ಜ್ಞಾನಭಾರತಿ ವಿವಿ ಆವರಣದಲ್ಲಿ ಚಿರತೆ ಪ್ರತ್ಯಕ್ಷ

Social Share

ಬೆಂಗಳೂರು,ಜ.12- ಜ್ಞಾನಭಾರತಿ ವಿವಿ ಆವರಣದಲ್ಲಿ ಚಿರತೆ ಪ್ರತ್ಯಕ್ಷವಾಗಿರುವುದು ಆತಂಕವನ್ನು ಇಮ್ಮಡಿಗೊಳಿಸಿದೆ. ವಿವಿ ಆವರಣದಲ್ಲಿರುವ ಎನ್‍ಎಸ್‍ಎಸ್ ಭವನದ ಹಿಂಭಾಗದಲ್ಲಿ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ವಾಯು ವಿಹಾರಿಗಳು ವಿವಿ ಆಡಳಿತ ಮ ಂಡಳಿಯ ಗಮನಕ್ಕೆ ತಂದಿದ್ದರು.

ಹೀಗಾಗಿ ವಿದ್ಯಾರ್ಥಿಗಳು ಎಚ್ಚರ ವಹಿಸುವಂತೆ ವಿವಿ ಆಡಳಿತ ಮನವಿ ಮಾಡಿಕೊಂಡಿದೆ. ಎನ್‍ಎಸ್‍ಎಸ್ ಭವನದ ಹಿಂಭಾಗ ನೂರಾರು ಎಕರೆ ವಿಸ್ತೀರ್ಣದ ಕಾಡು ಇದೆ. ಹೀಗಾಗಿ ಆ ಕಾಡಿನಲ್ಲಿ ಚಿರತೆ ಇರಬಹುದು ಎಂದು ಶಂಕಿಸಲಾಗಿದೆ.

ಎರಡು ದಿನಗಳ ಹಿಂದೆ ಎನ್‍ಎಸ್‍ಎಸ್ ಭವನದ ಸಮೀಪ ವಾಯ ವಿಹಾರ ನಡೆಸುತ್ತಿದ್ದವರು ಚಿರತೆ ನೋಡಿದ್ದಾರೆ ಎನ್ನಲಾಗಿದೆ. ಈ ಕುರಿತಂತೆ ವಿವಿ ಆಡಳಿತಕ್ಕೆ ಸುದ್ದಿ ರವಾನಿಸಿರುವುದರಿಂದ ವಿವಿ ಆವರಣದಲ್ಲಿ ಎಚ್ಚರಿಕೆ ವಹಿಸಲಾಗಿದೆ.

ನಾವು ಒಟ್ಟಾದರೆ ಜಾಗತಿಕ ಅಭಿವೃದ್ಧಿಯ ಚಾಲಕರಾಗಲು ಸಾಧ್ಯ: ಪ್ರಧಾನಿ ಮೋದಿ

ವಿವಿ ಆವರಣದಲ್ಲಿರುವ ಹಾಸ್ಟಲ್ ವಿದ್ಯಾರ್ಥಿಗಳು ಬೆಳಗಿನ ಜಾವ ಹಾಗೂ ರಾತ್ರಿ ವೇಳೆ ಓಡಾಡುತ್ತಾರೆ. ಇದರ ಜತೆಗೆ ಪ್ರತಿನಿತ್ಯ ನೂರಾರು ಮಂದಿ ವಿವಿ ಆವರಣದಲ್ಲಿ ವಾಯು ವಿಹಾರ ನಡೆಸುತ್ತಾರೆ. ಹೀಗಾಗಿ ವಿದ್ಯಾರ್ಥಿಗಳು ಹಾಗೂ ವಾಯು ವಿಹಾರಿಗಳು ಎಚ್ಚರಿಕೆಯಿಂದ ಓಡಾಡಬೇಕು. ಒಬ್ಬಂಟಿಯಾಗಿ ನಿರ್ಜನ ಪ್ರದೇಶದಲ್ಲಿ ಓಡಾಡಬಾರದು ಎಂದು ವಿವಿ ಆಡಳಿತ ಮನವಿ ಮಾಡಿಕೊಂಡಿದೆ.

ಮೆಟ್ರೋ ಪಿಲ್ಲರ್ ಕುಸಿತದ ವರದಿ ಮೂರ್ನಾಲ್ಕು ದಿನಗಳಲ್ಲಿ ಬಹಿರಂಗ

ವಾಯು ವಿಹಾರಿಗಳ ಹೇಳಿಕೆ ಆಧಾರದ ಮೇಲೆ ವಿವಿ ಆವರಣದಲ್ಲಿ ಚಿರತೆ ಓಡಾಡಿಕೊಂಡಿದೆ ಎಂದು ನಂಬಲಾಗಿದೆ. ಆದರೆ, ಇದುವರೆಗೂ ಯಾವುದೇ ಆರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಚಿರತೆ ಇರುವಿಕೆ ಬಗ್ಗೆ ಖಚಿತ ಪಡಿಸಿಲ್ಲ.

ಈ ಹಿಂದೆ ಕೆಂಗೇರಿ ಆಸುಪಾಸಿನಲ್ಲಿ ಕಾಣಿಸಿಕೊಂಡಿದ್ದ ಚಿರತೆ ಇದೀಗ ವಿವಿ ಆವರಣದ ಎನ್‍ಎಸ್‍ಎಸ್ ಭವನದ ಹಿಂಭಾಗದಲ್ಲಿರುವ ಕಾಡಿನಲ್ಲಿರಬಹುದು ಎಂದು ಶಂಕಕಿಸಲಾಗಿದೆ.

Jnana Bharathi, University, campus, Bengaluru, Leopard,

Articles You Might Like

Share This Article