ಬೆಂಗಳೂರು,ಜ.27- ಕೆಎಂಎಫ್‍ನಲ್ಲಿ ವಿವಿಧ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ ಹಣ ಪಡೆದು ನಕಲಿ ಆದೇಶ ಪ್ರತಿ ನೀಡಿ ವಂಚಿಸುತ್ತಿದ್ದ ಚಿತ್ರ ನಿರ್ಮಾಪಕನೊಬ್ಬನನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರಕಾಶ್ ಬಂಧಿತ ಚಿತ್ರ ನಿರ್ಮಾಪಕ. ಈತ ಚಿಕ್ಕಬಳ್ಳಾಪುರ ಮೂಲದ ಚರಣ್‍ರಾಜ್ ಎಂಬುವರಿಗೆ ಕೆಲಸ ಕೊಡಿಸುವುದಾಗಿ ಹೇಳಿ ಅವರಿಂದ 10 ಲಕ್ಷ ರೂ. ಪಡೆದು ನಂತರ ತಾಂತ್ರಿಕ ಅಧಿಕಾರಿ ಹುದ್ದೆಯ ನೇಮಕಾತಿ ಆದೇಶದ ನಕಲಿ ಪ್ರತಿ ನೀಡಿ ಕಳುಹಿಸಿದ್ದನು.
ಎಂಡಿ, ನಿರ್ದೇಶಕರುಗಳ ನಕಲಿ ಸಹಿ ಮಾಡಿ ಬಿಎಂಟಿಸಿ ಸಂಸ್ಥೆಗೆ ಮೋಸ
ಈ ಬಗ್ಗೆ ಕೆಎಂಎಫ್ ಅಧಿಕಾರಿಗಳು ಆಡುಗೋಡಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಪ್ರಕಾಶ್‍ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
job, Fraud, Producer, arrested,