ಸ್ಯಾನ್ ಡಿಯಾಗೋ (ಅಮೆರಿಕ ), ಮಾ. 14 : ಚೀನಾ ಪ್ರಭಾವದ ಬಗ್ಗೆ ಹೆಚ್ಚುತ್ತಿರುವ ಕಳವಳದ ನಡುವೆ ಆಸ್ಟ್ರೇಲಿಯಾಕ್ಕೆ ತನ್ನ ನೌಕಾಪಡೆ ಆಧುನೀಕರಿಸಲು ಪರಮಾಣು ಚಾಲಿತ ಅತ್ಯಾಧುನಿಕ ಜಲಾಂತರಗಾಮಿ ಸಮರ ನೌಕೆಗಳನ್ನು ನೀಡಲಿರುವುದಾಗಿ ಅಮೆರಿಕ ಅಧ್ಯಕ್ಷ ಬಿಡೆನ್ ಘೋಸಿದ್ದಾರೆ.
ಆಸ್ಟ್ರೇಲಿಯನ್ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಮತ್ತು ಬ್ರಿಟಿಷ್ ಪ್ರಧಾನ ಮಂತ್ರಿ ರಿ ಸುನಕ್ ಅವರೊಂದಿಗೆ ಸಭೆ ನಡೆಸಲು ಸ್ಯಾನ್ ಡಿಯಾಗೋಗೆ ತೆರಳುವ ವೇಳೆ ಬ್ರಿಟನ್ ಅವರು ಅಗ್ಯೂಸ್ ಎಂಬ ಯೋಜನೆ ಅಡಿ ಈ ಪರಮಾಣು ಚಾಲಿತ ಜಲಾಂತರಗಾಮಿ ನೌಕೆಗಳನ್ನು ನೀಡಿ ಆಸ್ಟ್ರೇಲಿಯಾವನ್ನು ಶಕ್ತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ,
ಈ ನೌಕೆ ಹೆಚ್ಚು ರಹಸ್ಯವಾಗಿರುತ್ತವೆ ಮತ್ತು ಚೀನಾ ಸೇನೆಗೆ ಪ್ರತಿಭಾರವಾಗಿದೆ ,ಪರಮಾಣು ಚಾಲಿತವಾಗಿವೆ ಆದರೆ ಪರಮಾಣು ಸಶಸ್ತ್ರವಲ್ಲ ಎಂದು ಒತ್ತಿ ಹೇಳಲಾಗಿದೆ. ಚೀನಾದೊಂದಿಗಿನ ಉದ್ವಿಗ್ನತೆ ನಡುವೆ ಇದು ಅಗತ್ಯವಾಗಿದೆ ಎಂದು ಪ್ರತಿಪಾದಿಸಲಾಗಿದೆ.
ಹೃದಯ ಹಾಗೂ ಆರೋಗ್ಯಕ್ಕೆ ಡೇಂಜರ್ ಎಲೆಕ್ಷನ್ ಟೆನ್ಷನ್
ಇದು ಇತಿಹಾಸಿಕ ಒಪ್ಪಂದವಾಗಿದೆ ಆಸ್ಟ್ರೇಲಿಯಾದ ರಕ್ಷಣಾ ಸಾಮಥ್ರ್ಯದಲ್ಲಿ ಅತಿದೊಡ್ಡ ಹಿರಿಮೆ ಎಂದು ಅಲ್ಬನೀಸ್ ಹೇಳಿದರು.65 ವರ್ಷಗಳಲ್ಲಿ ಇದು ಮೊದಲ ಬಾರಿಗೆ ಅಮೆರಿಕ ತನ್ನ ಪರಮಾಣು ತಂತ್ರಜ್ಞಾನವನ್ನು ಹಂಚಿಕೊಂಡಿದೆ ಮತ್ತು ಅದಕ್ಕಾಗಿ ನಿಮಗೆ ಧನ್ಯವಾದಗಳು ಎಂದು ಅವರು ಹೇಳಿದರು.
ಬ್ರಿಟನ್ ಪ್ರಧಾನಿ ಸುನಕ್ ಈ ಒಪ್ಪಂದವನ್ನು ತಲೆಮಾರುಗಳಲ್ಲಿ ಅತ್ಯಂತ ಮಹತ್ವದ ಬಹುಪಕ್ಷೀಯ ರಕ್ಷಣಾ ಪಾಲುದಾರಿಕೆ ಎಂದು ಕರೆದಿದ್ದಾರೆ ತನ್ನ ಸ್ವಂತ 60 ವರ್ಷಗಳ ಅನುಭವವನ್ನು ಆಸ್ಟ್ರೇಲಿಯಾದ ಎಂಜಿನಿಯರ್‍ಗಳೊಂದಿಗೆ ಹಂಚಿಕೊಳ್ಳುತ್ತದೆ ಆದ್ದರಿಂದ ಅವರು ತಮ್ಮದೇ ಆದ ನೌಕೆಯನ್ನು ನಿರ್ಮಿಸಬಹುದುಎಂದು ಅವರು ಹೇಳಿದರು.
ಮಹಿಳಾ ಸಿಬ್ಬಂದಿಯೊಂದಿಗೆ ಸಿಕ್ಕಿ ಬಿದ್ದ ಐಪಿಎಸ್ ಅಧಿಕಾರಿ
ಮೂವರು ನಾಯಕರು ಮೊದಲು ಜಂಟಿ ಹೇಳಿಕೆಯಲ್ಲಿ, ತಮ್ಮ ದೇಶಗಳು ಇಂಡೋ-ಪೆಸಿಫಿಕ್ ಸೇರಿದಂತೆ ವಿಶ್ವದಾದ್ಯಂತ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉಳಿಸಿಕೊಳ್ಳಲು ದಶಕಗಳಿಂದ ಕೆಲಸ ಮಾಡಿದೆ ಎಂದು ಹೇಳಿದರು.
Joe Biden, announces, nuclear, powered, submarines, Australia,