕೆ ರಾಜಕೀಯ ಸಂಚಲನ ಸೃಷ್ಟಿಸಿದೆ. ಮುಖ್ಯಮಂತ್ರಿ ಹೇಮಂತ್ ಸೂರೆನ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನೀಡಿರುವ ಈ ಹೇಳಿಕೆ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ರಾಯ್‍ಪುರದಲ್ಲಿ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಜ್ಯಪಾಲರು, ಸಿಎಂ ಸೂರೆನ್ ಪ್ರಕರಣಕ್ಕೆ ಸಂಬಂಧಿದಂತೆ ಚುನಾವಣಾ ಆಯೋಗದಿಂದ ಎರಡನೇ ಅಭಿಪ್ರಾಯ ಕೇಳಿರುವುದಾಗಿ ತಿಳಿಸಿದ್ದಾರೆ. ಆಯೋಗದ ಅಭಿಪ್ರಾಯ ಬಂದ ನಂತರ ಸಂವಿಧಾನಬದ್ಧ ಹಕ್ಕುಗಳ ಪ್ರಕಾರ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತೀರ್ಮಾನ ಕೈಗೊಳ್ಳುತ್ತೇನೆ ಎಂದಿದ್ದಾರೆ.

ವಿಜಯೇಂದ್ರಗೆ ಸಿಎಂ ಸ್ಥಾನ ಸಿಗಲೆಂದು ಅಶ್ವಮೇಧ ಯಾಗ

ಜಾರ್ಖಂಡ್‍ನಲ್ಲಿ ಪರಮಾಣು ಬಾಂಬ್ ಸ್ಪೋಟಿಸಬಹುದು, ಏಕೆಂದರೆ ದೆಹಲಿಯಲ್ಲಿ ಪಟಾಕಿಗಳನ್ನು ನಿಷೇಧಿಸಲಾಗಿದೆ ಮತ್ತು ಜಾರ್ಖಂಡ್‍ನಲ್ಲಿ ಅಲ್ಲ ಎಂದು ಮಾರ್ಮಿಕವಾಗಿ ಮಾತನಾಡಿರುವ ಅವರು, ಮುಖ್ಯಮಂತ್ರಿ ಸೊರೇನ್ ತಮ್ಮ ಹೆಸರಿಗೆ ಕಲ್ಲು ಕ್ವಾರಿ ಗುತ್ತಿಗೆ ಪಡೆದಿರುವುದನ್ನು ಬಿಜೆಪಿ ಉಲ್ಲೇಖಿಸಿದ್ದು, ಅದು ಲಾಭದಾಯಕ ಕಚೇರಿ ಮತ್ತು ಜನಪ್ರತಿನಿಧಿ ಕಾಯ್ದೆಯ ನಿಯಮಗಳ ಉಲ್ಲಂಘನೆಯಾಗಿದೆ ಹೀಗಾಗಿ ಅವರ ವಿಧಾನಸಭಾ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಒತ್ತಾಯಿಸಿದೆ. ಈ ಕುರಿತಂತೆ ಶೀಘ್ರದಲ್ಲೇ ಒಂದು ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದಾರೆ.

ಈ ಬಗ್ಗೆ ರಾಜ್ಯಪಾಲರು ಚುನಾವಣಾ ಆಯೋಗದ ಅಭಿಪ್ರಾಯ ಕೇಳಿದ್ದರು. ಚುನಾವಣಾ ಆಯೋಗವು ಈ ವಿಷಯದ ಬಗ್ಗೆ ಎಲ್ಲಾ ಪಕ್ಷಗಳನ್ನು ಕರೆದು ಅದನ್ನು ಆಲಿಸಿತು ಮತ್ತು ಆ ನಂತರ ಆಗಸ್ಟï 25 ರಂದು ತನ್ನ ನಿರ್ಧಾರವನ್ನು ರಾಜ್ಯಪಾಲರಿಗೆ ಕಳುಹಿಸಿತು. ಈ ಬಗ್ಗೆ ರಾಜ್ಯಪಾಲರು ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದೀಗ ಈ ಕುರಿತು ಚುನಾವಣಾ ಆಯೋಗದಿಂದ ಎರಡನೇ ಅಭಿಪ್ರಾಯ ಕೇಳಿದ್ದಾರೆ.

ನವರಂಗಿ ಆಟವಾಡಲು ಹೋಗಿ ಪೊಲೀಸ್ ಅತಿಥಿಯಾದ ಬಾಲಿವುಡ್ ನಿರ್ಮಾಪಕ

ರಾಯ್‍ಪುರದಲ್ಲಿ ಖಾಸಗಿ ವಾಹಿನಿಯೊಂದರೊಂದಿಗಿನ ಸಂವಾದದಲ್ಲಿ ರಾಜ್ಯಪಾಲರು ನಾನು ಸಾಂವಿಧಾನಿಕ ಹುದ್ದೆಯಲ್ಲಿದ್ದೇನೆ. ನಾನು ಸಂವಿಧಾನವನ್ನು ಅನುಸರಿಸಬೇಕು. ನನ್ನ ನಿರ್ಧಾರವನ್ನು ದ್ವೇಷದಿಂದ ತೆಗೆದುಕೊಳ್ಳಲಾಗಿದೆ ಎಂದು ಯಾರೂ ನನ್ನನ್ನು ದೂಷಿಸಲು ನಾನು ಬಯಸುವುದಿಲ್ಲ. ಉದ್ದೇಶವಾಗಿದ್ದರೆ ಸರ್ಕಾರವನ್ನು ಅಸ್ಥಿರಗೊಳಿಸಲು, ಚುನಾವಣಾ ಆಯೋಗದ ಶಿಫಾರಸಿನ ಮೇರೆಗೆ ಅದು ನಿರ್ಧಾರವನ್ನು ತೆಗೆದುಕೊಳ್ಳಬಹುದಿತ್ತು. ಅದಕ್ಕಾಗಿಯೇ ನಾನು ಎರಡನೇ ಅಭಿಪ್ರಾಯವನ್ನು ಕೇಳಿದೆ.

Articles You Might Like

Share This Article