ರಾಂಚಿ,ಫೆ.22- ದೇಶದೆಲ್ಲೆಡೆ ಮತ್ತೆ ಹಕ್ಕಿ ಜ್ವರದ ಭೀತಿ ಕಾಡಲಾರಂಭಿಸಿದೆ. ಜಾರ್ಖಾಂಡ್‍ನ ಬೊಕಾರೊ ಜಿಲ್ಲೆಯ ಸರ್ಕಾರ ಕೋಳಿ ಫಾರಂನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವುದರಿಂದ ಅಲ್ಲಿನ ಸರ್ಕಾರ ಅಲರ್ಟ್ ಆಗಿದೆ.
ಇದರ ಬೆನ್ನಲ್ಲೆ ದೇಶದೆಲ್ಲೆಡೆ ಹಕ್ಕಿ ಜ್ವರ ಹರಡುವ ಭೀತಿ ಕಾಡಲಾರಂಭಿಸಿರುವುದರಿಂದ ಎಲ್ಲೆಡೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಬೊಕಾರೊ ಜಿಲ್ಲೆಯ ಲೋಹಾಂಚಲ್‍ನಲ್ಲಿರುವ ಫಾರ್ಮ್‍ನಲ್ಲಿ ‘ಕಡಕ್‍ನಾಥ’ ಎಂದು ಜನಪ್ರಿಯವಾಗಿರುವ ಕೋಳಿಯ ಪ್ರೋಟೀನ್ ಭರಿತ ತಳಿಗಳಲ್ಲಿ ಹೆಚ್5ಎನ್1 ರೂಪಾಂತರಿ ವೈರಸ್ ಪತ್ತೆಯಾಗಿದೆ.
ದೆಹಲಿ ಡಿಸಿಎಂ ವಿರುದ್ಧ ಸಿಬಿಐ ತನಿಖೆಗೆ ಗ್ರೀನ್ ಸಿಗ್ನಲ್
ಲೋಹಂಚಲ್‍ನಲ್ಲಿರುವ ಸರ್ಕಾರಿ ಕೋಳಿ ಫಾರಂನಲ್ಲಿ ಕಡಕ್‍ನಾಥ್ ಕೋಳಿಗಳು ಹಕ್ಕಿ ಜ್ವರದಿಂದ ಸಾವನ್ನಪ್ಪಿವೆ, ಪ್ರಯೋಗಾಲಯದಿಂದ ಬಂದ ವರದಿಯಂತೆ… ಒಂದು ಕಿಮೀ ವ್ಯಾಪ್ತಿಯ ಪ್ರದೇಶಗಳನ್ನು ಹಕ್ಕಿಜ್ವರ ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ ಮತ್ತು 10 ಕಿಮೀ ವ್ಯಾಪ್ತಿಯ ಪ್ರದೇಶಗಳನ್ನು ಕಣ್ಗಾವಲು ವಲಯವೆಂದು ಘೋಷಿಸಲಾಗಿದೆ.
ಈ ಪ್ರದೇಶಗಳಲ್ಲಿ ಕೋಳಿ ಮತ್ತು ಬಾತುಕೋಳಿ ಇತ್ಯಾದಿ ಪ್ರಾಣಿ ಮಾಂಸ ಮಾರಾಟವನ್ನು ನಿಷೇಧಿಸಲಾಗುವುದು ಎಂದು ಬೊಕಾರೊ ಜಿಲ್ಲಾಡಳಿತ ಹೊರಡಿಸಿದ ಅಧಿಕೃತ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಹಕ್ಕಿಜ್ವರ ಇತರ ಪ್ರದೇಶಗಳಿಗೆ ಹರಡದಂತೆ ರಾಜ್ಯವು ಅಲರ್ಟ್ ಆಗಿದೆ ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅರುಣ್ ಕುಮಾರ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ. ಬೊಕಾರೊ ಡೆಪ್ಯುಟಿ ಕಮಿಷನರ್ ಕುಲದೀಪ್ ಚೌಧರಿ ಪ್ರಕಾರ, ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಜಾಗರೂಕರಾಗಿರಲು ವೈದ್ಯಕೀಯ ತಂಡವನ್ನು ರಚಿಸಲಾಗಿದೆ ಮತ್ತು ದೊಡ್ಡ ಕೋಳಿ ಸಾಕಣೆ ಕೇಂದ್ರಗಳ ಕೋಳಿ ಮತ್ತು ಬಾತುಕೋಳಿಗಳ ಮಾದರಿಗಳನ್ನು ಸಂಗ್ರಹಿಸಲಾಗಿದೆ.
ರಾಮನಗರದಲ್ಲಿ ರಾಮಮಂದಿರ ನಿರ್ಮಾಣವೇ ಬಿಜೆಪಿ ಚುನಾವಣಾ ಅಸ್ತ್ರ
ಇದಲ್ಲದೆ, ಸೋಂಕಿತ ವಲಯದಲ್ಲಿ ವಾಸಿಸುವ ಜನರ ಮಾದರಿಗಳನ್ನು ಸಂಗ್ರಹಿಸಲು ವೈದ್ಯಕೀಯ ತಂಡವನ್ನು ಕೇಳಲಾಗಿದೆ, ಹಕ್ಕಿ ಜ್ವರ ಸೋಂಕಿತರಿಗೆ ಚಿಕಿತ್ಸೆಗಾಗಿ ಸದರ್ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಅನ್ನು ಸ್ಥಾಪಿಸಲಾಗಿದೆ.
ಹಕ್ಕಿಜ್ವರದ ಸೋಂಕಿನ ಲಕ್ಷಣಗಳು ತೀವ್ರವಾದ ಬೆನ್ನು ನೋವು, ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಶೀತ ಮತ್ತು ಕಫದಲ್ಲಿ ರಕ್ತವನ್ನು ಒಳಗೊಂಡಿರುತ್ತದೆ ಅಂತಹ ಲಕ್ಷಣ ಕಂಡು ಬಂದವರು ತಕ್ಷಣ ವೈದ್ಯರನ್ನು ಭೇಟಿಯಾಗಿ ತಪಾಸಣೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿದೆ.
Jharkhand, alert, bird flu, cases, confirmed, Bokaro, poultry farm,