ಜೆಎನ್‍ಯು ವಿವಿ ಆವರಣದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ

ನವದೆಹಲಿ,ಮೇ.29-   ಅಖಿಲ ಭಾರತ ವಿದ್ಯಾರ್ಥಿ ಸಂಘದ ಸದಸ್ಯನೊಬ್ಬ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕ್ಯಾಂಪಸ್‍ನಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿದ್ದಾನೆ. ಸಂಘದ ಸದಸ್ಯ ನನ್ನ ಅನುಮತಿ ಇಲ್ಲದೆ ಅಂಗಾಗಳನ್ನು ಸ್ಪರ್ಶಿಸಿದ್ದೇ ಅಲ್ಲದೆ ಹಿಂದಿನಿಂದ ಬಲವಂತವಾಗಿ ತಬ್ಬಿಕೊಂಡು ಅಸಹ್ಯಕರವಾಗಿ ವರ್ತಿಸಿದ್ದಾನೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ.

ಏತನ್ಮಧ್ಯೆ, ಲೈಂಗಿಕ ಕಿರುಕುಳದ ದೂರನ್ನು ಲಿಂಗ ಸಂವೇದನೆ ಸಮಿತಿಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದ್ದು, ಆರೋಪಕ್ಕೆ ಗುರಿಯಾಗಿರುವ ವ್ಯಕ್ತಿಯನ್ನು ಸಂಘದ ಚಟುವಟಿಕೆಗಳಿಂದ ದೂರ ಉಳಿಯುವಂತೆ ಸೂಚನೆ ನೀಡಲಾಗಿದೆ. ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ದೂರಿನ ಬಗ್ಗೆ ಮಾಹಿತಿ ನೀಡಲು ಜೆಎನ್‍ಯುನ ಐಸಿಸಿ ಅಧ್ಯಕ್ಷೆ ಪೂನಂ ಕುಮಾರಿ ನಿರಾಕರಿಸಿದ್ದಾರೆ.

ನಾವು ಅನೇಕ ದೂರುಗಳನ್ನು ಸ್ವೀಕರಿಸುತ್ತೇವೆ. ಈ ದೂರುಗಳ ಬಗ್ಗೆ ನಾವು ಏನನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ ಏಕೆಂದರೆ ಇದು ನಿಯಮಕ್ಕೆ ವಿರುದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ ಮಾತ್ರವಲ್ಲಿ ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಸುೀಧಿರ್ ಪ್ರತಾಪ್ ಸಿಂಗ್ ಕೂಡ ಇಂತಹ ಯಾವುದೇ ಘಟನೆಯ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಲೈಂಗಿಕ ಕಿರುಕುಳದ ದೂರಿನ ಬಗ್ಗೆ ಸಂಸ್ಥೆಗೆ ತಿಳಿದು ಬಂದಿದೆ. ನಮ್ಮ ಸದಸ್ಯರೊಬ್ಬರ ವಿರುದ್ಧದ ದೂರಿನ ಬಗ್ಗೆ ನಮಗೆ ತಿಳಿದ ತಕ್ಷಣ, ನಾವು ಅದನ್ನು ತಕ್ಷಣವೇ ಅಂಗೀಕರಿಸಿದ್ದೇವೆ ಮತ್ತು ನಮ್ಮ ಸಂಸ್ಥೆಯಲ್ಲಿ ಲಭ್ಯವಿರುವ ಪರಿಹಾರದ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ. ಅದು ಎಐಎಸ್‍ಐನ ಕಾರ್ಯದರ್ಶಿ ಮಧುರಿಮಾ ಕುಂದು ಅವರು ತಿಳಿಸಿದ್ದಾರೆ.