ಜಮ್ಮು,ಫೆ.8- ಧಾಂಗ್ರಿ ಗ್ರಾಮದ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರು ರಜೌರಿ ಜಿಲ್ಲೆಯಲ್ಲಿ ಅಡಗಿಕೊಂಡಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದು, ಅವರ ಬಗ್ಗೆ ಮಾಹಿತಿ ನೀಡುವವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಮಂಗಳವಾರ ರಾತ್ರಿ ಹೊರಡಿಸಿರುವ ಪ್ರಕಟಣೆಯಲ್ಲಿ, ಭಯೋತ್ಪಾದಕರಿಗೆ ಸಹಾಯ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಜನವರಿ 1 ರಂದು ರಾಜೌರಿಯ ಧಾಂಗ್ರಿ ಗ್ರಾಮದ ಮೇಲೆ ಭಯೋತ್ಪಾದಕರು ದಾಳಿ ನಡೆಸಿ, ಏಳು ಜನರನ್ನು ಹತ್ಯೆ ಮಾಡಿದ್ದರು, 14 ಮಂದಿ ಗಾಯಗೊಂಡಿದ್ದರು. ಮತ್ತೂ ಕೆಲವು ಮನೆಗಳ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರಿಂದ ಇಬ್ಬರು ಸಹೋದರರು ಸೇರಿದಂತೆ ಐದು ಜನರು ಸಾವನ್ನಪ್ಪಿದ್ದರು. ಸುಧಾರಿತ ಸ್ಪೋಟಕ ಸಾಧನ (ಐಇಡಿ) ಎಸೆದಿದ್ದರಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದರು.
ಮತ್ತೆ ರೆಪೊ ದರ ಏರಿಸಿದ ಆರ್‌ಬಿಐ, ಹೆಚ್ಚಾಗಲಿದೆ ಬ್ಯಾಂಕ್ ಬಡ್ಡಿ
ಭಯೋತ್ಪಾದಕರನ್ನು ಪತ್ತೆಹಚ್ಚುವಲ್ಲಿ ಭದ್ರತಾ ಏಜೆನ್ಸಿಗಳ ವೈಫಲ್ಯವನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಮುಂದಿನ 15 ದಿನಗಳಲ್ಲಿ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಭದ್ರತಾ ಸಂಸ್ಥೆಗಳಿಗೆ ಸಾಧ್ಯವಾಗದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದರ ಬೆನ್ನಲ್ಲೆ ಪೊಲೀಸರು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಧಾಂಗ್ರಿ ಗ್ರಾಮದಲ್ಲಿ ದಾಳಿ ಸಂಚು ರೂಪಿಸಿದ ಭಯೋತ್ಪಾದಕರು ಇನ್ನೂ ರಾಜೌರಿಯ ಬೆಟ್ಟಗಳಲ್ಲಿ ಅಡಗಿಕೊಂಡಿದ್ದಾರೆ ಮತ್ತು ಅವರಿಂದ ಮತ್ತಷ್ಟು ಭಯೋತ್ಪಾದನಾ ಚಟುವಟಿಕೆಗಳು ನಡೆಯಬಹುದು ಎಂಬ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.
ಕೆಲವರು ಪೊಲೀಸರು ಮತ್ತು ಭದ್ರತೆ ಪಡೆಗಳ ಚಲನವಲನದ ಬಗ್ಗೆ ಭಯೋತ್ಪಾದಕರಿಗೆ ಮಾಹಿತಿ ನೀಡಿ ನೆರವಾಗುತ್ತಿದ್ದಾರೆ. ಪೊಲೀಸರು ಎಲ್ಲಾ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದಾರೆ. ಭಯೋತ್ಪಾದಕರ ಬೆಂಬಲಿಗರ ವಿರುದ್ಧ ಶೀಘ್ರವೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಚುನಾವಣೆಗೆ ಬಿಜೆಪಿ ತಯಾರಿ: ಪ್ರಣಾಳಿಕೆ, ಪ್ರಚಾರಕ್ಕಾಗಿ ಉಸ್ತುವಾರಿಗಳ ನೇಮಕ
ಭಯೋತ್ಪಾದಕರ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಹಾಗೂ ಇತರೆ ಬಹುಮಾನ ನೀಡಲಾಗುವುದು, ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಪೊಲೀಸರು ಸ್ಪಷ್ಟ ಪಡಿಸಿದ್ದಾರೆ.
ಜನರು ಜಾಗೃತರಾಗಿರಲು ಮನವಿ ಮಾಡಲಾಗಿದ್ದು, ಶಾಂತಿ ಕಾಪಾಡಲು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ತಿಳಿಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಧಂಗ್ರಿ ದಾಳಿಯ ತನಿಖೆ ನಡೆಸುತ್ತಿದೆ. ದಾಳಿಕೋರರನ್ನು ಪತ್ತೆಹಚ್ಚಲು ಪೊಲೀಸರು ಮತ್ತು ಭದ್ರತಾ ಪಡೆಗಳು ರಾಜೌರಿಯಲ್ಲಿ ಭಾರೀ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಧಿಕಾರಿಗಳ ಪ್ರಕಾರ ಕಳೆದ ಐದು ವಾರಗಳಲ್ಲಿ 120 ಕ್ಕೂ ಹೆಚ್ಚು ಕಾರ್ಯಾಚರಣೆಗಳನ್ನು ನಡೆಸಲಾಗಿದೆ.
J&K, Police, Announces, Rs 10 Lakh, Reward, Information, Dangri Attack, Terrorists,